Jyoti Malhotra: ಡ್ಯಾನಿಶ್​ ಸ್ನೇಹಿತನ ಕೋಣೆಯಲ್ಲಿ 4 ಗಂಟೆ ಜ್ಯೋತಿ: ಈಕೆ ತಗ್ಲಾಕ್ಕೊಂಡ ಕಥೆಯೇ ರೋಚಕ!

Published : May 25, 2025, 06:51 PM IST
  Jyoti Malhotra stayed in Danish

ಸಾರಾಂಶ

ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಶಂಕೆಯ ಮೇಲೆ ಬಂಧಿತಳಾದ ಜ್ಯೋತಿ ಮಲ್ಹೋತ್ರಾಳ ಮೇಲೆ ವರ್ಷದಿಂದಲೂ ತನಿಖಾ ಸಂಸ್ಥೆ ಕಣ್ಣಿಟ್ಟಿತ್ತು. ಡ್ಯಾನಿಶ್‌ ಸ್ನೇಹಿತನ ಕೋಣೆಯಲ್ಲಿ ನಾಲ್ಕು ಗಂಟೆ ಕಳೆದ ನಂತರ ಅವಳ ಕೃತ್ಯ ಬಯಲಾಯಿತು.

ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಶಂಕೆಯ ಮೇಲೆ ಬಂಧಿಸಲ್ಪಟ್ಟ ಹರಿಯಾಣದ ಜ್ಯೋತಿ ಮಲ್ಹೋತ್ರಾಳನ್ನು ಏಕಾಏಕಿ ಏಕೆ ಬಂಧಿಸಲಾಯಿತು, ಆಕೆ ಒಮ್ಮೇಲೇ ಸಿಕ್ಕಬಿದ್ದಳಾ? ತನಿಖೆ ಏನೂ ನಡೆಸದೇ ಅವಳನ್ನು ಒಮ್ಮೇಲೇ ಅರೆಸ್ಟ್​ ಮಾಡಲಾಯಿತಾ ಎನ್ನುವ ಹಲವಾರು ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿರುವುದು ಇದೆ. ಆದರೆ ಈಕೆಯ ಮೇಲೆ ವರ್ಷದಿಂದಲೂ ತನಿಖಾ ಸಂಸ್ಥೆ ಕಣ್ಣಿಟ್ಟಿತ್ತು. ಪಾಕಿಸ್ತಾನದ ಗೆಳೆಯ ಡ್ಯಾನಿಶ್‌ ಸ್ನೇಹಿತನ ಕೋಣೆಯಲ್ಲಿ ನಾಲ್ಕು ಗಂಟೆಗಳ ಕಾಲ ಈಕೆ ಇದ್ದು ನಡೆಸಿದ್ದ ಕೃತ್ಯದಿಂದ ಕೊನೆಗೂ ಅಸಲಿಯತ್ತು ಬಯಲಾಗಿ ಅರೆಸ್ಟ್​ ಆಗಿದ್ದಾಳೆ ಈ ದೇಶದ್ರೋಹಿ! ಪಾಕಿಸ್ತಾನದ ಎರಡನೇ ಪ್ರವಾಸದ ಸಮಯದಲ್ಲಿ ಭದ್ರತಾ ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದ್ದಳು. ಜ್ಯೋತಿ ಸುಮಾರು ಒಂದು ವರ್ಷ ಗುಪ್ತಚರ ಬ್ಯೂರೋ (ಐಬಿ) ಯ ಕಣ್ಗಾವಲಿನಲ್ಲಿದ್ದಳು. ಆಕೆಯ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿತ್ತು. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಜ್ಯೋತಿ ಪಾಕಿಸ್ತಾನ ಗುಪ್ತಚರ ಆಪರೇಟಿವ್ (ಪಿಐಒ) ಜೊತೆ ಸಂಪರ್ಕದಲ್ಲಿರುವುದು ತಿಳಿದು ಬಂದ ನಂತರವಷ್ಟೇ ತನಿಖೆಗೆ ಒಳಪಡಿಸಲಾಗಿದೆ.

ಮೂಲಗಳ ಪ್ರಕಾರ, ಜ್ಯೋತಿ ಮಲ್ಹೋತ್ರಾ 2023 ರಲ್ಲಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಹೋದಾಗ, ಅದನ್ನು ಸಾಮಾನ್ಯ ವಿಷಯವೆಂದು ಪರಿಗಣಿಸಲಾಗಿತ್ತು. ಇದಾದ ನಂತರ, ಅವರು 2024 ರಲ್ಲಿ ಎರಡನೇ ಬಾರಿಗೆ ಪಾಕಿಸ್ತಾನಕ್ಕೆ ಹೋದಾಗ, ಪಾಕಿಸ್ತಾನಿ ರಾಯಭಾರ ಕಚೇರಿಯೊಂದಿಗೆ ಸಂಬಂಧ ಹೊಂದಿದ್ದ ಡ್ಯಾನಿಶ್ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಭೇಟಿಯಾದಳು. ಅವಳು ಡ್ಯಾನಿಶ್‌ನ ಪರಿಚಯಸ್ಥನೊಂದಿಗೆ ಕೋಣೆಯಲ್ಲಿ ನಾಲ್ಕು ಗಂಟೆಗಳ ಕಾಲ ಇದ್ದಳು. ಅಲ್ಲಿ ಅವಳಿಗೆ ವಿಐಪಿ ಟ್ರೀಟ್​ಮೆಂಟ್​ ನಡೆದಿತ್ತು. ಈ ಉಪಚಾರದ ಬಳಿಕ ತನಿಖಾ ಸಂಸ್ಥೆಗಳ ಸಂದೇಹ ಇನ್ನಷ್ಟು ಹೆಚ್ಚಾಯಿತು. ಇದಾದ ನಂತರ, ತನಿಖಾ ಸಂಸ್ಥೆಗಳು ಜ್ಯೋತಿ ಮಲ್ಹೋತ್ರಾಳ ಮೇಲೆ ತೀವ್ರ ನಿಗಾ ಇಟ್ಟಿದ್ದವು. ಈಕೆ ಮೂರನೇ ಬಾರಿಗೆ ಕರ್ತಾರ್‌ಪುರ ಸಾಹಿಬ್ ಗುರುದ್ವಾರವನ್ನು ತಲುಪಿದ್ದಳು. ಅಲ್ಲಿ ಪಾಕಿಸ್ತಾನದ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಮರಿಯಮ್ ಷರೀಫ್ ಅವರನ್ನು ಸಂದರ್ಶಿಸಿದ್ದಳು. ಅಲ್ಲಿಯೂ ವಿಐಪಿ ಉಪಚಾರ ನೀಡಲಾಯಿತು.

ಇದಾದ ನಂತರ ಇವಳ ಇತಿಹಾಸ ತಿಳಿದುಕೊಳ್ಳಲು ತನಿಖಾ ಸಂಸ್ಥೆ ಆರಂಭಿಸಿದವು. ಕಾಶ್ಮೀರದ ಪಹಲ್ಗಾಮ್ ಘಟನೆಯ ನಂತರ, ಪಾಕಿಸ್ತಾನಿ ರಾಯಭಾರ ಕಚೇರಿಯೊಂದಿಗೆ ಸಂಬಂಧ ಹೊಂದಿದ್ದ ಡ್ಯಾನಿಶ್​ನನ್ನು ಭಾರತವು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಿತು. ಡ್ಯಾನಿಶ್ ಜೊತೆ ಸಂಪರ್ಕದಲ್ಲಿದ್ದ ಜನರನ್ನೂ ತನಿಖೆ ಮಾಡಲು ಪ್ರಾರಂಭಿಸಲಾಯಿತು. ಇದರಲ್ಲಿ, ಜ್ಯೋತಿ ಅವರೊಂದಿಗೆ ಹಲವಾರು ಬಾರಿ ಮಾತನಾಡಿದ ದಾಖಲೆ ಕಂಡುಬಂದಾಗ ಸಂದೇಹ ಬಲವಾಯಿತು. ಈಕೆ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಏಜೆನ್ಸಿಗಳು ಕಂಡುಕೊಂಡವು. ಕರೆ ವಿವರ ದಾಖಲೆಗಳನ್ನು ಪಡೆದ ನಂತರ, ಈ ಎಲ್ಲಾ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಮೇ 16 ರಂದು ಜ್ಯೋತಿ ಮಲ್ಹೋತ್ರಾಳನ್ನು ಬಂಧಿಸಿದರು.

 

ಪೊಲೀಸರು ಜ್ಯೋತಿಯ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಅನ್ನು ತನಿಖೆಗಾಗಿ ಮಧುಬನ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಲ್ಯಾಪ್‌ಟಾಪ್ ಡೇಟಾ ಇನ್ನೂ ಬಂದಿಲ್ಲ. ಜ್ಯೋತಿಯ ತಂದೆ ಬಳಿ ಸಾಮಾನ್ಯ ಕೀಪ್ಯಾಡ್ ಫೋನ್ ಇತ್ತು, ಅದನ್ನು ತನಿಖೆಗೆ ಕಳುಹಿಸಲಾಗಿತ್ತು ಮತ್ತು ಅದರಲ್ಲಿ ಏನೂ ಕಂಡುಬಂದಿಲ್ಲ. ಕರೆ ವಿವರಗಳು ಮತ್ತು ಸಂದೇಶಗಳನ್ನು ಪರಿಶೀಲಿಸಿದ ನಂತರ, ಜ್ಯೋತಿಯ ತಂದೆ ಹರೀಶ್ ಮಲ್ಹೋತ್ರಾ ಅವರ ಮೊಬೈಲ್ ಅನ್ನು ಹಿಂತಿರುಗಿಸಲಾಗಿದೆ. ಜ್ಯೋತಿಗೆ ವೀಸಾ ಪಡೆಯಲು ಸಹಾಯ ಮಾಡಿದ ಹರ್ಕಿರತ್ ಅವರ ಮೊಬೈಲ್ ವಿವರಗಳು ಸಹ ಪೊಲೀಸರಿಗೆ ಸಿಕ್ಕಿಲ್ಲ. ಜ್ಯೋತಿಯ ಲ್ಯಾಪ್‌ಟಾಪ್‌ನಲ್ಲಿರುವ ಡೇಟಾದ ಮೇಲೆ ಪೊಲೀಸರು ಹೆಚ್ಚಿನ ಭರವಸೆ ಹೊಂದಿದ್ದಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಪಂಜಾಬ್ ಪೊಲೀಸರ ಪ್ರಶ್ನೆಗಳಿಗೆ ಜ್ಯೋತಿ ಅಳತೆ ಮಾಡಿದ ಉತ್ತರಗಳನ್ನು ನೀಡುತ್ತಿದ್ದಾರೆ.

ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಪಂಜಾಬ್ ಪೊಲೀಸರ ವಿಶೇಷ ತನಿಖಾ ತಂಡವು ಜ್ಯೋತಿ ಮಲ್ಹೋತ್ರಾಳ ವಿಚಾರಣೆಗೆ ಹಿಸಾರ್‌ಗೆ ತಲುಪಿದೆ. ಮೂರು ರಾಜ್ಯಗಳ ಎಸ್‌ಐಟಿ ತಮ್ಮ ಪ್ರಶ್ನೆಗಳ ಪಟ್ಟಿಯನ್ನು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ನೀಡಿತು. ಕೆಲವು ಗಂಭೀರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಆಕೆ ಮೌನವಾಗಿರುವುದು ತಿಳಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!