ಇಲಿಗಳಿಗೆ ಮನೆಯಾದ ಸರ್ಕಾರಿ ಆಸ್ಪತ್ರೆ: ರೋಗಿಗಳ ಕಾಲು ಕೈಗಳೇ ಆಹಾರ

By Anusha KbFirst Published Jul 4, 2023, 4:48 PM IST
Highlights

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಇಲಿಗಳ ಹಾವಳಿಯಿಂದ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದ ರೋಗಿಗಳ ಕಾಲು ಕೈಗಳನ್ನು ಇಲಿಗಳು ಕಚ್ಚುತ್ತಿದ್ದು, ಇದರಿಂದ  ಹುಷಾರಾಗಿ ಹೋಗುವುದಕ್ಕೆಂದು ಆಸ್ಪತ್ರೆಗೆ ಬಂದ ರೋಗಿಗಳು ಮತ್ತೆ ಕಾಯಿಲೆಗೆ ಬೀಳುವಂತಾಗಿದೆ.

ಜೋಧ್‌ಪುರ:  ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಇಲಿಗಳ ಹಾವಳಿಯಿಂದ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದ ರೋಗಿಗಳ ಕಾಲು ಕೈಗಳನ್ನು ಇಲಿಗಳು ಕಚ್ಚುತ್ತಿದ್ದು, ಇದರಿಂದ  ಹುಷಾರಾಗಿ ಹೋಗುವುದಕ್ಕೆಂದು ಆಸ್ಪತ್ರೆಗೆ ಬಂದ ರೋಗಿಗಳು ಮತ್ತೆ ಕಾಯಿಲೆಗೆ ಬೀಳುವಂತಾಗಿದೆ. ಅಂದ ಹಾಗೆ ಹೀಗೆ ಮೂಷಿಕಗಳು ರೋಗಿಗಳಿಗೆ ಹಾವಳಿ ನೀಡುತ್ತಿರುವ ಘಟನೆ ನಡೆದಿರುವುದು ರಾಜಸ್ಥಾನ ಜೋಧ್‌ಪುರದ ಎಂಡಿಎಂ ಸರ್ಕಾರಿ ಆಸ್ಪತ್ರೆಯಲ್ಲಿ.

ಜೋಧ್‌ಪುರ (Jodhpura) ವಿಭಾಗದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಎಂಡಿಎಂ ಆಸ್ಪತ್ರೆಯಲ್ಲಿ ಪ್ರಸ್ತುತ  ನಡೆಯುತ್ತಿರುವ ನಿರ್ಮಾಣ ಕಾಮಗಾರಿ ಮತ್ತು ನೆಲದ ಮೇಲೆ ಬಿದ್ದಿರುವ ಆಹಾರ ತ್ಯಾಜ್ಯಗಳಿಂದಾಗಿ ಇಲಿಗಳು ಈ ಆಸ್ಪತ್ರೆಯನ್ನೇ ಮನೆಯಾಗಿಸಿಕೊಂಡಿವೆ. ಘಟನೆಗೆ ಸಂಬಂಧಿಸಿದಂತೆ  ಆಸ್ಪತ್ರೆಯ ಆಡಳಿತ ವಿಭಾಗವೂ ತನಿಖೆಗೆ ತಂಡ ರಚನೆ ಮಾಡಿದೆ. ಇದೊಂದು ಮಾನಸಿಕ ರೋಗಿಗಳ ಆಸ್ಪತ್ರೆಯಾಗಿದ್ದು, 4 ಕ್ಕೂ ಹೆಚ್ಚು ರೋಗಿಗಳ ಕುಟುಂಬದವರು ಕಳೆದೊಂದು ವಾರದಿಂದ ಇಲಿಗಳ ಹಾವಳಿ ಬಗ್ಗೆ ದೂರಿದ್ದಾರೆ. ರೋಗಿಗಳ ಕಾಲು ಕೈಗಳನ್ನು ಇಲಿಗಳು ಕಚ್ಚುತ್ತಿವೆ ಎಂದು ರೋಗಿಗಳ ಸಂಬಂಧಿಗಳು ದೂರಿದ್ದಾರೆ.  ಈ ಹಿನ್ನೆಲೆಯಲ್ಲಿ ಮಥುರಾ ದಾಸ್ ಮಥುರಾ(MDM) ಆಸ್ಪತ್ರೆಯ ವೈದ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.  

Latest Videos

Watch: ಲೂಧಿಯಾನಾದ ರೆಸ್ಟೋರೆಂಟ್‌ನ ಚಿಕನ್‌ ಸಾಂಬಾರ್‌ನಲ್ಲಿ ಕೋಳಿ ಮಾಂಸದ ಬದಲು ಇಲಿ!

ಇಲ್ಲಿನ ಮನೋರೋಗ ವಿಭಾಗದಲ್ಲಿ ರೋಗಿಗಳಿಗಳಿಗೆ ಇಲಿ ಕಚ್ಚಿಯೇ ಗಾಯವಾಗಿದೆಯೇ ಅಥವಾ ಬೇರೆ ಇನ್ನಾವುದಾದರು ಕಾರಣಕ್ಕೆ ಗಾಯವಾಗಿದೆಯೇ ಎಂಬುದನ್ನು ತಿಳಿಯುವುದಕ್ಕೆ ನಾವು ಸಮಿತಿಯೊಂದನ್ನು ರಚಿಸಿದ್ದೇವೆ ಎಂದು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಪ್ರಾಂಶುಪಾಲರಾದ ದಿಲೀಪ್ ಕಚ್ವಾಹಾ ಹೇಳಿದ್ದಾರೆ.  ಅಲ್ಲದೇ ಸಮಿತಿಯ ವರದಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಅಲ್ಲದೇ , ಆಸ್ಪತ್ರೆಯಲ್ಲಿ ಕೀಟ ನಿಯಂತ್ರಣದ ಜವಾಬ್ದಾರಿ ಹೊಂದಿರುವ ರಾಜಸ್ಥಾನದ ಕೀಟ ನಿಯಂತ್ರಕ ಏಜೆನ್ಸಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಸ್ಪತ್ರೆಯ ಆಡಳಿತಕ್ಕೆ ಸೂಚಿಸಲಾಗಿದೆ. ಆದರೆ ರೋಗಿಗಳ ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸಿ ಮನೋವೈದ್ಯಕೀಯ ವಿಭಾಗದಲ್ಲಿ ಕೀಟನಾಶಕ ಸಿಂಪಡಿಸುವುದರಿಂದ ಅಪಾಯವಿದೆ ಎಂದು ತಿಳಿಸಿದ ನಂತರ ಆಡಳಿತವು ಈ ವಾರ್ಡ್ ಅನ್ನು ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ವೈದ್ಯ ದಿಲೀಪ್ ಹೇಳಿದ್ದಾರೆ. 

ದಾವಣಗೆರೆ: ಇಲಿ ಸಾಯಿಸಲು ಇಟ್ಟಿದ್ದ ಟೊಮೊಟೋ ತಿಂದು ಯುವತಿ ಸಾವು

ಈ ಎಂಡಿಎಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯೂ ಜೋಧ್‌ಪುರ ವಿಭಾಗದ ಅತ್ಯಂತ ದೊಡ್ಡ ಆಸ್ಪತ್ರೆ ಎನಿಸಿದೆ. ಆದರೆ ಇಲ್ಲಿ ಶುಚಿತ್ವ ಕೊರತೆಯಿಂದಾಗಿ ಇಲಿಗಳ ಆಗರವಾಗಿದೆ. 

click me!