ಕಾಬೂಲ್ ಬಾಂಬ್ ದಾಳಿ ಹಿಂದಿನ ಸ್ಫೋಟಕ ವರದಿ; ಕೇರಳದಿಂದ ಐಸಿಸ್ K ಸೇರಿದ 14 ಮಂದಿಯ ಕೃತ್ಯ?

By Suvarna NewsFirst Published Aug 28, 2021, 9:28 PM IST
Highlights
  • ಕಾಬೂಲ್ ಆತ್ಮಾಹುತಿ ದಾಳಿಗೆ 170 ಮಂದಿ ಸಾವು, ಹಲವರು ಗಂಭೀರ ಗಾಯ
  • ಬಾಂಬ್ ದಾಳಿ ಹೊಣೆ ಹೊತ್ತ ಐಸಿಸ್ ಕೆ ಉಗ್ರ ಸಂಘಟನೆ
  • ಈ ದಾಳಿ ಹಿಂದೆ ಕೇರಳದಿಂದ ಐಸಿಸ್ ಕೆ ಸೇರಿದ 14 ಮಂದಿ ಶಂಕೆ
  • ದಾಳಿ ಕುರಿತ ವರದಿ ಪ್ರಕಟಿಸಿದ ಹಿಂದುಸ್ಥಾನ ಟೈಮ್ಸ್ 

ನವದೆಹಲಿ(ಆ.28): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಆಡಳಿತ ಜಾರಿಯಾಗಿ 15 ದಿನ ಕಳೆದಿಲ್ಲ. ಅಷ್ಟರಲ್ಲೇ ಹೆಣಗಳ ರಾಶಿ ಬಿದ್ದಿದೆ. ತಾಲಿಬಾನ್ ಉಗ್ರರ ಗುಂಡೇಟಿನ ನಡುವೆ ಐಸಿಸ್ ಕೆ ಉಗ್ರರ ಬಾಂಬ್ ದಾಳಿಗೆ ಅಫ್ಘಾನಿಸ್ತಾನದ 170 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 13 ಅಮೆರಿಕ ಸೈನಿಕರು ಸೇರಿದ್ದಾರೆ. ಈ ಬಾಂಬ್ ದಾಳಿ ಹೊಣೆಯನ್ನು ಐಸಿಸ್ ಕೆ ಉಗ್ರ ಸಂಘಟನೆ ಹೊತ್ತು ಕೊಂಡಿದೆ. ಇದೀಗ ಹಿಂದುಸ್ಥಾನ್ ಟೈಮ್ಸ್ ಪ್ರಕಟಿಸಿದ ವರದಿಯಲ್ಲಿ ಈ ಬಾಂಬ್ ದಾಳಿ ಹಿಂದೆ ಕೇರಳದಿಂದ ಐಸಿಸ್ ಕೆ ಸೇರಿದ 14 ಮಂದಿ ಶಾಮೀಲಾಗಿದ್ದಾರೆ ಅನ್ನೋ ಅನುಮಾನ ವ್ಯಕ್ತಪಡಿಸಿದೆ.

ವೆಲ್‌ಕಂ ಟು ರಿಪಬ್ಲಿಕ್‌ ಆಫ್‌ ತಾಲಿಬಾಂಬ್‌! ಇದು ಬೆಚ್ಚಿಬೀಳಿಸುವ ಕೃತ್ಯ

ಹಿಂದೂಸ್ಥಾನ ಟೈಮ್ಸ್ ಪ್ರಕಟಿಸಿರುವ ಈ ವರದಿ ಕೆಲ ಭಯಾನಕ ಮಾಹಿತಿ ಬಹಿರಂಗಪಡಿಸಿದೆ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಕೈವಶ ಮಾಡಿದ ಬೆನ್ನಲ್ಲೇ ಜೈಲಿನಲ್ಲಿದ್ದ ಉಗ್ರರನ್ನು ಬಿಡುಗಡೆ ಮಾಡಿತ್ತು. ಹೀಗೆ ಬಿಡುಗಡೆಯಾದ ಉಗ್ರರ ಪೈಕಿ ಇಬ್ಬರು ಪಾಕಿಸ್ತಾನಿ ಮೂಲದ ಸುನ್ನಿ ಪಶ್ತೂನ್ ಉಗ್ರರು, ತುರ್ಕಮೆನಿಸ್ತಾನ್ ಎಂಬಸಿ ಸನಿಹದಲ್ಲಿ ಆಗಸ್ಟ್ 26ರಂದು ಸುಧಾರಿತ ಬಾಂಬ್((IED) ತಯಾರಿಕೆ ಮಾಡಿರುವ ಮಾಹಿತಿಯನ್ನು ಗುಪ್ತಚರ ವರದಿ ಹೇಳುತ್ತಿದೆ. 

ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಬಾಂಬ್ ಬ್ಲಾಸ್ಟ್ ಆದ ಬಳಿಕ ಕಾಬೂಲ್ ಪ್ರಾಂತ್ಯದಲ್ಲಿರುವ ತುರ್ಕಮೆನಿಸ್ತಾನ್‌ನಲ್ಲಿ ಇಬ್ಬರು ಉಗ್ರರು ಹಾಗೂ ಅವರಿಂದ ಕೆಲ IED ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪಾಕಿಸ್ತಾನ ಮೂಲದ ಇಬ್ಬರು ಉಗ್ರರನ್ನು ಕೇರಳದಿಂದ ಐಸಿಸ್ ಕೆ ಉಗ್ರ ಸಂಘಟನೆ ಸೇರಿದ 14 ಉಗ್ರರು ಸಂಪರ್ಕಿಸಿದ್ದಾರೆ ಅನ್ನೋ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.

36 ಗಂಟೆಯಲ್ಲಿ ಸೇಡು ತೀರಿಸಿದ ಅಮೆರಿಕ: ಐಸಿಸ್ ಕೆ ಮೇಲೆ ಏರ್‌ಸ್ಟ್ರೈಕ್!

ಪಾಕಿಸ್ತಾನ ಮೂಲದಿಂದ ಸ್ಫೋಟಕ ಪಡೆದ ಐಸಿಸ್ ಕೆ ಕಾಬೂಲ್ ವಿಮಾನ ಹೊರಭಾಗದಲ್ಲಿ ಸ್ಫೋಟಿಸಲಾಗಿದೆ. ಕೇರಳದಿಂದ ಉಗ್ರ ಸಂಘಟನೆ ಸೇರಿದ 14 ಮಂದಿಯಲ್ಲಿ ಓರ್ವ ಆತ್ಮಾಹುತಿ ದಾಳಿ ನಡೆಸಿದ್ದಾನೆ. ಇನ್ನುಳಿದ 13 ಮಂದಿ ಕಾಬೂಲ್‌ನಲ್ಲೇ ಇದ್ದಾರೆ. 2014ರಲ್ಲಿ ಸಿರಿಯಾದಲ್ಲಿ ಐಸಿಸ್ ನಡೆಸಿದ ದಾಳಿ ಬಳಿಕ ಕೇರಳದ ಮಲಪ್ಪುರಂ, ಕಣ್ಣೂರ್ ಹಾಗೂ ಕಾಸರಗೋಡು ಮೂಲದ 14 ಮಂದಿ ಐಸಿಸ್ ಕೆ ಉಗ್ರ ಸಂಘಟನೆ ಸೇರಿಕೊಂಡಿದ್ದರು. ಕೇರಳಿಂದ ಐಸಿಸ್ ಉಗ್ರ ಸಂಘಟನೆ ಸೇರಿಕೊಂಡ ಘಟನೆ ಈಗಾಗಲೇ ಸಾಬೀತಾಗಿದೆ. ಆದರೆ ಅವರಿಂದಲೇ ಈ ಬಾಂಬ್ ದಾಳಿ ನಡೆದಿದೆ ಅನ್ನೋ ಕುರಿತು ಅಧೀಕೃತ ಮಾಹಿತಿ ಹೊರಬಿದ್ದಿಲ್ಲ.

ಗುಪ್ತಚರ ಮಾಹಿತಿಗಳು ಹೊರಬಿದ್ದ ಬೆನ್ನಲ್ಲೇ ಭಾರತದ ಆತಂಕ ಹೆಚ್ಚಾಗಿದೆ. ಇದೀಗ ಐಸಿಸ್ ಕೆ ಸಂಘಟನೆ ಕೇರಳದಿಂದ ಉಗ್ರ ಸಂಘಟನೆ ಸೇರಿಕೊಂಡ ಉಗ್ರರನ್ನು ಭಾರತದ ವಿರುದ್ಧ ವಿದ್ವಂಸಕ ಕೃತ್ಯಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.  

click me!