
ಕೌಟುಂಬಿಕ ಕಲಹ (Family conflict )ದ ನಂತ್ರ ದಂಪತಿ ಕೋರ್ಟ್ ಮೆಟ್ಟಿಲೇರ್ತಾರೆ. ಅನೇಕ ಬಾರಿ ದಂಪತಿಯ ಮಧ್ಯೆ ಹೊಂದಾಣಿಕೆ ನಡೆಸುವ ಪ್ರಯತ್ನ ಕೋರ್ಟ್ ನಲ್ಲಿ ನಡೆಯುತ್ತದೆ. ಜಡ್ಜ್ (Judge), ದಾರಿ ತಪ್ಪುತ್ತಿರುವ ದಂಪತಿಗೆ ಸೂಕ್ತ ಸಲಹೆ ನೀಡಿ, ಅವರ ಮನವೊಲಿಸಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಮತ್ತೊಂದಿಷ್ಟು ಅವಕಾಶ ನೀಡುತ್ತಾರೆ. ಹೊಂದಾಣಿಕೆ ಪ್ರಯತ್ನದ ವೇಳೆ ಜಡ್ಜ್ ಒಬ್ಬರು ಹೇಳಿದ ಮಾತು ಈಗ ಚರ್ಚೆಯ ವಿಷ್ಯವಾಗಿದೆ. ವಕೀಲರೊಬ್ಬರು, ಜಡ್ಜ್ ಮಾತನ್ನು ಖಂಡಿಸಿದ್ದಾರೆ. ಆದ್ರೆ ಜಡ್ಜ್ ವಿರುದ್ಧ ದೂರು ನೀಡುವ ಯಾವುದೇ ಆಯ್ಕೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಕೀಲ ಅಂಕುರ್ ಆರ್ ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ನ್ಯಾಯಾಧೀಶರ ಹೇಳಿಕೆಯನ್ನು ವಿವರಿಸಿದ್ದಲ್ಲದೆ, ಅವರ ಹೇಳಿಕೆ ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಒಂದು ದಿನ ಕೋರ್ಟ್ ನಲ್ಲಿದ್ದ ವೇಳೆ ನ್ಯಾಯಾಧೀಶರ ಮುಂದೆ ದಂಪತಿ ಪ್ರಕರಣವೊಂದು ಬಂದಿತ್ತು. ದಂಪತಿಯನ್ನು ಮನವೊಲಿಸಲು ನ್ಯಾಯಾಧೀಶರು ಮುಂದಾಗಿದ್ದರು. ನೀವು ಮಂಗಳಸೂತ್ರ ಮತ್ತು ಬಿಂದಿಯನ್ನು ಧರಿಸಿದಂತೆ ಕಾಣುವುದಿಲ್ಲ. ನೀವು ವಿವಾಹಿತ ಮಹಿಳೆಯಂತೆ ವರ್ತಿಸದಿದ್ದರೆ ನಿಮ್ಮ ಪತಿ ನಿಮ್ಮಲ್ಲಿ ಏಕೆ ಆಸಕ್ತಿ ತೋರುತ್ತಾರೆ ? ಎಂದು ಪ್ರಶ್ನೆ ಕೇಳಿದ್ದಾರೆ ಎಂದು ಅಂಕುರ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ವಿವಾಹಿತ ತಂಗಿ ಜೊತೆ ಲಿವ್‌ಇನ್ ರಿಲೇಷನ್‌ಷಿಪ್‌ನಲ್ಲಿದ್ದ ಅಣ್ಣ, ಭಾವ ಮಧ್ಯೆ ಬಂದಾಗ ಏನಾಯ್ತು..
ಅಷ್ಟೇ ಅಲ್ಲದೆ ಇನ್ನೊಂದು ಪ್ರಕರಣವನ್ನು ಅವರು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ. ಮಧ್ಯಸ್ಥಿಕೆಯ ಸಮಯದಲ್ಲಿ ನ್ಯಾಯಾಧೀಶರು ನನ್ನ ಮಹಿಳಾ ಕಕ್ಷಿದಾರರಿಗೆ ಒಬ್ಬ ಮಹಿಳೆ ಚೆನ್ನಾಗಿ ಸಂಪಾದಿಸುತ್ತಿದ್ದರೆ, ಅವಳು ಯಾವಾಗಲೂ ತನಗಿಂತ ಹೆಚ್ಚು ಸಂಪಾದಿಸುವ ಗಂಡನನ್ನು ಹುಡುಕುತ್ತಾಳೆ. ಕಡಿಮೆ ಸಂಪಾದಿಸುವ ಹುಡುಗನನ್ನು ಎಂದೂ ಒಪ್ಪುವುದಿಲ್ಲ. ಆದರೆ, ಚೆನ್ನಾಗಿ ಸಂಪಾದಿಸುವ ಪುರುಷ ಮದುವೆಯಾಗಲು ಬಯಸಿದರೆ, ಅವನು ತನ್ನ ಮನೆಯಲ್ಲಿ ಪಾತ್ರೆ ತೊಳೆಯುವ ಸೇವಕಿಯನ್ನು ಸಹ ಮದುವೆಯಾಗಬಹುದು. ಪುರುಷರು ಎಷ್ಟು ಹೊಂದಿಕೊಳ್ಳುವವರು ನೋಡಿ. ನೀವು ಸ್ವಲ್ಪ ಹೊಂದಿಕೊಳ್ಳಬೇಕು. ಅಷ್ಟು ಕಠಿಣವಾಗಿ ವರ್ತಿಸಬೇಡ ಎಂದಿದ್ದರು ಎಂದು ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ನ್ಯಾಯಾಧೀಶರು ಇಂಥ ಸಲಹೆ ನೀಡಿದರೂ ದುರದೃಷ್ಟವಶಾತ್ ಅವರ ವಿರುದ್ಧ ದೂರು ನೀಡಲು ಯಾವುದೇ ಮಾರ್ಗವಿಲ್ಲ. ನನಗೆ ನ್ಯಾಯಾಧೀಶರ ಈ ಕಮೆಂಟ್ ಇಷ್ಟವಾಗಲಿಲ್ಲ. ಅತ್ಯಂತ ನಿರಾಶಾದಾಯಕ ವಿಷ್ಯ ಅಂದ್ರೆ ಕಕ್ಷಿದಾರರಾಗಲಿ ಅಥವಾ ನನ್ನಂತಹ ಯಾವುದೇ ವೀಕ್ಷಕರಾಗಲಿ ನ್ಯಾಯಾಧೀಶರು ಮಾಡಿದ ಇಂತಹ ಮೊಂಡುತನದ ಕಾಮೆಂಟ್‌ಗಳ ವಿರುದ್ಧ ದೂರು ನೀಡಲು ಯಾವುದೇ ಮಾರ್ಗ ಇಲ್ಲ ಎಂದು ವಕೀಲರು ಬರೆದಿದ್ದಾರೆ.
ED arrests SDPI chief: ಪಿಎಫ್ಐ ಬ್ಯಾನ್ ನಂತರ ಎಸ್‌ಡಿಪಿಐ ಪಕ್ಷವೂ ಬ್ಯಾನ್ ಆಗುತ್ತಾ..?
ವಕೀಲ ಅಂಕುರ್ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಳಕೆದಾರರು ಇದಕ್ಕೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ನಾನು ಇಂತಹ ಅಸಮಂಜಸ ಕಾಮೆಂಟ್‌ಗಳನ್ನು ಅನುಭವಿಸಿದ್ದೇನೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬರು, ಜಿಲ್ಲಾ ಮಟ್ಟದ ನ್ಯಾಯಾಧೀಶರಿಗೆ ಮೃದು ಕೌಶಲ್ಯ ತರಬೇತಿ ಮತ್ತು ಸಂವೇದನೆ ಅಗತ್ಯವಿದೆ ಎಂದಿದ್ದಾರೆ. ನೀವು ಪ್ರಕರಣದಲ್ಲಿ ಸೋತಂತೆ ಕಾಣುತ್ತಿದೆ. ನಿಮ್ಮ ಮೂಲ ಮತ್ತು ನೈತಿಕತೆಯನ್ನು ಮರೆಯಬೇಡಿ ಎಂದು ಸಲಹೆ ನೀಡಿದ್ದಾರೆ. ನ್ಯಾಯಾಧೀಶರು ಹೆಚ್ಚು ವ್ಯವಹಾರಿಕವಾಗಿರಬೇಕು. ಆಗ ಮಾತ್ರ ಸುಧಾರಣೆಯ ಸಾಧ್ಯ, ನ್ಯಾಯಾಂಗದಲ್ಲಿ ಸುಧಾರಣೆಯ ಅವಶ್ಯಕತೆ ಬಹಳಷ್ಟಿದೆ ಎಂದಿದ್ದಾರೆ. ಜೂನ್ 31, 2019ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ (ಪಿಸಿಎ) ಅಡಿಯಲ್ಲಿ ನ್ಯಾಯಮೂರ್ತಿ ಎಸ್. ಶುಕ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ನೀಡಲಾಗಿತ್ತು. ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಕೆಳಗಿನ ಲಿಂಕ್ ನಲ್ಲಿ ಅಂಕುರ್ ಪೋಸ್ಟ್ ನೀವು ನೋಡ್ಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ