Covid Crisis: 1 ಲಕ್ಷಕ್ಕಿಂತ ಕಮ್ಮಿ ಕೇಸ್‌: 8 ಲಕ್ಷಕ್ಕಿಂತ ಕೆಳಗಿಳಿದ ಸಕ್ರಿಯ ಸೋಂಕು

By Kannadaprabha News  |  First Published Feb 11, 2022, 3:15 AM IST

ದೇಶದಲ್ಲಿ ಕೊರೋನಾ ಸೋಂಕು ಇಳಿಮುಖದ ಮತ್ತಷ್ಟು ಸುಳಿವುಗಳು ಸಿಕ್ಕಿದ್ದು, ಗುರುವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳಲ್ಲಿ ದೇಶದಲ್ಲಿ 67,084 ಕೋವಿಡ್‌ ಕೇಸ್‌ ಪತ್ತೆಯಾಗಿವೆ.


ನವದೆಹಲಿ (ಫೆ.11): ದೇಶದಲ್ಲಿ ಕೊರೋನಾ ಸೋಂಕು (Coronavirus) ಇಳಿಮುಖದ ಮತ್ತಷ್ಟು ಸುಳಿವುಗಳು ಸಿಕ್ಕಿದ್ದು, ಗುರುವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳಲ್ಲಿ ದೇಶದಲ್ಲಿ 67,084 ಕೋವಿಡ್‌ ಕೇಸ್‌ (Covid Cases) ಪತ್ತೆಯಾಗಿವೆ. ಇದರೊಂದಿಗೆ ಸತತ 4ನೇ ದಿನವೂ 1 ಲಕ್ಷಕ್ಕಿಂತ ಕಡಿಮೆ ಕೇಸು ದಾಖಲಾದಂತೆ ಆಗಿದೆ. ಇದರಿಂದಾಗಿ ಸಕ್ರಿಯ ಸೋಂಕಿತರ ಸಂಖ್ಯೆ 7,90,789ಕ್ಕೆ ಕುಸಿದಿದೆ. 

ನಿನ್ನೆ ಹೊಸದಾಗಿ 1241 ಸೇರಿದಂತೆ ಇಲ್ಲಿವರೆಗೆ ಒಟ್ಟಾರೆ 5,06,520 ಮಂದಿ ಈ ಮಹಾವ್ಯಾಧಿಗೆ ಬಲಿಯಾಗಿದ್ದಾರೆ. ಒಟ್ಟಾರೆ 4.24 ಕೋಟಿ ಸೋಂಕಿತರಿಗೆ ಹೋಲಿಸಿದರೆ ದೇಶದಲ್ಲಿ ಸಕ್ರಿಯ ಸೋಂಕಿತರ ಪ್ರಮಾಣ ಶೇ.1.86ರಷ್ಟಿದೆ. ಇದೇ ಅವಧಿಯಲ್ಲಿ ದೇಶಾದ್ಯಂತ ಕೋವಿಡ್‌ ಲಸಿಕೆಯ (Covid Vaccine) 171.28 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.

Tap to resize

Latest Videos

undefined

ಒಮಿಕ್ರೋನ್‌ ತಡೆಗೆ 4ನೇ ಡೋಸ್‌ ಲಸಿಕೆ ಅಗತ್ಯವಿದೆ: ಒಮಿಕ್ರೋನ್‌ (Omicron) ರೂಪಾಂತರಿಯ ತೀವ್ರ ಹಾವಳಿ ಎದುರಿಸುತ್ತಿರುವ ಅಮೆರಿಕದಲ್ಲಿ, ಈ ರೂಪಾಂತರಿಯನ್ನು ಇನ್ನಷ್ಟುಸೂಕ್ತ ರೀತಿಯಲ್ಲಿ ಎದುರಿಸಲು 4ನೇ ಡೋಸ್‌ ಕೋವಿಡ್‌ ಲಸಿಕೆ ನೀಡಬೇಕಾಗಿ ಬರಬಹುದು ಎಂದು ಶ್ವೇತಭವನದ ಮುಖ್ಯ ಆರೋಗ್ಯಾಧಿಕಾರಿ ಡಾ. ಆ್ಯಂಟೋನಿ ಫೌಸಿ ಸುಳಿವು ನೀಡಿದ್ದಾರೆ. ಆದರೆ 4ನೇ ಡೋಸ್‌ ಅನ್ನು ಜನರ ವಯಸ್ಸು ಹಾಗೂ ಅವರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿತರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಇದುವರೆಗೂ 7.8 ಕೋಟಿ ಜನರಿಗೆ ಸೋಂಕು ತಗುಲಿದ್ದು 9.3 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.

Covid Crisis: 71365 ಕೇಸ್‌, 1217 ಸಾವು, ಸಕ್ರಿಯ ಕೇಸಿನ ಸಂಖ್ಯೆ 8.9 ಲಕ್ಷಕ್ಕಿಳಿಕೆ

5019 ಹೊಸ ಕೇಸ್‌ ಪತ್ತೆ, ಸಾವಿನ ಸಂಖ್ಯೆ ತುಸು ಇಳಿಕೆ: ರಾಜ್ಯದಲ್ಲಿ ಕೋರೋನಾದಿಂದ ಮರಣ ಹೊಂದುವವರ ಸಂಖ್ಯೆಯಲ್ಲಿ ಗುರುವಾರ ತುಸು ಇಳಿಕೆಯಾಗಿದೆ. 39 ಮಂದಿ ಮೃತರಾಗಿದ್ದು, ಜನವರಿ 26ರ ಬಳಿಕ ಮೊದಲ ಬಾರಿಗೆ ದೈನಂದಿನ ಸಾವಿನ ಸಂಖ್ಯೆ 40ರೊಳಗೆ ಬಂದಿದೆ. 5,019 ಹೊಸ ಪ್ರಕರಣ ವರದಿಯಾಗಿದೆ. 13,923 ಮಂಂದಿ ಚೇತರಿಸಿಕೊಂಡಿದ್ದಾರೆ. ಶೇ.4.25ರ ಪಾಸಿಟಿವಿಟಿ ದರ ವರದಿಯಾಗಿದೆ. ಬೆಂಗಳೂರು ನಗರದಲ್ಲಿ 3 ತಿಂಗಳ ಗಂಡು ಮಗು ಸೇರಿದಂತೆ 17 ಮಂದಿ ಮೃತರಾಗಿದ್ದಾರೆ. ಬೆಂಗಳೂರು ನಗರದಲ್ಲಿ 2,315 ಕೇಸ್‌ ಪತ್ತೆಯಾಗಿದೆ. ರಾಜ್ಯದಲ್ಲಿ ಗುರುವಾರ 80,171 ಮಂದಿ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ.

ಕೋವಿಡ್ ಕೇಸು ಇಳಿಕೆ: ಈವ​ರೆಗೆ ದೈನಂದಿ​ನ ಹೆಚ್ಚು ಪ್ರಕ​ರ​ಣ​ಗ​ಳನ್ನು ದಾಖ​ಲಿ​ಸು​ತ್ತಿದ್ದ ಕರ್ನಾ​ಟಕ, ಮಹಾ​ರಾಷ್ಟ್ರ ಸೇರಿ​ದಂತೆ ದೇಶದ 34 ರಾಜ್ಯ​ಗ​ಳಲ್ಲಿ ಕೊರೋನಾ ವೈರ​ಸ್ಸಿನ ತೀವ್ರತೆ ಗಣ​ನೀಯ ಪ್ರಮಾ​ಣ​ದಲ್ಲಿ ತಗ್ಗಿದೆ. ಅಲ್ಲದೆ ದೈನಂದಿನ ಪಾಸಿ​ಟಿ​ವಿಟಿ ದರವೂ ಕುಸಿತ ಕಂಡಿದೆ. ಆದರೆ ಕೇರಳ ಮತ್ತು ಮಿಜೋರಾಂ ರಾಜ್ಯ​ಗ​ಳಲ್ಲಿ ಹೆಚ್ಚು ಕೋವಿಡ್‌ ಪ್ರಕ​ರ​ಣ​ಗಳು ದಾಖ​ಲಾ​ಗು​ತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿ​ಸಿದೆ. ದೇಶದ ಒಟ್ಟಾರೆ ಜಿಲ್ಲೆ​ಗಳ ಪೈಕಿ 268 ಜಿಲ್ಲೆ​ಗ​ಳಲ್ಲಿ ಕೋವಿಡ್‌ ಪಾಸಿ​ಟಿ​ವಿಟಿ ದರ ಶೇ.5ಕ್ಕಿಂತ ಕಡಿಮೆ ಇದೆ. ಪರಿ​ಣಾ​ಮ​ಕಾರಿ ಲಸಿಕೆ ಅಭಿ​ಯಾ​ನದಿಂದಾಗಿ ಕೋವಿ​ಡ್‌ಗೆ ಬಲಿ​ಯಾ​ಗುವವರ ಸಂಖ್ಯೆ ನಿಯಂತ್ರ​ಣಕ್ಕೆ ಬಂದಿದೆ.

Covid Crisis: ಕೊರೋನಾ ಬಂದಾಗಿನಿಂದ ಪ್ಯಾರಾಸಿಟಮಲ್‌ ಮಾತ್ರೆಗಳ ವಹಿವಾಟು ಡಬಲ್!

ಸಿಂಗಲ್‌ ಡೋಸ್‌ ಸ್ಪುಟ್ನಿಕ್‌ ಲೈಟ್‌ ಬಳಕೆಗೆ ಕೇಂದ್ರ ಅಸ್ತು: ಭಾರತದಲ್ಲಿ ಕೋವಿಡ್‌ 3ನೇ ಅಲೆ ಇಳಿಮುಖವಾಗುತ್ತಿದೆ. ಈ ನಡುವೆ ರಷ್ಯಾದ ಸ್ಪುಟ್ನಿಕ್‌ ಲೈಟ್‌ ಸಿಂಗಲ್‌ ಡೋಸ್‌ (Pputnik Light Single Dose Vaccine) ಕೋವಿಡ್‌-19 ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಭಾನುವಾರ ಅನುಮೋದನೆ ನೀಡಿದೆ. ಭಾರತೀಯ ಔಷಧ ನಿಯಂತ್ರಣದ ಪ್ರಾಧಿಕಾರ (ಡಿಸಿಜಿಐ)ದ ಅನುಮೋದನೆ ಮೂಲಕ ಭಾರತದಲ್ಲಿ ಕೊರೋನಾ ವಿರುದ್ಧದ 9ನೇ ಲಸಿಕೆ ಬಳಕೆಗೆ ಹಸಿರು ನಿಶಾನೆ ಲಭಿಸಿದಂತಾಗಿದೆ. ಇದು ಭಾರತದ ಲಸಿಕಾ ಅಭಿಯಾನಕ್ಕೆ ಮತ್ತಷ್ಟುಬಲ ನೀಡಲಿದೆ. ಸ್ಪುಟ್ನಿಕ್‌ ಲೈಟ್‌ ಕೊರೋನಾ ವಿರುದ್ಧ ಶೇ.65.4ರಷ್ಟುಪರಿಣಾಮಕಾರಿ ಎನ್ನಲಾಗಿದೆ.

click me!