
ನವದೆಹಲಿ(ಫೆ.02): ಸರ್ಕಾರವನ್ನು ಟೀಕಿಸುವ ವಿರೋಧಿಸುವ ಬರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಪ್ರಜಾಪ್ರಭುತ್ವದ ಪ್ರಮುಖ ಸಂಸ್ಥೆಗಳ ಕಾರ್ಯವನ್ನೇ ಪ್ರಶ್ನಿಸಿ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದ್ದಾರೆ. ನ್ಯಾಯಾಂಗ(judiciary), ಚುನಾವಣಾ ಆಯೋಗ(election commission) ಹಾಗೂ ಪೆಗಾಸಸ್ ಸ್ಪೈವೇರ್(pegasus spyware) ಬಳಸಿ ಕೇಂದ್ರ ಸರ್ಕಾರ ರಾಜ್ಯಗಳ ಒಕ್ಕೂಟದ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅತೀದೊಡ್ಡ ಪ್ರಮಾದವನ್ನೇ ಮಾಡಿದ್ದಾರೆ. ಕಾರಣ ಕೇಂದ್ರ ಸರ್ಕಾರ ನ್ಯಾಯಾಂಗ ಹಾಗೂ ಚುನಾವಣಾ ಆಯೋಗವನ್ನು ಸಾಧನವಾಗಿ ಬಳಸಿಕೊಳ್ಳುತ್ತಿದೆ ಅನ್ನೋ ಮಾತು ಇದೀಗ ವಿರೋಧಕ್ಕೆ ಕಾರಣವಾಗಿರುವುದು. ಭಾರತದ ನ್ಯಾಯಾಂಗ ವ್ಯವಸ್ಥೆ ಸ್ವತಂತ್ರ ಸಂಸ್ಥೆಯಾಗಿದೆ. ಇದೇ ರೀತಿ ಚುನಾವಣಾ ಆಯೋಗ ಕೂಡ ಸ್ವತಂತ್ರ ಸಂಸ್ಥೆಯಾಗಿದೆ. ಆದರೆ ಇವೆರಡನ್ನು ಕೇಂದ್ರ ಸರ್ಕಾರ ರಾಜ್ಯಗಳ ಒಕ್ಕೂಟ ಧ್ವನಿಯನ್ನು ನಾಶಪಡಿಸಲು ಬಳಸುತ್ತಿದೆ ಎಂದಿದ್ದಾರೆ.
Report on Pegasus :ಮತ್ತೆ ಭುಗಿಲೆದ್ದ ಪೆಗಾಸಸ್ ವಿವಾದ!
ರಾಹುಲ್ ಗಾಂಧಿ ಈ ಮಾತು ಇದೀಗ ವೈರಲ್ ಆಗಿದೆ. ಇಷ್ಟೇ ಅಲ್ಲ ಕೇಂದ್ರದ ಒಬ್ಬೊಬ್ಬ ಸಚಿವರು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರೂ ರಾಹುಲ್ ಗಾಂಧಿ ಮಾತಿನಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ಕಾನೂನು ಮಂತ್ರಿ ಕಿರಣ್ ರಿಜಿಜು ಈ ಕುರಿತು ಟ್ವೀಟ್ ಮೂಲಕ ರಾಹುಲ್‌ಗಾಂಧಿ ಮಾತನ್ನು ಖಂಡಿಸಿದ್ದಾರೆ.
ಭಾರತದ ಕಾನೂನು ಮಂತ್ರಿಯಾಗಿ ಮಾತ್ರವಲ್ಲ, ಸಾಮಾನ್ಯ ಪ್ರಜೆಯಾಗಿ ರಾಹುಲ್ ಗಾಂಧಿ ಮಾತನ್ನು ಖಂಡಿಸುತ್ತೇನೆ. ನ್ಯಾಯಾಂಗ ಮತ್ತು ಚುನಾವಣಾ ಆಯೋಗದ ಕುರಿತ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ನ್ಯಾಯಾಂಗ ಹಾಗೂ ಚುನಾವಣಾ ಆಯೋಗ ಭಾರತದ ಪ್ರಜಾಪ್ರಭುತ್ವದ ಪ್ರಮುಖ ಸಂಸ್ಥೆ. ತಕ್ಷಣ ರಾಹುಲ್ ಗಾಂಧಿ, ನ್ಯಾಯಾಂಗ, ಆಯೋಗ ಹಾಗೂ ದೇಶದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿ ಭಾಷಣದ ಬಳಿಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ರಾಹುಲ್ ಭಾಷಣ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ. ರಾಜ್ಯಗಳ ಜೊತೆ ಮಾತನಾಡದೆ, ಏಕನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಕೇಂದ್ರ ಸರ್ಕಾರ ಮಾಡುತ್ತಿದೆ. ಕೇಂದ್ರದ ರಾಜ ಯಾವುದನ್ನೇ ಆಲಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಕುಟುಕಿದ್ದಾರೆ.
ಕೇಂದ್ರ ಸರ್ಕಾರದ ಒತ್ತಡದಿಂದ ತಮ್ಮ ಟ್ವೀಟರ್ ಫಾಲೊವರ್ಸ್ ಸಂಖ್ಯೆ ಕುಸಿತ: ರಾಹುಲ್ ಗಾಂಧಿ ಆರೋಪ!
ಭಾರತದಲ್ಲಿ ಶ್ರೀಮಂತ ಹಾಗೂ ಬಡವ ಎರಡು ವರ್ಗ ಹಾಗೂ ನಡುವಿನ ಅಂತರ ದೊಡ್ಡದಾಗಿದೆ. ಮಧ್ಯಮ ವರ್ಗದ ಜನ ಬಡವರಾಗಿದ್ದಾರೆ. ಬಡವರು ಕಡು ಬಡವರಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಮಾತು ಮಾತಿಗೆ ಮೇಡ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಎಂದು ಬೊಗಳೆ ಬಿಡುತ್ತಿದೆ. ಆದರೆ ಈ ಹೆಸರಿನಲ್ಲಿ ಭಾರತ ಮೇಡ್ ಇನ್ ಇಂಡಿಯಾವನ್ನು ನಾಶಮಾಡಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ವ್ಯಾಪಾರವನ್ನು ಬೆಂಬಲಿಸದ ಹೊರತು ಮೇಕ್ ಇನ್ ಇಂಡಿಯಾ ಪೂರ್ಣಗೊಳ್ಳುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮೋದಿ ಸರ್ಕಾರ ಸ್ಟಾರ್ಟ್ ಅಪ್ ಕುರಿತು ಬಣ್ಣದ ಮಾತು ಆಡುತ್ತಿದೆ. ಆದರೆ ಭಾರತದಲ್ಲಿ ಯುಪಿಎ ಸರ್ಕಾರ 27 ಕೋಟಿ ಮಂದಿಯನ್ನು ಬಡತನದಿಂದ ಹೊರಬರಲು ನೆರವಾಗಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರ 23 ಕೋಟಿ ಮಂದಿಯನ್ನು ಬಡತನಕ್ಕೆ ತಳ್ಳಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ