
ಮುಂಬೈನ ಚೆಂಬೂರ್ ಪ್ರದೇಶದ ದೇವಾಲಯವೊಂದರಲ್ಲಿ ಕಾಳಿ ಮಾತೆಯ ವಿಗ್ರಹವನ್ನು ಕ್ರಿಶ್ಚಿಯನ್ ಮಾತೆ ಮೇರಿಯಂತೆ ಅಲಂಕರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿಗ್ರಹವನ್ನು ಶಿಲುಬೆಯಿಂದ ಅಲಂಕರಿಸಲಾಗಿತ್ತು ಮತ್ತು ದೇವಾಲಯದ ಸುತ್ತಲೂ ಕೆಂಪು ಬಟ್ಟೆಯನ್ನು ಇರಿಸಲಾಗಿತ್ತು. ಈ ಘಟನೆಯ ವಿಡಯೋ ವೈರಲ್ ಆಗುತ್ತಲೇ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ದೂರಿನ ಮೇರೆಗೆ ಪೊಲೀಸರು ದೇವಾಲಯದ ಅರ್ಚಕರನ್ನು ಬಂಧಿಸಿದ್ದಾರೆ.
ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಯುವಕನೊಬ್ಬ ದೇವಾಲಯಕ್ಕೆ ಪ್ರವೇಶಿಸಿ ಚಿತ್ರೀಕರಣ ಮಾಡುತ್ತಿರುವುದನ್ನು ತೋರಿಸಲಾಗಿದೆ. ಅವನು ಕಾಳಿ ಮಾತಾ ದೇವಾಲಯವನ್ನು ಸಮೀಪಿಸುತ್ತಾನೆ. ದೇವಾಲಯದ ಬಾಗಿಲುಗಳು ಮುಚ್ಚಲ್ಪಟ್ಟಿರುವುದನ್ನು ನೋಡಬಹುದು. ಪರದೆಯ ಮೂಲಕ, ಕಾಳಿ ಮಾತೆಯನ್ನು ಮೇರಿಯಂತೆಯೇ ಧರಿಸಿ ಮೇರಿಯ ಪ್ರತಿಮೆಯಂತೆಯೇ ಅಲಂಕರಿಸಲಾಗಿದೆ ಎಂದು ತೋರಿಸುತ್ತಾನೆ. ಕಾಳಿ ಮಾತೆಯ ತಲೆಯ ಮೇಲೆ ಕಿರೀಟವನ್ನು ಇರಿಸಲಾಗಿದೆ. ದೇವಾಲಯದ ಒಳಗೆ ಕೆಂಪು ಬಟ್ಟೆ ಗೋಚರಿಸುತ್ತದೆ. ಚರ್ಚ್ ತರಹದ ಬೆಳಕನ್ನು ಸಹ ಬಳಸಲಾಗುತ್ತದೆ. ವಿಗ್ರಹದ ಮೇಲೆ ದೀಪಗಳ ಬದಲಿಗೆ ಮೇಣದಬತ್ತಿಗಳನ್ನು ಉರಿಯುತ್ತಿರುವುದನ್ನು ಕಾಣಬಹುದು. ಕಾಳಿ ಮಾತೆಯನ್ನು ತನ್ನ ಮಡಿಲಲ್ಲಿ ಮಗುವನ್ನು ಹಿಡಿದಿಟ್ಟುಕೊಂಡಿರುವಂತೆ ತೋರಿಸಲಾಗಿದೆ.
ದೂರು ಮತ್ತು ವೀಡಿಯೊ ವೈರಲ್ ಆದ ನಂತರ, ಪೊಲೀಸರು ದೇವಾಲಯದ ಅರ್ಚಕ ರಮೇಶ್ ಅವರನ್ನು ಬಂಧಿಸಿದ್ದಾರೆ. ಆಗ ಅವರು ತಪ್ಪೊಪ್ಪಿಕೊಂಡಿದ್ದಾರೆ! "ಕಾಳಿ ಮಾತೆ ನನಗೆ ಕನಸಿನಲ್ಲಿ ಕಾಣಿಸಿಕೊಂಡು ಮೇರಿಯಂತೆಯೇ ಅಲಂಕರಿಸಲು ಕೇಳಿಕೊಂಡಳು" ಎಂದು ಅರ್ಚಕ ಹೇಳಿದ್ದಾರೆ. ಇದೇ ಕಾರಣಕ್ಕೆ ಹಾಗೆ ಮಾಡಲಾಯಿತು. ನನ್ನದೇನೂ ತಪ್ಪಿಲ್ಲ. ಕನಸಿನಲ್ಲಿ ಬಂದ ಹಾಗೆ ಹಾಗೆ ಮಾಡಬೇಕಾಯಿತು ಎಂದಿದ್ದಾರೆ.
ಸದ್ಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಡಿಯಲ್ಲಿ ಅರ್ಚಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಅವರು ಎರಡು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ