ಮುಂಬೈ, ಪಂಜಾಬ್ ಮತ್ತು ಮನಾಲಿಯಲ್ಲಿ ಆಸ್ತಿ, ಮೂರು ಐಷಾರಾಮಿ ಕಾರುಗಳು ಸೇರಿದಂತೆ ಬಾಲಿವುಡ್ ನಟಿ ಕಂಗನಾ ರಣಾವತ್ 90 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದಾರೆ.
ನವದೆಹಲಿ (ಮೇ.14): ಬಾಲಿವುಡ್ ನಟಿ ಮತ್ತು ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾಗಿರುವ ಕಂಗನಾ ರಣಾವತ್ ಅವರು ಚುನಾವಣಾ ಅಫಿಡವಿಟ್ ಪ್ರಕಾರ 28.7 ಕೋಟಿ ಚರಾಸ್ತಿ ಮತ್ತು 62.9 ಕೋಟಿ ಸ್ಥಿರಾಸ್ತಿ ಸೇರಿದಂತೆ 90 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ.37 ವರ್ಷದ ನಟಿ ರಾಜಕಾರಣಿಯ ಕೈಯಲ್ಲಿ 2 ಲಕ್ಷ ರೂಪಾಯಿ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಸುಮಾರು 1.35 ಕೋಟಿ ರೂಪಾಯಿ ಹಣ ಹೊಂದಿದ್ದಾರೆ. ಕಂಗನಾ ಅವರು ಮುಂಬೈ, ಪಂಜಾಬ್ ಮತ್ತು ಮನಾಲಿಯಲ್ಲಿ ಆಸ್ತಿಯನ್ನು ಹೊಂದಿದ್ದಾರೆ ಮತ್ತು ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಜ್ ಮತ್ತು 3.91 ಕೋಟಿ ರೂಪಾಯಿಯ ಮರ್ಸಿಡಿಸ್ ಮೇಬ್ಯಾಚ್ ಸೇರಿದಂತೆ ಮೂರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.ಬಾಲಿವುಡ್ ನಟಿಯ ಬಳಿ ಸುಮಾರು 5 ಕೋಟಿ ರೂಪಾಯಿ ಮೌಲ್ಯದ 6.7 ಕೆಜಿ ಚಿನ್ನ, 50 ಲಕ್ಷ ರೂಪಾಯಿ ಮೌಲ್ಯದ 60 ಕೆಜಿ ಬೆಳ್ಳಿ ಮತ್ತು 3 ಕೋಟಿ ರೂಪಾಯಿ ಮೌಲ್ಯದ 14 ಕ್ಯಾರೆಟ್ ವಜ್ರದ ಆಭರಣಗಳನ್ನು ಹೊಂದಿದ್ದಾರೆ. ಆಕೆಯ ಹೆಸರಿನಲ್ಲಿ 50 ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (LIC) ಪಾಲಿಸಿಗಳಿವೆ ಮತ್ತು ಆಕೆಯ ಒಟ್ಟು ಸಾಲಗಳು 7.3 ಕೋಟಿ ರೂಪಾಯಿ ಆಗಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಕಂಗನಾ ಚಂಡೀಗಢದ ಖಾಸಗಿ ಶಾಲೆಯಲ್ಲಿ 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ. ಚುನಾವಣಾ ದಾಖಲೆಯಲ್ಲಿ ಬಿಜೆಪಿ ಅಭ್ಯರ್ಥಿ ಘೋಷಿಸಿರುವಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಮೂರು ಸೇರಿದಂತೆ ಕಂಗನಾ ವಿರುದ್ಧ ಒಟ್ಟು ಎಂಟು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಸ್ವಂತ ಮನೆ, ಕಾರು ಇಲ್ಲ, ಕೈಯಲ್ಲಿದೆ 52 ಸಾವಿರ ರೂಪಾಯಿ, ಪ್ರಧಾನಿ ಮೋದಿಯ ಆಸ್ತಿ 3.02 ಕೋಟಿ!
ಈ ನಡುವೆ ಅವರ ಚುನಾವಣಾ ಎದುರಾಳಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರ ಒಟ್ಟು ಆಸ್ತಿ ಸುಮಾರು 96.70 ಕೋಟಿ ರೂಪಾಯಿ ಆಗಿದೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರಕ್ಕೆ ಜೂನ್ 1 ರಂದು 7ನೇ ಮತ್ತು ಅಂತಿಮ ಹಂತದ ಸಂಸತ್ ಚುನಾವಣೆಗೆ ಮತದಾನ ನಡೆಯಲಿದೆ. ಇಂದು ನಾಮಪತ್ರ ಸಲ್ಲಿಕೆ ಮಾಡಿದ ಕಂಗನಾ, "ಇದು ಮೊದಲ ಮತ್ತು ಕೊನೆಯ ಬಾರಿ ಅಲ್ಲ" ಮತ್ತು "ಭವಿಷ್ಯದಲ್ಲಿ ಚೋಟಿ ಕಾಶಿಯಿಂದ (ಮಂಡಿ) ನಾಮಪತ್ರ ಸಲ್ಲಿಸುವ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತೇನೆ" ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಅವರು ಮೇ 9 ರಂದು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದರು.
ಷೇರು ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಹಣ ಹಾಕಿರುವ ರಾಹುಲ್, ಐದು ವರ್ಷದಲ್ಲಿ ಆಸ್ತಿ 5 ಕೋಟಿ ಏರಿಕೆ!