
ನವದೆಹಲಿ (ಅ.18) ಬ್ರೇಕಿಂಗ್ ನ್ಯೂಸ್, ವರದಿಗಾರಿಗೆ, ನಿರೂಪಣೆ, ಚರ್ಚೆ, ಸಂವಾದಗಳ ಮೂಲಕ ಖ್ಯಾತ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ರಾಜ್‌ದೀಪ್ ಸರ್ದೇಸಾಯಿಗೆ ತಮ್ಮದೇ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಪತ್ರಕರ್ತ ರಾಜದೀಪ್ ಸರ್ದೇಸಾಯಿ ನಾಲ್ಕು ತಿಂಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿರುವುದು ಪತ್ತೆಯಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ರಾಜ್‌ದೀಪ್ ಇದೀಗ ತಮ್ಮ ಹೋರಾಟದ ಕುರಿತು ಹೇಳಿಕೊಂಡಿದ್ದಾರೆ. ಇದೇ ವೇಳೆ ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ಕ್ಯಾನ್ಸರ್ ಮಾರಕ ರೋಗ ವ್ಯಾಪಕವಾಗುತ್ತಿದೆ. ಆಹಾರ ಪದ್ಧತಿ, ಜೀವನ ಪದ್ಧತಿ ಸೇರಿದಂತೆ ಹಲವು ಕಾರಣಗಳಿಂದ ಕ್ಯಾನ್ಸರ್ ಹೆಚ್ಚಾಗುತ್ತಿದೆ. ರಾಜ್‌ದೀಪ್ ಸರ್ದೇಸಾಯಿ ತಮ್ಮ ಕ್ಯಾನ್ಸರ್ ಕುರಿತು ಹೇಳಿಕೊಂಡಿದ್ದಾರೆ. ರಾಜ್‌ದೀಪ್ ಸರ್ದೇಸಾಯಿಗೆ ಪ್ರೊಸ್ಟೇಟ್ ಕ್ಯಾನ್ಸರ್. ಪುರುಷರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಇದು. ಮೂತ್ರಪಿಂಡ, ಮೂತ್ರನಾಳ ಸುತ್ತಲೂ ಗ್ರಂಥಿ ರೂಪದಲ್ಲಿ ಕಾಣಿಸಿಕೊಂಡು ಮಾರಕಾವಗುತ್ತದೆ. ಪ್ರಮುಖವಾಗಿ ವೀರ್ಯದಲ್ಲಿನ ದ್ರವಾಂಶ ಉತ್ಪಾದಿಸುವ ಪ್ರೊಸ್ಟೇಟ್ ಕ್ಯಾನ್ಸರ್ ಪೀಡಿತವಾಗುದೇ ಪ್ರೊಸ್ಟ್ರೇಟ್ ಕ್ಯಾನ್ಸರ್.
ಜುಲೈ ತಿಂಗಳಲ್ಲಿ ವೈದ್ಯರ ವ್ಯಾಟ್ಸಾಪ್ ಸಂದೇಶ ನನ್ನ ಆರೋಗ್ಯ ಹಾಗೂ ಜೀವನ ಬಗ್ಗೆ ಯೋಚಿಸುವಂತೆ ಮಾಡಿತ್ತು. ಕಾರಣ ವೈದ್ಯಕೀಯ ಪರೀಕ್ಷೆಯಲ್ಲಿ ನನಗೆ ಪ್ರೊಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿರುವುದು ಸ್ಪಷ್ಯವಾಗಿತ್ತು. ಈ ಸಂದೇಶವನ್ನು ಹಲವು ಬಾರಿ ಓದಿದೆ. ನನಗೆ ಕ್ಯಾನ್ಸರ್, ಹೇಗೆ ಎಂದು ನನ್ನನ್ನೇ ಪ್ರಶ್ನಿಸಿದ್ದೆ ಎಂದು ರಾಜ್‌ದೀಪ್ ಹೇಳಿಕೊಂಡಿದ್ದಾರೆ. ಈ ಕ್ಯಾನ್ಸರ್ ಪತ್ತೆಯಾಗುವ ಕೆಲ ವಾರಗಳ ಮೊದಲು ನಾನು 60ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದೆ. ಕ್ಯಾನ್ಸರ್ ಕುರತು ಯಾವುದೇ ಗುಣಲಕ್ಷಣ ಇರಲಿಲ್ಲ. ಇತರ ಯಾವುದೇ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ನನ್ನ ಸಾಮಾನ್ಯ ಮೆಡಿಕಲ್ ಚೆಕ್‌ಅಪ್‌ನಲ್ಲಿ ಪತ್ತೆಯಾಗಿತ್ತು ಎಂದು ರಾಜ್‌ದೀಪ್ ಹೇಳಿದ್ದಾರೆ.
ಭಾರತ ಇಂಗ್ಲೆಂಡ್ ಟೆಸ್ಟ್ ಪಂದ್ಯ ನೋಡಲು ಕಾತರಗೊಂಡಿದ್ದ ನನಗೆ ವೈದ್ಯಕೀಯ ಪರೀಕ್ಷೆ ಫಲಿತಾಂಶ ಸಂಭ್ರಮ ಕಸಿದುಕೊಂಡಿತ್ತು. ನಾನು ಚಿಕ್ಕಂದಿನಲ್ಲಿ ರಾಜೇಶ್ ಖನ್ನ ಅವರ ಆನಂದ್ ಸಿನಿಮಾದಲ್ಲಿ, ನಾಯಕ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪಾತ್ರವಾಗಿತ್ತು. ಹೀಗಾಗಿ ನನಗೆ ಕ್ಯಾನ್ಸರ್ ಎಂದಾಗ ಪ್ಯಾನಿಕ್ ಆಗಿದ್ದು ನಿಜ. ಆದರೆ ನನ್ನ ಮಗ ಹೇಳಿದಂತೆ ಪ್ರೊಸ್ಟೇಟ್ ಕ್ಯಾನ್ಸರ್ ಪತ್ತೆ ಹಚ್ಚಿದರೆ ಗುಣಪಡಿಸಲು ಸಾಧ್ಯ ಅನ್ನೋ ಮಾತು ಆತ್ಮವಿಶ್ವಾಸ ಮೂಡಿಸಿತ್ತು ಎಂದು ರಾಜದೀಪ್ ಹೇಳಿದ್ದಾರೆ. ಬಳಿಕ ಸತತ ಪರೀಕ್ಷೆಗಳು, ಚಿಕಿತ್ಸೆಗಳು ಆರಂಭಗೊಂಡಿತ್ತು. ಇದೇ ವೇಳೆ ಇದಕ್ಕಿಂತ ಮಾರಕ ಕ್ಯಾನ್ಸರ್‌ಗೆ ತುತಾಗಿರುವ ಮಂದಿಯ ಹೀರೋ ಕತೆಗಳು ಕೇಳಿ ನಾನು ಸ್ಪೂರ್ತಿಗೊಂಡಿದ್ದೆ ಎಂದು ರಾಜ್‌ದೀಪ್ ಹೇಳಿದ್ದಾರೆ.
ಆರಂಭಿಕ ಹಂತದಲ್ಲಿ ನನ್ನ ಪ್ರೊಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿತ್ತು. ಹೀಗಾಗಿ 3 ತಿಂಗಳ ಹಿಂದೆ ಯಶಸ್ವಿ ಸರ್ಜರಿ ಮಾಡಲಾಗಿತ್ತು. ಇದೀಗ ಪರೀಕ್ಷೆ ಮಾಡಿದಾಗ, ಪ್ರೊಸ್ಟ್ರೇಟ್ ಕ್ಯಾನ್ಸರ್ ಹರಡುತ್ತಿಲ್ಲ, ಜೊತೆಗೆ ಚೇತರಿಕೆಯ ಹಾದಿಯಲ್ಲಿದ್ದೇನೆ. ನಾನು ಬಹಳ ಲಕ್ಕಿ. ಉತ್ತಮ ವೈದ್ಯರು ನನಗೆ ಚಿಕಿತ್ಸೆ ನೀಡಿ ಗುಣವಾಗುವಂತೆ ಮಾಡಿದ್ದಾರೆ ಎಂದು ರಾಜದೀಪ್ ಸರ್ದಾಸಿ ಹೇಳಿದ್ದಾರೆ. ಹೀಗಾಗಿ ಈ ಬಾರಿಯ ದೀಪಾವಳಿ ನನಗೆ ಅತ್ಯಂತ ವಿಶೇಷ ಎಂದು ರಾಜದೀಪ್ ಸರ್ದೇಸಾಯಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ