ಅಪಘಾತಕ್ಕೆ ಬಲಿಯಾದ ತಂದೆಯ ಶವದ ಪಕ್ಕದಲ್ಲೇ ಮಲಗಿದ 3 ವರ್ಷದ ಮಗ: ಕಾಡಲ್ಲಿ ಅಳುತ್ತಲೇ ರಾತ್ರಿ ಕಳೆದ!

By BK Ashwin  |  First Published Jul 4, 2023, 3:51 PM IST

ದಟ್ಟವಾದ ಕಾಡಿನೊಳಗೆ ಕತ್ತಲು, ಆಗೊಮ್ಮೆ ಈಗೊಮ್ಮೆ ಸಂಚಾರ ದಟ್ಟಣೆ. ಅಪಘಾತದ ನಂತರ, ತಂದೆ ಚಲನರಹಿತವಾಗಿ ಮಲಗಿದ್ದರು. ಆದರೆ, ತಂದೆಗೆ ಏನಾಯಿತು ಎಂದು ತಿಳಿಯದ ಮೂರು ವರ್ಷದ ಬಾಲಕ ತನ್ನ ತಂದೆಯ ಶವದ ಪಕ್ಕದಲ್ಲಿಯೇ ಅಳುತ್ತಾ ಮಲಗಿದ್ದ. 


ನಿಜಾಮಾಬಾದ್ (ತೆಲಂಗಾಣ): ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುವಾಗ, ತಡರಾತ್ರಿ ಕಾಡಿನ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ. ಆ ವೇಳೆ ತಂದೆಯ ಜತೆಗೇ ಇದ್ದ 3 ವರ್ಷದ ಮಗ ತನ್ನ ತಂದೆಯ ಮೃತದೇಹದ ಪಕ್ಕದಲ್ಲಿ ಮಲಗುವವರೆಗೂ ಅಳುತ್ತಾ ತಂದೆಯ ಎಬ್ಬಿಸಲು ಪ್ರಯತ್ನಿಸುತ್ತಿದ್ದ. ಮರುದಿನ ಬೆಳಗ್ಗೆ ಆ ದಾರಿಯಲ್ಲಿ ಹೋಗುತ್ತಿದ್ದ ಅರ್ಚಕರೊಬ್ಬರು ಅವಘಡವನ್ನು ಗಮನಿಸಿ ಗ್ರಾಮಸ್ಥರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ತೆಲಂಗಾಣದ ವೆಂಗಲ್ಪಾಡು ಎಂಬಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ ಎಂದು ವರದಿಯಾಗಿದೆ.

ದಟ್ಟವಾದ ಕಾಡಿನೊಳಗೆ ಕತ್ತಲು, ಆಗೊಮ್ಮೆ ಈಗೊಮ್ಮೆ ಸಂಚಾರ ದಟ್ಟಣೆ. ಅಪಘಾತದ ನಂತರ, ತಂದೆ ಚಲನರಹಿತವಾಗಿ ಮಲಗಿದ್ದರು. ಆದರೆ, ತಂದೆಗೆ ಏನಾಯಿತು ಎಂದು ತಿಳಿಯದ ಮೂರು ವರ್ಷದ ಬಾಲಕ ತನ್ನ ತಂದೆಯ ಶವದ ಪಕ್ಕದಲ್ಲಿಯೇ ಅಳುತ್ತಾ ಮಲಗಿದ್ದ ಎಂದು ತಿಳಿದುಬಂದಿದೆ. 

Tap to resize

Latest Videos

ಇದನ್ನು ಓದಿ: Breaking: ಮಹಾರಾಷ್ಟ್ರದಲ್ಲಿ ಮತ್ತೊಂದು ಭೀಕರ ಅಪಘಾತ: ಯಮ ಸ್ವರೂಪಿ ಟ್ರಕ್‌ಗೆ 15 ಮಂದಿ ಬಲಿ, 20ಕ್ಕೂ ಹೆಚ್ಚು ಜನರಿಗೆ ಗಾಯ

ಭಾನುವಾರ ಸಂತ್ರಸ್ತ ಕುಟುಂಬಕ್ಕೆ ತೆಲಂಗಾಣದ ಶಾಸಕ ಬಾಜಿರೆಡ್ಡಿ ಗೋವರ್ಧನ್ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ನಿವಾಸಿಗಳು ಮತ್ತು ಮೃತ ವ್ಯಕ್ತಿಯ ಕುಟುಂಬ ಸದಸ್ಯರ ಪ್ರಕಾರ, ಗ್ರಾಮದ ನಿವಾಸಿ ಮಲವತ್ ರೆಡ್ಡಿ (34) ತನ್ನ ಮೂರು ವರ್ಷದ ಮಗ ನಿತಿನ್ ಜೊತೆಗೆ ಕಾಮರೆಡ್ಡಿ ಜಿಲ್ಲೆಯ ತನ್ನ ಸಂಬಂಧಿಕರ ಮನೆಗೆ ಜೂನ್ 21 ರಂದು ಬೆಳಗ್ಗೆ ಹೋಗಿದ್ದರು ಎಂದು ತಿಳಿದುಬಂದಿದೆ.

ಬಳಿಕ, ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಸದಾಶಿವನಗರ ಮಂಡಲದ ಡಗ್ಗಿ ಅರಣ್ಯ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44 ರ ಬದಿಯಲ್ಲಿ ವಾಹನ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ನಂತರ, ತಂದೆ ಮಗ ಇಬ್ಬರೂ ರಸ್ತೆ ಬದಿ ಬಿದ್ದಿದ್ದರು. ದುರದೃಷ್ಟವಶಾತ್ ತಲೆಗೆ ತೀವ್ರ ಪೆಟ್ಟಾಗಿ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನು ಅರಿಯದ ಬಾಲಕ ತನ್ನ ತಂದೆಯನ್ನು ಎಬ್ಬಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹುಡುಗ ತನ್ನ ತಂದೆಯ ಮೃತದೇಹದ ಪಕ್ಕದಲ್ಲಿ ಮಲಗುವವರೆಗೂ ಅಳುತ್ತಿದ್ದ, ಅವರನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ. ನಂತರ, ಹಾಗೇ ನಿದ್ದೆ ಹೋಗಿದ್ದಾನೆ ಎಂದೂ ವರದಿಯಾಗಿದೆ.

ಇದನ್ನೂ ಓದಿ: ಅಮೆರಿಕ ಬೀಚ್‌ನಲ್ಲಿ ಮಗನನ್ನು ರಕ್ಷಿಸುವಾಗ ಮುಳುಗಿ ಸತ್ತ ಟೆಕ್ಕಿ; ಮಗ ಅಪಾಯದಿಂದ ಪಾರು

ಆದರೆ, ನಿನ್ನೆ ಬೆಳಗ್ಗೆ ಸಮೀಪದ ದೇವಸ್ಥಾನಕ್ಕೆ ಬಂದಿದ್ದ ಅರ್ಚಕರು ಆ ದಾರಿಯಲ್ಲಿ ಸಾಗಿದ್ದಾರೆ. ಅಪಘಾತವನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಈ ಅಪಘಾತ ಸಂಬಂಧ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ತೆಲಂಗಾಣ ರಾಜ್ಯದ ಸ್ಥಳೀಯ ಶಾಸಕ ಗೋವರ್ಧನ್ ಭರವಸೆ ನೀಡಿದರು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದ ಕೇರಳ ಮೂಲದ ವ್ಯಕ್ತಿ: 40 ವರ್ಷ ಶಿಕ್ಷೆ ವಿಧಿಸಿದ ಬ್ರಿಟನ್ ಕೋರ್ಟ್‌

click me!