ತರಕಾರಿ ವ್ಯಾಪಾರಿಯಾದ ಇಂಜಿನಿಯರ್, ಎಲ್ಲಾ ಲಾಕ್ ಡೌನ್ ಪರಿಣಾಮ!

By Suvarna NewsFirst Published Jul 27, 2020, 11:06 PM IST
Highlights

ಅನಿವಾರ್ಯವಾಗಿ  ತರಕಾರಿ ವ್ಯಾಪಾರಕ್ಕೆ ಇಳಿದ ಇಂಜಿನಿಯರ್/ ಅಪ್ಪನ ವ್ಯವಹಾರ ಮುಂದುವರಿಸಿದ ಮಗಳು/ ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡಿದ್ದ ಶಾರದಾ

ಹೈದರಾಬಾದ್(ಜು. 27)  ಕೊರೋನಾ ವೈರಸ್   ಎನ್ನುವುದು ಒಂದು ಕಡೆ ಆರೋಗ್ಯ ಸಮಸ್ಯೆ ತಂದಿಟ್ಟರೆ ಇನ್ನೊಂದು ಕಡೆ ಲಾಕ್ ಡೌನ್ ಪರಿಣಾಮ ಅದೆಷ್ಟೋ ಜನ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಿನಿಮಾ ನಟರು, ಕಿರುತೆರೆ ನಟರು ಬಾಡಿಗೆ ಕಟ್ಟಲಾರದೆ ಮನೆಯಿಂದ ಹೊರಬಿದ್ದ ನಿದರ್ಶನಗಳು ಇವೆ. ಅಮಿರ್ ಖಾನ್ ಜತೆ  ತೆರೆ ಹಂಚಿಕೊಂಡಿದ್ದ ನಟ ಅನಿವಾರ್ಯವಾಗಿ ತರಕಾರಿ ಮಾರಾಟಕ್ಕೆ ಇಳಿದಿದ್ದನ್ನು ನೋಡಿದ್ದೇವೆ.  ಹೈದರಾಬಾದ್ ಮೂಲದ ಐಟಿ ಇಂಜಿನಿಯರ್ ಶಾರದಾ ಇದೀಗ ತರಕಾರಿ ವ್ಯಾಪಾರಿಯಾಗಿದ್ದಾರೆ.

ಹೊಟ್ಟೆ ಪಾಡಿಗಾಗಿ ಅಮಿರ್ ಜತೆ ನಟಿಸಿದ್ದ ನಟನ ತರಕಾರಿ ವ್ಯಾಪಾರ

ಶಾರದಾ ಅವರ ತಂದೆ ಸಹ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸಿಕೊಂಡು ಬಂದವರು. ಧೈರ್ಯದ ಹುಡುಗಿ ತರಕಾರಿ ವ್ಯಾಪಾರವನ್ನು ಮುಂದುವರಿಸಿದ್ದಾರೆ. ಹೈದರಾಬಾದ್ ನ ಶ್ರೀ ನಗರ್ ಕಾಲೋನಿಯಲ್ಲಿ ತರಕಾರಿ ವ್ಯಾಪಾರ ಮುಂದುವರಿಸಿದ್ದಾರೆ.

ಇದೇನು ಕೀಳರಿಮೆ ಪಟ್ಟಿಕೊಳ್ಳುವ ವಿಚಾರ ಅಲ್ಲ. ಸರ್ಕಾರ ಲಾಕ್ ಡೌಮನ್ ಘೋಷಣೆ ಮಾಡಿದ ಸಂದರ್ಭ ನನ್ನ ಕಂಪನಿ ವರ್ಕ್ ಫ್ರಾಂ ಹೋಂ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ನನ್ನ ಬಳಿ ಲ್ಯಾಪ್ ಟಾಪ್ ಸಹ ಇರಲಿಲ್ಲ ಅನಿವಾರ್ಯವಾಗಿ ಕೆಲಸ ಬಿಡಬೇಕಾಯಿತು ಎಂದು ಶಾರದಾ ಹೇಳುತ್ತಾರೆ.

ನಾವು ಒಂದೇ ದಾರಿಯಲ್ಲಿ ಜೀವನ ನೋಡಬಾರದು.  ಇದರಲ್ಲಿ ಪಶ್ಚಾತಾಪ ಪಡುವಂಥದ್ದು ಏನು ಇಲ್ಲ. ಹೊಸ ಅವಕಾಶ ತೆರೆದುಕೊಳ್ಳುತ್ತದೆ ಎಂದು  ಶಾರದಾ ಹೇಳುತ್ತಾರೆ. 

 

click me!