ನವದೆಹಲಿ (ಅ.30): 2020ರ ಸಾಲಿನಲ್ಲಿ ದೇಶದಲ್ಲಿ (India) ಪ್ರತಿನಿತ್ಯ 418 ಮಂದಿಯಂತೆ ಸರಾಸರಿ 1,53,052 ಮಂದಿ ಆತ್ಮಹತ್ಯೆಗೆ (Suicide) ಶರಣಾಗುತ್ತಿದ್ದಾರೆ ಎಂಬ ವಿಚಾರ ರಾಷ್ಟ್ರೀಯ ಅಪರಾಧ ದಾಖಲೆ( NCRB)ಗಳ ವಾರ್ಷಿಕ ವರದಿಯಿಂದ ತಿಳಿದು ಬಂದಿದೆ.
ಹೆಚ್ಚು ಆತ್ಮಹತ್ಯೆಗೆ ಶರಣಾಗುವ ರಾಜ್ಯಗಳ (States) ಪಟ್ಟಿಯಲ್ಲಿ 12,259 ಸಾವು ದಾಖಲಿಸಿರುವ ಕರ್ನಾಟಕ (karnataka) 5ನೇ ಸ್ಥಾನದಲ್ಲಿದೆ ಹಾಗೂ 19,909 ಆತ್ಮಹತ್ಯೆ ಕೇಸ್‌ನೊಂದಿಗೆ ನೆರೆಯ ಮಹಾರಾಷ್ಟ್ರ (Maharashtra) ಅಗ್ರ ಸ್ಥಾನದಲ್ಲಿದೆ.
undefined
ಉಳಿದಂತೆ ತಮಿಳುನಾಡು (Tamilnadu) 16,883, ಮಧ್ಯಪ್ರದೇಶ 14,578, ಪಶ್ಚಿಮ ಬಂಗಾಳದಲ್ಲಿ (West bengal) 13,103 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತನ್ಮೂಲಕ ದೇಶದಲ್ಲಿ ದಾಖಲಾಗಿರುವ ಒಟ್ಟಾರೆ ಸೂಸೈಡ್‌ಗಳ ಪೈಕಿ ಈ ಐದು ರಾಜ್ಯಗಳಲ್ಲೇ ಶೇ.50.1ರಷ್ಟುಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇನ್ನು ಶೇ.49.9ರಷ್ಟುಮಂದಿ 23 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ದೇಶದ ಶೇ.16.9ರಷ್ಟುಅಂದರೆ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾದವರ ಪ್ರಮಾಣ ಕೇವಲ 3.1ರಷ್ಟಿದೆ.
ರಾಜ್ಯ ಸಾವು
ಮಹಾರಾಷ್ಟ್ರ 19909
ತಮಿಳುನಾಡು 16,883
ಮಧ್ಯಪ್ರದೇಶ 14,578
ಪಶ್ಚಿಮ ಬಂಗಾಳ 13,103
ಕರ್ನಾಟಕ 12,259
ಕೊರೋನಾವೂ ಕಾರಣ
ಕೊರೋನಾ ಸೋಂಕು(Cvid 19) ತಗುಲಿ ಸಾವಿರಾರು ಮಂದಿ ಜೀವ ಕಳೆದುಕೊಂಡದ್ದು ಒಂದು ಕಡೆಯಾದರೆ, ಈ ಮಹಾಮಾರಿ ತಂದಿಟ್ಟ ಆರ್ಥಿಕ ಸಂಕಷ್ಟ(Economic Crisis) ಮತ್ತು ಮಾನಸಿಕ ಖಿನ್ನತೆಯಿಂದಾಗಿ(Mental Stress) ರಾಜ್ಯದಲ್ಲಿ ಅನೇಕರು ತಮ್ಮ ಜೀವವನ್ನೇ ಬಲಿಕೊಡುತ್ತಿದ್ದಾರೆ.
ಸೋಂಕಿನ ಭೀತಿ, ತಮ್ಮವರನ್ನು ಕಳೆದುಕೊಂಡ ನೋವು, ಕೃಷಿ-ಉದ್ಯಮದಲ್ಲಿ(Agriculture) ಆದ ನಷ್ಟ, ಕೆಲಸ ಕಳೆದುಕೊಂಡು ಬದುಕು ನಡೆಸುವುದು ಹೇಗೆನ್ನುವ ಚಿಂತೆ, ಖಿನ್ನತೆಯಿಂದಾಗಿ ರಾಜ್ಯದಲ್ಲಿ ಈಗಾಗಲೇ ಕನಿಷ್ಠ 36 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲೂ ಅತ್ಯಂತ ಕಳವಳಕಾರಿ ವಿಷಯ ಎಂದರೆ, ಸಾಮಾಜಿಕ ಹೀಯಾಳಿಕೆ, ದುಡಿಯುವ ಸದಸ್ಯರನ್ನು ಕಳೆದುಕೊಂಡ ಇಡೀ ಕುಟುಂಬಗಳೇ ಇತ್ತೀಚೆಗೆ ಸಾವಿನತ್ತ ಮುಖ ಮಾಡುತ್ತಿವೆ.
ಕೋವಿಡ್‌ನಿಂದಾಗಿ (Covid) ಗಂಡನನ್ನು ಕಳೆದುಕೊಂಡ ಗದಗದ ಮಹಿಳೆಯೊಬ್ಬಳು ಕೆಲದಿನಗಳ ಹಿಂದೆ ತಮ್ಮ ಮೂವರು ಮಕ್ಕಳ ಜತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯ ನೆನಪು ಮಾಸುವ ಮುನ್ನವೇ ಇದೀಗ ಬೆಂಗಳೂರಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕರೊಬ್ಬರ ಪತ್ನಿ ತನ್ನಿಬ್ಬರು ಮಕ್ಕಳ ಜತೆ ಸಾವಿಗೆ ಶರಣಾಗಿದ್ದಾರೆ. ಇದೇ ರೀತಿ ಕೋವಿಡ್ ಸೃಷ್ಟಿಸಿದ ಆತಂಕ, ಸಂಕಷ್ಟ, ಮಾನಸಿಕ ಖಿನ್ನತೆಯಿಂದಾಗಿ ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರದಲ್ಲೂ ಇಡೀ ಕುಟುಂಬಗಳೇ ಆತ್ಮಹತ್ಯೆಯ ದಾರಿ ತುಳಿದಿವೆ. ಒಟ್ಟಾರೆ ನೋಡಿದರೆ ಉಡುಪಿಯಲ್ಲಿ 11, ಬೆಂಗಳೂರು 9, ಚಾಮರಾಜನಗರ, ದಕ್ಷಿಣ ಕನ್ನಡ ತಲಾ 4, ಧಾರವಾಡ, ದಾವಣಗೆರೆ ತಲಾ 3 ಹಾಗೂ ಮಂಡ್ಯ ಮತ್ತು ಹಾಸನದಲ್ಲಿ ತಲಾ ಒಬ್ಬರು ಸೇರಿ 36 ಮಂದಿ ಕೊರೋನಾ ಕಾರಣದಿಂದಾಗಿ ಬದುಕಿಗೆ ಕೊನೆ ಹಾಡಿದ್ದಾರೆ.