ಕುಬ್ಜ ಮಹಿಳೆಯರ ಸೌಂದರ್ಯ ಸ್ಪರ್ಧೆ: ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ ವೈದ್ಯೆ

By Suvarna News  |  First Published Jul 18, 2024, 6:07 PM IST

ಇಲ್ಲೊಂದು ಕಡೆ ಸಾಧಾರಣ ಎತ್ತರ ಇರುವ ಅಥವಾ ಕುಬ್ಬ ಮಹಿಳೆಯರಿಗಾಗಿಯೇ ಆಯೋಜಿಸಿದ ವಿಶ್ವ ಸೌಂದರ್ಯ ಸ್ಪರ್ಧೆಯಲ್ಲಿ ಕನ್ನಡತಿಯೊಬ್ಬರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅವರೇ ಶ್ರುತಿ ಹೆಗ್ಡೆ, ಕರ್ನಾಟಕದ ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದ ಇವರು ವೃತ್ತಿಯಲ್ಲಿ ವೈದ್ಯರು


ವಿಶ್ವ ಸೌಂದರ್ಯ ಸ್ಪರ್ಧೆ ಎಂದರೆ ಅದಕ್ಕೆ ತನ್ನದೇ ಆದ ನಿಯಮಾವಳಿಗಳಿರುತ್ತವೆ. ನಿರ್ದಿಷ್ಟವಾದ ಎತ್ತರ, ತೂಕ, ದೇಹದ ಗಾತ್ರ, ಬುದ್ದಿವಂತಿಕೆ ಪ್ರತಿಯೊಂದು ಕೂಡ ಮ್ಯಾಟರ್ ಆಗುತ್ತೆ. ಹೀಗಾಗಿ ಸಾಧಾರಣ ಎತ್ತರ ಇರುವ ಅಥವಾ ಕುಬ್ಜ ಮಹಿಳೆಯರಿಗೆ ಇದರಲ್ಲಿ ಎಷ್ಟೇ ಚಂದ ಬುದ್ದಿವಂತಿಕೆ ಇದ್ದರೂ ಭಾಗವಹಿಸುವ ಅವಕಾಶ ಇಲ್ಲ, ಆದರೆ ಇಲ್ಲೊಂದು ಕಡೆ ಸಾಧಾರಣ ಎತ್ತರ ಇರುವ ಅಥವಾ ಕುಬ್ಬ ಮಹಿಳೆಯರಿಗಾಗಿಯೇ ಆಯೋಜಿಸಿದ ವಿಶ್ವ ಸೌಂದರ್ಯ ಸ್ಪರ್ಧೆಯಲ್ಲಿ ಕನ್ನಡತಿಯೊಬ್ಬರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅವರೇ ಶ್ರುತಿ ಹೆಗ್ಡೆ, ಕರ್ನಾಟಕದ ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದ ಇವರು ವೃತ್ತಿಯಲ್ಲಿ ವೈದ್ಯರು ಹಾಗೂ ಸೌಂದರ್ಯದಲ್ಲಿ ರಾಣಿ. ತಮ್ಮ ಬಿಡುವಿರದ ಕೆಲಸದ ನಡುವೆಯೇ ಅವರು ತಮ್ಮ ಮಾಡೆಲಿಂಗ್ ಫ್ಯಾಷನ್ ಶೋಗಳ ಮೇಲಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದು, ಈಗ  ಮಿಸ್ ಯೂನಿವರ್ಸಲ್‌ ಪುಟಾಣಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಚಾಂಪಿಯನ್ ಆಗಿದ್ದಾರೆ. 

ವೈದ್ಯರಾಗಿ ಕೆಲಸ ಮಾಡಿಕೊಂಡು ತಮ್ಮ ಆಸಕ್ತಿಯ ಇತರ ವಿಚಾರಗಳಲ್ಲಿ ಹೀಗೆ ಸಾಧನೆ ಮಾಡುವುದು ಕಡಿಮೆ ಸಾಧನೆ ಏನಲ್ಲ, 2018ರಿಂದಲೂ ಶ್ರುತಿ ಹೆಗ್ಡೆ ಅವರು ಆಸ್ಪತ್ರೆಯಲ್ಲಿ 36 ಗಂಟೆ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರಂತೆ, ನಂತರ ಉಳಿದ ಸಮಯದಲ್ಲಷ್ಟೇ ಅವರಿಗೆ ಈ ರೀತಿ ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಸಮಯ ಸಿಗುತ್ತಿತ್ತು. ಆದರೂ ಈಗ ಅವರ ಕಠಿಣ ಶ್ರಮಕ್ಕೆ ಬೆಲೆ ಸಿಕ್ಕಿದ್ದು,  ಪುಟಾಣಿ ಬ್ಯೂಟಿ ಕ್ವೀನ್ ಆಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ಈ ಕಿರೀಟವನ್ನು ಅಲಂಕರಿಸಿದ ಮೊದಲ ಬಾರತೀಯ ನಾರಿ ಎನಿಸಿದ್ದಾರೆ ಮಿಶ್ ಶ್ರುತಿ ಹೆಗ್ಡೆ. 

Tap to resize

Latest Videos

ಒಂದು ತಿಂಗಳ ಹಿಂದೆ  ಅಂದರೆ ಜೂನ್ 10 ರಂದು ಮಿಸ್ ಯುನಿವರ್ಸಲ್ ಪೆಟಿಟಿ ಎಂದು ಕರೆಯಲ್ಪಡುವ ಬ್ಯೂಟಿ ಅವಾರ್ಡ್ ಅನ್ನು ತಮ್ಮ ಮೂಡಿಗೇರಿಸಿಕೊಂಡಿದ್ದಾರೆ. ಅಂದಹಾಗೆ ಇದು 2009ರಲ್ಲಿ ಆರಂಭವಾದಂತಹ ಸೌಂದರ್ಯ ಸ್ಪರ್ಧೆ ಇದಾಗಿದ್ದು, ಇದು ಕುಳ್ಳಗಿರುವ ಮಹಿಳೆಯರಿಗೆ ಅವಕಾಶ ನೀಡುತ್ತದೆ. ಯಾರಿಗೆ ತಮ್ಮ ಸಾಧಾರಣ ಎತ್ತರದಿಂದಾಗಿ ಸೌಂದರ್ಯ ಬುದ್ಧಿವಂತಿಕೆ ಇದ್ದರೂ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಇರುವುದಿಲ್ಲವೋ ಅಂತಹವರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಇರುತ್ತದೆ. ಇದು ಅಮೆರಿಕಾದ ಫ್ಲೋರಿಡಾದಲ್ಲಿರುವ ತಂಪಾದಲ್ಲಿ ಪ್ರತಿ ವರ್ಷ ನಡೆಯುತ್ತದೆ. 

ಇದು ಕೂಡ ಇತರ ಸೌಂದರ್ಯ ಸ್ಪರ್ಧೆಯಂತೆಯೇ ಇರುವುದರಿಂದ ಇದರಲ್ಲಿ ಆಯ್ಕೆಯಾಗುವುದು ಅಷ್ಟು ಸುಲಭವಲ್ಲ, ಒಬ್ಬಳು ವೈದ್ಯೆಯಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ನಾನು ಮೊದಲಿಗೆ ಯೋಚಿಸಿದಂತೆ ಸ್ವಲ್ಪ ಪ್ರಯತ್ನ ಸಾಲದು. ಆದರೆ ಒಂದರ ಬದಲು ಮತ್ತೊಂದನ್ನು ಆಯ್ಕೆ ಮಾಡುವ ಬದಲು ನಾನು ಎರಡನ್ನೂ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿದೆ ಎಂದು ಶ್ರುತಿಯವರು ತಮ್ಮ ಈ ಅದ್ಭುತ ಸಾಧನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ನಾನು ಯಾವಾಗಲೂ ಹೊಸ ಹೊಸ ವಿಚಾರಗಳನ್ನು ಮಾಡಲು ಬಯಸುತ್ತಿದ್ದೆ. ಬ್ಯೂಟಿ ಕ್ವೀನ್ ಆಗಬೇಕು ಇದು ಪ್ರತಿ ಪುಟ್ಟ ನಗರದಲ್ಲಿ ಬೆಳೆದ ಹೆಣ್ಣು ಮಕ್ಕಳ ಕನಸು ಕೂಡ ಹೌದು ಎಂದು ಶ್ರುತಿ ಹೇಳುತ್ತಾರೆ.

click me!