ಬಿಟ್ಟು ಹೋದ ಗಂಡನ ಹೆದರಿಸಲು ಮಗುವಿನ ಮೇಲೆ ತಾಯಿಯ ಕ್ರೌರ್ಯ : ವೈರಲ್ ವೀಡಿಯೋ ಬಗ್ಗೆ ಪೊಲೀಸರು ಹೇಳಿದ್ದೇನು?

Published : Jul 18, 2024, 05:09 PM ISTUpdated : Jul 18, 2024, 05:26 PM IST
ಬಿಟ್ಟು ಹೋದ ಗಂಡನ ಹೆದರಿಸಲು ಮಗುವಿನ ಮೇಲೆ ತಾಯಿಯ ಕ್ರೌರ್ಯ : ವೈರಲ್ ವೀಡಿಯೋ ಬಗ್ಗೆ ಪೊಲೀಸರು ಹೇಳಿದ್ದೇನು?

ಸಾರಾಂಶ

ತಾಯಿಯೊಬ್ಬಳು ತನ್ನ ಕರುಳಕುಡಿಯನ್ನೇ ಸಾಯುವಂತೆ ಹೊಡೆಯುತ್ತಿರುವ ವೀಡಿಯೋವೊಂದು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಹರಿದ್ವಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಯಿಯೊಬ್ಬಳು ತನ್ನ ಕರುಳಕುಡಿಯನ್ನೇ ಸಾಯುವಂತೆ ಹೊಡೆಯುತ್ತಿರುವ ವೀಡಿಯೋವೊಂದು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಹರಿದ್ವಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಮಹಿಳೆ ತನ್ನ ಬಿಟ್ಟು ಹೋದ ಗಂಡನನ್ನು ಹೆದರಿಸುವುದಕ್ಕಾಗಿ ಮಗುವಿನ ಮೇಲೆ ಈ ರೀತಿ ಕ್ರೌರ್ಯ ಮರೆದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಮಹಿಳೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆಕೆಯನ್ನು ಜೈಲಿಗೆ ತಳ್ಳಿ ಕಠಿಣ ಶಿಕ್ಷೆ ನೀಡುವಂತೆ ಜನ ಆಗ್ರಹಿಸಿದ್ದಾರೆ. 

ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವೀಡಿಯೋ ಎರಡು ತಿಂಗಳ ಹಿಂದೆ ನಡೆದ ಘಟನೆಯಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ ಇದರ ಜೊತೆಗೆ ಮಹಿಳೆ ಹಾಗೂ ಮಗುವಿಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಇತ್ತ ಈ ಮಹಿಳೆಯ ಗಂಡ ಮಹಿಳೆ ಹಾಗೂ ಮಕ್ಕಳನ್ನು ತೊರೆದು ಉತ್ತರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಹೀಗಾಗಿ ಗಂಡನ ಮೇಲಿನ ಸಿಟ್ಟಿಗಾಗಿ ಹಾಗೂ ಆತನನ್ನು ಹೆದರಿಸುವುದಕ್ಕಾಗಿ ಆಕೆ ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದಾಳೆ ಎಂದು ಹರಿದ್ವಾರ ಪೊಲೀಸರು ಹೇಳಿದ್ದಾರೆ. 

ಮಗನ ತಲೆ ನೆಲಕ್ಕೆ ಚಚ್ಚಿ, ನೀರು ಕೇಳಿದರು ಕೊಡದೇ ಕ್ರೂರವಾಗಿ ಥಳಿಸಿದ ತಾಯಿ: ವೀಡಿಯೋ ವೈರಲ್

ಮಹಿಳೆಯ ಗಂಡ ಮನೆಗೂ ಬರುತ್ತಿರಲಿಲ್ಲ, ಇತ್ತ ಹೆಂಡತಿ ಮಕ್ಕಳ ಜೀವನ ನಿರ್ವಹಣೆಗಾಗಿ ಹಣವನ್ನು ನೀಡುತ್ತಿರಲಿಲ್ಲ, ಈ ಹಿನ್ನೆಲೆಯಲ್ಲಿ ಹಲವು ಬಾರಿ ಗಂಡನಿಗೆ ಕರೆ ಮಾಡಿದ ಆಕೆ, ಆತ ಮಾತು ಕೇಳುವುದಕ್ಕೆ ಸಿದ್ಧನಿಲ್ಲದಾಗ ಸಿಟ್ಟುಗೊಂಡು ಮಗುವಿನ ಮೇಲೆ ಈ ರೀತಿ ಕ್ರೌರ್ಯ ಮೆರೆದಿದ್ದಾಳೆ ಎಂದು ತಿಳಿದು ಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಮೂದೆ ಮಹಿಳೆ ಹಾಗೂ ಮಗುವಿಗೆ ಮೊದಲ ಹಂತದ ಕೌನ್ಸೆಲಿಂಗ್ ನಡೆದಿದೆ ಎಂದು ಹರಿದ್ವಾರ ಪೊಲೀಸರು ಟ್ವಿಟ್ಟರ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ. 

 

ವೈರಲ್ ಆದ ವೀಡಿಯೋದಲ್ಲಿ ಏನಿದೆ.  

ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋದಲ್ಲಿ ತಾಯಿಯೊಬ್ಬಳು ತನ್ನದೇ ಮಗುವಿನ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಳು. ತನ್ನ 8 ವರ್ಷದ ಮಗುವನ್ನು ನೆಲಕ್ಕೆ ತಳ್ಳಿ ಆತನ ಮೇಲೆ ಕುಳಿತು ಆತನ ಕೈಗಳನ್ನು ಹಿಡಿದು ಆತನ ಎದೆಭಾಗಕ್ಕೆ ಜೋರಾಗಿ ಕಚ್ಚುತ್ತಾಳೆ. ಈ ವೇಳೆ ಮಗು ನೋವು ತಡೆಯಲಾಗದೇ ಜೋರಾಗಿ ಕೂಗುತ್ತಾನೆ. ಅಲ್ಲದೇ ಯಾರಾದರೂ ಸ್ವಲ್ಪ ನೀರು ಕೊಡಿ ಎಂದು ಅದು ಆರ್ತನಾಗಿ ಕೇಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಬರೀ ಇಷ್ಟೇ ಅಲ್ಲದೇ ಬಾಲಕನ ತಲೆಯನ್ನು ಹಿಡಿದು ತಾಯಿ ನೆಲಕ್ಕೆ ಕುಟ್ಟುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದು. ಈ ವೇಳೆ ಜೊತೆಯಲ್ಲೇ ಇನ್ನೊಬ್ಬ ಪುಟ್ಟ ಬಾಲಕನಿದ್ದು, ಆತ ಅಮ್ಮನ ಕೃತ್ಯವನ್ನು ಆತಂಕದಿಂದ ನೋಡುವುದನ್ನು ಕಾಣಬಹುದು. ಬಹುತೇಕ ಈ ವೀಡಿಯೋದಲ್ಲಿ ಕಾಣಿಸುವಂತೆ ಆಕೆ ಬಾಲಕನ್ನು ಕೊಲ್ಲಲು ನೋಡುತ್ತಿರುವಂತೆಯೇ ಕಾಣಿಸುತ್ತಿದೆ. 

ಅಲ್ಲದೇ ತಾಯಿ ಥಳಿಸುತ್ತಿದ್ದರೆ, ಮಗು ಮಮ್ಮಿ ಪ್ಲೀಸ್ ಮೊದಲಿಗೆ ನನಗೆ ಸ್ವಲ್ಪ ನೀರು ನೀಡು ಎಂದು ಕೇಳುತ್ತಿರುವುದನ್ನು ಕೂಡ ವೀಡಿಯೋದಲ್ಲಿ ಕೇಳಬಹುದು. ಆದರೆ ತಾಯಿ ಆತನ ಕೆನ್ನೆಗೆ ಹಲವು ಬಾರಿ ಬಾರಿಸುತ್ತಾಳೆ. ನಂತರ ಆತನ ಎರಡು ಎದೆಭಾಗಕ್ಕೂ ಜೋರಾಗಿ ಕಚ್ಚುತ್ತಾಳೆ ಅಲ್ಲದೇ ಆತನ ಕತ್ತನ್ನು ಹಿಸುಕಿ ಉಸಿರುಕಟ್ಟಿಸಲು ಯತ್ನಿಸುತ್ತಾಳೆ. ಈ ವೇಳೆ ಬೇರೊಬ್ಬ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿ ಆತ ಸಾಯುತ್ತಾನೆ ಎಂದು ಕಿರುಚಿದ್ದು, ಈ ವೇಳೆ ಆಕೆ ಮಗನ ಕತ್ತಿನಿಂದ ಕೈ ಹೊರತೆಗೆದಿದ್ದಾಳೆ. ಇದಾದ ನಂತರ ಬಾಲಕ ಮತ್ತೆ ನೀರು ಕೇಳುತ್ತಾನೆ. ಈ ವೇಳೆ ಆಕೆ ಮತ್ತೆ ಹೊಡೆಯಲು ಶುರು ಮಾಡುತ್ತಾಳೆ. ಅಲ್ಲದೇ ಕೈಗಳನ್ನು ಮುಷ್ಠಿ ಮಾಡಿ ಮಗನಿಗೆ ಮತ್ತೆ ಥಳಿಸುತ್ತಾಳೆ. 

ಚಡ್ಡಿಯಲ್ಲಿ ಸೂಸು ಮಾಡಿದ ಮಗುವಿಗೆ ಚಾಕುವಿನಿಂದ ಹಲ್ಲೆ

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನಿನ್ನೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು.

 

 

ಕೆಲ ತಿಂಗಳ ಹಿಂದಷ್ಟೇ  ಅಂದರೆ ಕಳೆದ ಜನವರಿಯಲ್ಲಿ  ಮಹಿಳಾ ಸಿಇಒ ಸೂಚನಾ ಸೇತ್ ಅವರುತಮ್ಮ ವಿಚ್ಛೇದಿತ ಗಂಡನಿಗೆ ಬುದ್ಧಿ ಕಲಿಸುವುದಕ್ಕಾಗಿ ಏನು ಅರಿಯದ ಪುಟ್ಟ ಕಂದನನ್ನೇ ಹೊಡೆದು ಕೊಂದ ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮಗನ ಮುಖದಿಂದ ಗಂಡನ ನೆನಪಾಗ್ತಿದ್ದಕ್ಕೆ ಹತ್ಯೆ ಮಾಡಿದ್ರಾ ಬೆಂಗಳೂರು ಸ್ಟಾರ್ಟಪ್‌ ಕಂಪನಿಯ ಸಿಇಒ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್