ಪಕ್ಷಗಳನ್ನು ಒಡೆಯುವುದು ಅಮಿತ್ ಶಾಗೆ ಗೊತ್ತು: ಕಪಿಲ್ ಸಿಬಲ್!

By Web DeskFirst Published Nov 14, 2019, 4:59 PM IST
Highlights

'ಪಕ್ಷಗಳನ್ನು ಒಡೆಯುವುದು ಹೇಗೆ ಎಂದು ಅಮಿತ್ ಶಾಗೆ ಗೊತ್ತು'| ಗೃಹ ಸಚಿವರ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಜಕ ಕಪಿಲ್ ಸಿಬಲ್| ಮಹಾರಾಷ್ಟ್ರ ರಾಜಕೀಯ ಸಂಘರ್ಷಕ್ಕೆ ಅಮಿತ್ ಶಾ ಕಾರಣ ಎಂದ ಕಪಿಲ್ ಸಿಬಲ್| 'ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಅಮಿತ್ ಶಾ ಹೆಣೆದ ಬಲೆ'| 

ನವದೆಹಲಿ(ನ.14): ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ  ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ಮಧ್ಯೆ ಮಹಾರಾಷ್ಟ್ರ ರಾಜಕೀಯ ಸಂಘರ್ಷಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ ಎಂದಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಪಕ್ಷಗಳನ್ನು ಒಡೆಯುವ ಕಲೆ ಅಮಿತ್ ಶಾ ಅವರಿಗೆ ಚೆನ್ನಾಗಿ ಗೊತ್ತು ಎಂದು ಹರಿಹಾಯ್ದಿದ್ದಾರೆ.

ಮಹಾರಾಷ್ಟ್ರದಲ್ಲಿ ಟ್ರೈ-ಆ್ಯಂಗಲ್ ಸರ್ಕಾರ?: ಬಿಜೆಪಿ ತಲೆ ಗಿರಗಿರ!

Governor of Maharashtra :
The Union Government’s eyes and ears :

Has no qualms
to discard
all constitutional norms

That is the fate
of institutions
of late

Desh badal chuka hai !

— Kapil Sibal (@KapilSibal)

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಅಮಿತ್ ಶಾ ಹೆಣೆದ ಬಲೆ ಎಂದು ಆರೋಪಿಸಿರುವ ಕಪಿಲ್ ಸಿಬಲ್, ಪಕ್ಷಗಳನ್ನು ಒಡೆದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಲೆ ಗೃಹ ಸಚಿವರಿಗೆ ಚೆನ್ನಾಗಿ ಗೊತ್ತು ಎಂದು ಕಿಡಿಕಾರಿದ್ದಾರೆ.

ಮೌನ ಮುರಿದ ಅಮಿತ್ ಶಾ, ಠಾಕ್ರೆಗೆ ತಿರುಗೇಟು!

Kapil Sibal, Congress on Amit Shah's remarks on President's Rule in Maharashtra: Amit Shah is very experienced as far as these matters are concerned. He knows how to break & how to unite political parties, we have seen glimpses of it in several states - be it in Goa or Karnataka. pic.twitter.com/ErcucKQGbg

— ANI (@ANI)

ತಮ್ಮ ರಾಜಕೀಯ ಲಾಭಕ್ಕಾಗಿ ಪಕ್ಷಗಳನ್ನಿ ಒಡೆಯುವ, ಒಟ್ಟುಗೂಡಿಸುವ ಕಲೆ ಅಮಿತ್ ಶಾಗೆ ಗೊತ್ತು ಎಂದಿರುವ ಕಪಿಲ್ ಸಿಬಲ್, ಗೋವಾ ಹಾಗೂ ಕರ್ನಾಟಕದಲ್ಲಿ ಅಮಿತ್ ಶಾ ಮಾಡಿದ್ದು ಇದನ್ನೇ ಎಂದು ಚುಚ್ಚಿದ್ದಾರೆ.

'ಮುಚ್ಚಿದ ಕೋಣೆಯಲ್ಲಾದ ಒಪ್ಪಂದ ಅಮಿತ್ ಶಾ ಪಿಎಂ ಮೋದಿಯಿಂದ ಮುಚ್ಚಿಟ್ರು'

click me!