4 ಕಿ.ಮೀ. ನಡೆದು, ಲಾರಿ ಹತ್ತಿ ಉದ್ಧವ್‌ ಬಣ ಸೇರಿದ ಶಿಂಧೆ ಬಣದ ಶಾಸಕ!

Published : Jun 25, 2022, 12:00 PM ISTUpdated : Jun 25, 2022, 12:13 PM IST
4 ಕಿ.ಮೀ. ನಡೆದು, ಲಾರಿ ಹತ್ತಿ ಉದ್ಧವ್‌ ಬಣ ಸೇರಿದ ಶಿಂಧೆ ಬಣದ ಶಾಸಕ!

ಸಾರಾಂಶ

* ಮಹಾರಾ‍ಷ್ಟ್ರ ರಾಜಕೀಯ ವಲಯದಲ್ಲಿ ಬಿಕ್ಕಟ್ಟು * ಶಿಂಧೆ ಬಣ ಸೇರಿದ ಉದ್ಧವ್ ಶಾಸಕರು * 4 ಕಿ.ಮೀ. ನಡೆದು, ಲಾರಿ ಹತ್ತಿ ಉದ್ಧವ್‌ ಬಣ ಸೇರಿದ ಶಿಂಧೆ ಬಣ ಶಾಸಕ  

ಮುಂಬೈ(ಜೂ.25): ಶಿವಸೇನೆಯ ಬಹುತೇಕ ಶಾಸಕರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಣದಿಂದ ಬಂಡಾಯ ನಾಯಕ ಎಕನಾಥ್‌ ಶಿಂಧೆ ಗುಂಪಿಗೆ ಜಿಗಿಯುತ್ತಿರುವಾಗಲೇ, ಶಾಸಕರೊಬ್ಬರು ಸಿನಿಮೀಯ ರೀತಿಯಲ್ಲಿ ಶಿಂಧೆ ಗುಂಪನಿಂದ ಉದ್ಧವ್‌ ಗುಂಪಿಗೆ ಮರಳಿದ ಘಟನೆಯೊಂದು ನಡೆದಿದೆ.

ಮೂಲಗಳ ಪ್ರಕಾರ ಸೇನೆಯ 6 ಶಾಸಕರನ್ನು ಗುಜರಾತ್‌ಗೆ ಬರುವಂತೆ ಶಿಂಧೆ ಗುಂಪು ಸೂಚಿಸಿತ್ತು. ಅದರಂತೆ 6 ಶಾಸಕರು ಗುಂಪು ಮುಂಬೈನಿಂದ ಗುಜರಾತ್‌ನತ್ತ ಪ್ರಯಾಣ ಬೆಳೆಸಿತ್ತು. ಹೀಗೆ ಕಾರು ಗುಜರಾತ್‌ ಗಡಿ ಪ್ರವೇಶಿಸುತ್ತಲೇ, ಕಾರಿನಲ್ಲಿದ್ದ ಒಬ್ಬ ಶಾಸಕಗೆ ಬಂಡಾಯಕ್ಕೆ ಮನಸ್ಸಾಗದೇ ಕಾರಿನಿಂದ ಇಳಿದಿದ್ದಾರೆ. ಹೀಗೆ ಇಳಿದ ಆ ಶಾಸಕರು ರಸ್ತೆಯಲ್ಲಿ ಸಿಕ್ಕ ಬೈಕ್‌ ಸವಾರನಿಂದ ಕೆಲ ದೂರದವರೆಗೆ ಡ್ರಾಪ್‌ ಪಡೆದಿದ್ದಾರೆ. ಬಳಿಕ 4 ಕಿ.ಮೀ ನಡೆದುಕೊಂಡೇ ಬಂದಿದ್ದಾರೆ. ಬಳಿಕ ಅವರಿಗೆ ರಸ್ತೆಯಲ್ಲಿ ಲಾರಿಯೊಂದು ಸಿಕ್ಕಿದೆ. \

ಅದನ್ನು ಏರಿದ ಈ ಅನಾಮಿಕ ಶಾಸಕ ದಹಿಸರ್‌ವರೆಗೆ ಬಂದು, ಅಲ್ಲಿಂದ ಸೀದಾ ಸಿಎಂ ಉದ್ಧವ್‌ ಮನೆ ಸೇರಿಕೊಂಡಿದ್ದಾರೆ. ಅಲ್ಲಿಗೆ ಬಂದ ಬಳಿಕ ತಮ್ಮ ಸಾಹಸಮಯ ಕಥೆಯನ್ನು ಸ್ವತಃ ಶಾಸಕರೇ ಸಿಎಂ ಉದ್ಧವ್‌ಗೆ ತಿಳಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

 7 ದಿನದ ಟಾರ್ಗೆಟ್‌ ಜೊತೆ ಹೋಟೆಲ್ ಸೇರಿದ ರೆಬೆಲ್ ಶಾಸಕರು, ಪ್ರತಿದಿನ 8 ಲಕ್ಷ ಖರ್ಚು!

ಅಸ್ಸಾಂ ಪ್ರಸ್ತುತ ಎರಡು ಕಾರಣಗಳಿಗಾಗಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಚರ್ಚೆಯಲ್ಲಿದೆ. ಮೊದಲನೆಯದು - ತೀವ್ರ ಪ್ರವಾಹವು ಇಲ್ಲಿ ಭೀಕರ ವಿನಾಶವನ್ನು ಉಂಟುಮಾಡಿದೆ. ಎರಡನೆಯದು - ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಯುದ್ಧದ ಚದುರಂಗದಾಟದಿಂದ. ಹೌದು ಗುವಾಹಟಿಯಲ್ಲಿರುವ ಫೈವ್‌ ಸ್ಟಾರ್ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ, ಶಿವಸೇನೆಯ ಬಂಡಾಯಗಾರ ಏಕನಾಥ್ ಶಿಂಧೆ ಉಳಿದ ಶಾಸಕರೊಂದಿಗೆ ಕುಳಿತು ರಾಜಕೀಯ ತಂತ್ರಗಳನ್ನು ಆಡುತ್ತಿದ್ದಾರೆ. ಬಂಡಾಯ ಶಾಸಕರಿಗಾಗಿ ಇಲ್ಲಿ 70 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂಬುವುದು ಉಲ್ಲೇಖನೀಯ. ಅವರ ಒಂದು ವಾರದ ಖರ್ಚು ಸುಮಾರು 56 ಲಕ್ಷ ರೂಪಾಯಿಗಳು. ಅಂದರೆ, ಆಹಾರ ಮತ್ತು ಇತರ ಎಲ್ಲ ಸೇವೆಗಳನ್ನು ಸೇರಿಸಿ ಪ್ರತಿದಿನ ಸುಮಾರು 8 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ ಎಲ್ಲವನ್ನೂ ದೊಡ್ಡ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಅತ್ತ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪ್ರವಾಹ ಪೀಡಿತ ಪ್ರದೇಶಗಳು ಹಾಗೂ ರಾಜಕೀಯ ಬೆಳವಣಿಗೆಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.

ಇನ್ನು 7 ದಿನಗಳಲ್ಲಿ ಎಲ್ಲವೂ ತಲೆಕೆಳಗಾಗುತ್ತದೆ

ಏಕನಾಥ್ ಶಿಂಧೆ ಮತ್ತು ತಂಡಕ್ಕಾಗಿ ಹೋಟೆಲ್ ರಾಡಿಸನ್ ಬ್ಲೂನಲ್ಲಿ 7 ದಿನಗಳವರೆಗೆ 70 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಶಾಸಕರು ಬುಧವಾರ (ಜೂನ್ 22) ಇಲ್ಲಿಗೆ ಆಗಮಿಸಿದ್ದರು. ಇದಕ್ಕೂ ಮುನ್ನ, ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌ನಲ್ಲಿರುವ ಹೋಟೆಲ್‌ನಲ್ಲಿ ಬಂಡುಕೋರರು (ಜೂನ್ 20) ಬೀಡು ಬಿಟ್ಟಿದ್ದರು. ಅಂದರೆ, ಒಂದು ವಾರದೊಳಗೆ ರಾಜಕೀಯ ಕಾಯಿಗಳು ಬದಲಾಗುತ್ತವೆ ಎಂಬ ಭಾವನೆ ಏಕನಾಥ್ ಶಿಂಧೆಯವರದ್ದು. ಅದೇನೆಂದರೆ, ಇನ್ನೆರಡು ದಿನದಲ್ಲಿ ಮಹಾರಾಷ್ಟ್ರದ ರಾಜಕೀಯ ತಿರುವು ಪಡೆದುಕೊಳ್ಳಬಹುದು.

ಹೋಟೆಲ್ 196 ಕೊಠಡಿಗಳನ್ನು ಹೊಂದಿದೆ, ಆದರೆ ಹೊಸ ಬುಕಿಂಗ್‌ಗಳನ್ನು ಮುಚ್ಚಲಾಗಿದೆ

ಹೋಟೆಲ್ ರಾಡಿಸನ್ ಬ್ಲೂ 196 ಕೊಠಡಿಗಳನ್ನು ಹೊಂದಿದೆ. ಶಾಸಕರು ಮತ್ತು ಅವರ ತಂಡಗಳಿಗಾಗಿ ಕಾಯ್ದಿರಿಸಿದ 70 ಕೊಠಡಿಗಳನ್ನು ಹೊರತುಪಡಿಸಿ, ಹೋಟೆಲ್ ಆಡಳಿತವು ಪ್ರಸ್ತುತ ಹೊಸ ಬುಕಿಂಗ್ ಮಾಡುತ್ತಿದೆ. ಈಗಾಗಲೇ ಕಾರ್ಪೊರೇಟ್ ಬುಕ್ಕಿಂಗ್ ಹೊಂದಿರುವವರು ಮಾತ್ರ ಇಲ್ಲಿಗೆ ತೆರಳಲು ಸಾಧ್ಯವಾಗುತ್ತದೆ. ಹೋಟೆಲ್‌ನಲ್ಲಿ ಉಳಿದುಕೊಂಡವರಿಗೆ, ರೆಸ್ಟೋರೆಂಟ್ ತೆರೆದಿರುತ್ತದೆ, ಉಳಿದ ಔತಣಕೂಟವನ್ನು ಮುಚ್ಚಲಾಗುತ್ತದೆ.

ಏಕನಾಥ್ ಶಿಂಧೆ ಅವರ ಬೇಡಿಕೆಯ ಮೇರೆಗೆ, ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗಿನ ಮಹಾರಾಷ್ಟ್ರ ಆಡಳಿತ ಮೈತ್ರಿಯಿಂದ ಹೊರಬರುವುದನ್ನು ಪರಿಗಣಿಸುವುದಾಗಿ ಶಿವಸೇನೆ ಹೇಳಿದೆ, ಆದರೆ ಬಂಡಾಯ ಸಾಶಕರು ಹಿಂತಿರುಗಿದರಷ್ಟೇ ಹೀಗೆ ಮಾಡುವುದಾಗಿ ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಸಂಜಯ್ ರಾವತ್ ಅವರು ಏಕನಾಥ್ ಶಿಂಧೆಗೆ ಎಚ್ಚರಿಕೆ ನೀಡಿ ನಮಗೆ ಸವಾಲು ಹಾಕುತ್ತಿರುವ ಏಕನಾಥ್ ಶಿಂಧೆ ಬಣ ಶಿವಸೇನೆಯ ಕಾರ್ಯಕರ್ತರು ಇನ್ನೂ ಬೀದಿಗೆ ಬಂದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಂತಹ ಯುದ್ಧಗಳನ್ನು ಕಾನೂನಿನ ಮೂಲಕ ಅಥವಾ ಬೀದಿಗಳಲ್ಲಿ ಹೋರಾಡಲಾಗುತ್ತದೆ. ಬೇಕಾದರೆ ನಮ್ಮ ಕಾರ್ಯಕರ್ತರು ಬೀದಿಗಿಳಿಯುತ್ತಾರೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!