3500 ಕಿ.ಮೀ ಸಾಗಬಲ್ಲ ಕೆ - 4ಬ್ಯಾಲಿಸ್ಟಿಕ್‌ ಕ್ಷಿಪಣಿ ಯಶಸ್ವಿ

Kannadaprabha News   | Kannada Prabha
Published : Dec 26, 2025, 04:25 AM IST
K 4 ballistic

ಸಾರಾಂಶ

3500 ಕಿ.ಮೀ ದೂರದವರೆಗೆ ತಲುಪಬಲ್ಲ ಸಾಮರ್ಥ್ಯದ ಕೆ-4 ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಭಾರತ ಗುರುವಾರ ಯಶಸ್ವಿಯಾಗಿ ಪ್ರಯೋಗಿಸಿದೆ. ಬಂಗಾಳಕೊಲ್ಲಿಯಲ್ಲಿ ಬೀಡುಬಿಟ್ಟಿರುವ 6000 ಟನ್‌ ತೂಕದ ಐಎನ್‌ಎಸ್‌ ಅರಿಘಾತ್‌ ಸಬ್‌ಮರೀನ್‌ನಿಂದ ಇದು ಕ್ಷಿಪಣಿಯ 2ನೇ ಪರೀಕ್ಷೆಯಾಗಿದೆ.

ನವದೆಹಲಿ: 3500 ಕಿ.ಮೀ ದೂರದವರೆಗೆ ತಲುಪಬಲ್ಲ ಸಾಮರ್ಥ್ಯದ ಕೆ-4 ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಭಾರತ ಗುರುವಾರ ಯಶಸ್ವಿಯಾಗಿ ಪ್ರಯೋಗಿಸಿದೆ. ಬಂಗಾಳಕೊಲ್ಲಿಯಲ್ಲಿ ಬೀಡುಬಿಟ್ಟಿರುವ 6000 ಟನ್‌ ತೂಕದ ಐಎನ್‌ಎಸ್‌ ಅರಿಘಾತ್‌ ಸಬ್‌ಮರೀನ್‌ನಿಂದ ಇದು ಕ್ಷಿಪಣಿಯ 2ನೇ ಪರೀಕ್ಷೆಯಾಗಿದೆ.

ಐಎನ್‌ಎಸ್‌ ಅರಿಘಾತ್‌ನಿಂದ ಕೆ-4 ಬ್ಯಾಲಿಸ್ಟಿಕ್‌ ಕ್ಷಿಪಣಿ ( ಎಸ್‌ಎಲ್‌ಬಿಎಂ) ಪರೀಕ್ಷೆ

ಬಂಗಾಳಕೊಲ್ಲಿಯಲ್ಲಿರುವ ಪರಮಾಣು ಚಾಲಿತ ಜಲಾಂತರ್ಗಾಮಿ ಐಎನ್‌ಎಸ್‌ ಅರಿಘಾತ್‌ನಿಂದ ಕೆ-4 ಬ್ಯಾಲಿಸ್ಟಿಕ್‌ ಕ್ಷಿಪಣಿ ( ಎಸ್‌ಎಲ್‌ಬಿಎಂ) ಪರೀಕ್ಷೆ ನಡೆಸಲಾಗಿದೆ. ಇದನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ. ಇದನ್ನು ಇನ್ನಷ್ಟು ಪರೀಕ್ಷೆಗೆ ಒಳಪಡಿಸಿದ ಬಳಿಕ ಸೇನೆಗೆ ಹಸ್ತಾಂತರಿಸಲಾಗುವುದು.

5000 ಕಿ.ಮೀಗಿಂತ ಎಸ್‌ಎಲ್‌ಬಿಎಗಳನ್ನು ಹೊಂದಿದೆ

ಅಮೆರಿಕ, ರಷ್ಯಾ ಮತ್ತು ಚೀನಾ ಸೇರಿದಂತೆ ಕೆಲ ದೇಶಗಳು ಈಗಾಗಲೇ 5000 ಕಿ.ಮೀಗಿಂತ ಎಸ್‌ಎಲ್‌ಬಿಎಗಳನ್ನು ಹೊಂದಿದೆ. ಇದೀಗ ಭಾರತ ಪರೀಕ್ಷಿಸಿರುವ ಈ ಕೆ- 4 ಜಾಗತಿಕ ಸಾಮರ್ಥ್ಯ ಪಡಿಸುವಲ್ಲಿ ನಿರ್ಣಾಯಕ ಎಂದೇ ವಿಶ್ಲೇಷಿಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರುಣಾಚಲದ ಮೇಲೆ ಚೀನಾ ಕಣ್ಣು : ಅಮೆರಿಕ
370ನೇ ವಿಧಿ ರದ್ದತಿ ಬಿಜೆಪಿಯ ಹೆಮ್ಮೆ : ಪ್ರಧಾನಿ ಮೋದಿ ಹರ್ಷ