
ಅಯೋಧ್ಯೆ(ಜು. 27) ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಆಗಸ್ಟ್ 5 ರಂದೇ ಶಿಲಾನ್ಯಾಸ ಮಾಡಲು ಮುಹೂರ್ತ ಕೊಟ್ಟವರಲ್ಲಿ ಕರ್ನಾಟಕದವರು ಸಹ ಒಬ್ಬರಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ.
ಬೆಳಗಾವಿಯ ರಾಘವೇಂದ್ರ ಮಠದ ಕುಲಪತಿ ಎನ್.ಆರ್ ವಿಜಯೇಂದ್ರ ಶರ್ಮ ಅವರು ರಾಮಜನ್ಮಭೂಮಿ ಟ್ರಸ್ಟ್ ಗೆ ಆಗಸ್ಟ್ 5ನೇ ತಾರೀಖು ಸೇರಿದಂತೆ ಕೆಲ ದಿನಾಂಕವನ್ನು ಕಳುಹಿಸಿಕೊಟ್ಟದ್ದರಂತೆ. ಅದರಲ್ಲಿ 5 ನೇ ತಾರೀಕನ್ನು ಫೈನಲ್ ಮಾಡಲಾಗಿದೆ.
ರಾಮಮಂದಿರ ಅಡಿ ಟೈಂ ಕ್ಯಾಪ್ಸೂಲ್.. ಏನಿದು?
ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸಲು ದಿನಗಣನೆ ಆರಂಭವಾಗಿದೆ. ಭೂಮಿ ಪೂಜೆಗೆ ದಿನಾಂಕ ಹಾಗೂ ಸಮಯ ನಿಗದಿಯಾಗಿದ್ದು, ಆಗಸ್ಟ್ 5ರಂದು ಪಿಎಂ ಮೋದಿಯೇ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ರಾಮಮಂದಿರ ದೀರ್ಘ ಕಾಲದ ಹೋರಾಟದ ನಂತರ ನಿರ್ಮಾಣವಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಮಾನ ನೀಡಿದ ನಂತರ ಮಂದಿರ ನಿರ್ಮಾಣ ಕೆಲಸ ವೇಗವಾಗಿ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ