
ನವದೆಹಲಿ[ನ.14]: ರಫೇಲ್ ಡೀಲ್ ವಿಷಯದಲ್ಲಿ ಮೋದಿ ಟೀಕಿಸಿ 'ಚೌಕೀದಾರ್ ಚೋರ್ ಹೈ' ಎಂದಿದ್ದ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಛಾಟಿ ಬೀಸಿದೆ.
'ಚೌಕೀದಾರ್ ಚೋರ್ ಹೈ ಎಂದು ಸುಪ್ರೀಂ ಕೋರ್ಟೇ ಹೇಳಿದೆ’ ಎಂದಿದ್ದ ಕಾಂಗ್ರೆಸ್ ಹಿಂದಿನ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಮಾನಹಾನಿ ದಾವೆ ಹೂಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಗೆ ಖಡಕ್ ವಾರ್ನಿಂಗ್ ನೀಡಿದೆ.
ಮೋದಿಗೆ ಬೈಯ್ಯುತ್ತಿದ್ದ ಮಕ್ಕಳಿಗೆ ಪ್ರಿಯಾಂಕಾ ಕಿವಿಮಾತು: ವಿಡಿಯೋ ವೈರಲ್!
'ನಾಲಗೆ ಮೇಲೆ ಬಿಗಿ ಹಿಡಿತವಿರಲಿ, ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು' ಎಂದು ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಕ್ಷಮೆ ಸ್ವೀಕರಿಸಿ ಪ್ರಕರಣ ಕೈಬಿಟ್ಟಿದೆ.
ಏನಿದು ವಿವಾದ?
ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ರಾಹುಲ್ ನೀಡಿದ ಈ ಹೇಳಿಕೆ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಮಾನಹಾನಿ ದಾವೆ ದಾಖಲಿಸಿದ್ದರು. ‘ಸುಪ್ರೀಂ ಕೋರ್ಟು ಯಾವತ್ತೂ ಮೋದಿ ಅವರನ್ನು ‘ಚೋರ’ ಎಂದಿಲ್ಲ’ ಎಂದು ಲೇಖಿ ಪರ ವಕೀಲ ಮುಕುಲ್ ರೋಹಟಗಿ ವಾದಿಸಿದ್ದರು.
ಲೋಕ ಅಖಾಡದಲ್ಲಿ ಕಿಕ್ಕೇರಿಸಿದ ಡೈಲಾಗ್ ಸಮರ: ಇಲ್ಲಿವೆ 'ಪಂಚ್' ಡೈಲಾಗ್ಸ್!
ಇದರ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾ| ರಂಜನ್ ಗೊಗೋಯ್ ಅವರ ಪೀಠ, ‘ಈ ಬಗ್ಗೆ ಕ್ಷಮೆ ಕೇಳಿ. ಇಲ್ಲವೇ ವಿಚಾರಣೆ ಎದುರಿಸಿ’ ಎಂದು ಸೂಚಿಸಿತ್ತು. ಬಳಿಕ ತಮ್ಮ ಹೇಳಿಕೆ ಬಗ್ಗೆ ರಾಹುಲ್ ‘ವಿಷಾದ’ ವ್ಯಕ್ತಪಡಿಸಿದ್ದರು.
ಆದರೆ, ‘ವಿಷಾದ ವ್ಯಕ್ತಪಡಿಸುವಿಕೆ ಸಲ್ಲದು. ಬೇಷರತ್ ಕ್ಷಮೆಯಾಚಿಸಬೇಕು. ಹೀಗಾಗಿ ರಾಹುಲ್ ವಿಷಾದಕ್ಕೆ ಬೆಲೆ ಇಲ್ಲ. ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ರೋಹಟಗಿ ವಾದಿಸಿದ್ದರು.
ನವೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ