ವಿದ್ಯಾರ್ಥಿ ಶಕ್ತಿಗೆ ಮಣಿದ ಜೆಎನ್‌ಯು: ಶುಲ್ಕ ಪ್ರಮಾಣ ಕಡಿತಕ್ಕೆ ಒಪ್ಪಿಗೆ!

By Web DeskFirst Published Nov 13, 2019, 8:26 PM IST
Highlights

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಜೆಎನ್’ಯು ಆಡಳಿತ ಮಂಡಳಿ/ ಹಾಸ್ಟೇಲ್ ಶುಲ್ಕ ಪ್ರಮಾಣ ಕಡಿತಕ್ಕೆ ಆಡಳಿತ ಮಂಡಳಿ ಒಪ್ಪಿಗೆ/ ಹಾಸ್ಟೇಲ್ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳಿಂದ ಭಾರೀ ಪ್ರತಿಭಟನೆ/ ಆಡಳಿತ ಮಂಡಳಿ ನಿರ್ಧಾರವನ್ನು ಟೀಕಿಸಿದ ವಿದ್ಯಾರ್ಥಿ ಸಂಘಟನೆಗಳು/ ಆಡಳಿತ ಮಂಡಳಿ ತೆಗೆದುಕೊಂಡ ಕ್ರಮ ತೃಪ್ತಿ ಎಂದ ವಿದ್ಯಾರ್ಥಿ ಸಂಘಟನೆಗಳು/

ನವದೆಹಲಿ(ನ.13): ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್’ಯು)ದ ವಿದ್ಯಾರ್ಥಿಗಳ ಪ್ರತಿಭಟನೆಗೆ ಕೊನೆಗೂ ಮಣಿದಿರುವ ಆಡಳಿತ ಮಂಡಳಿ, ಹಾಸ್ಟೇಲ್ ಶುಲ್ಕದ ಪ್ರಮಾಣವನ್ನು ಕಡಿಮೆ ಮಾಡಲು ನಿರ್ಧರಿಸಿದೆ.

ಹಾಸ್ಟೇಲ್ ಶುಲ್ಕ ಹೆಚ್ಚಳ ವಿರೋಧಿಸಿ ಕಳೆದ ಸೋಮವಾರದಿಂದ ವಿದ್ಯಾರ್ಥಿಗಳು ಬೃಹತ್​ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಕುಲಪತಿ ಎಂ ಜಗದೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶುಲ್ಕ ಹೆಚ್ಚಳ ಪ್ರಮಾಣವನ್ನು ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

JNUನಲ್ಲಿ ಭುಗಿಲೆದ್ದ ಪ್ರತಿಭಟನೆ; ವಿದ್ಯಾರ್ಥಿಗಳು, ಪೊಲೀಸರ ನಡುವೆ ಘರ್ಷಣೆ
ಶುಲ್ಕ ಹೆಚ್ಚಳದಲ್ಲಿ ಶೇ.50ರಷ್ಟು ಕಡಿಮೆಗೊಳಿಸಲು ವಿವಿ ಮುಂದಾಗಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಹೆಚ್ಚುವರಿ ಸಹಾಯ ಮಾಡುವ ಭರವಸೆಯನ್ನೂ ನೀಡಿದೆ. 

ಆದರೆ ಆಡಳಿತ ಮಂಡಳಿ ತೆಗೆದುಕೊಂಡ ಕ್ರಮ ತೃಪ್ತಿ ಎಂದಿಲ್ಲ ಎಂದಿರುವ ವಿದ್ಯಾರ್ಥಿ ಸಂಘಟನೆಗಳು, ಇದು ದಾರಿ ತಪ್ಪಿಸುವ ಹುನ್ನಾರ ಎಂದು ಆರೋಪಿಸಿವೆ. 

After massive protests, JNU Executive Committee announces roll-back of hostel fee hike

Read Story | https://t.co/oDkpANBm49 pic.twitter.com/gwTIgFrPJp

— ANI Digital (@ani_digital)

ಜೆಎನ್​ಯು ಹಾಸ್ಟೆಲ್​ನಲ್ಲಿ ಡಬಲ್ ಸೀಟರ್ ರೂಮಿಗೆ ತಿಂಗಳಿಗೆ ಕೇವಲ 10 ರೂ. ಇದ್ದ ಶುಲ್ಕವನ್ನು 200 ರೂ.ಗೆ ಏರಿಕೆ ಮಾಡಲಾಗಿತ್ತು. ಸಿಂಗಲ್ ಸೀಟರ್ ರೂಮಿನ ಶುಲ್ಕವನ್ನು 20 ರೂ. ದಿಂದ 600 ರೂ.ಗೆ ಏರಿಸಲಾಗಿತ್ತು.

ಈ ನಿರ್ಧಾರವನ್ನು ಖಂಡಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದಲ್ಲದೇ, ಪೊಲೀಸರೊಂದಿಗೆ ಜಟಾಪಟಿಯೂ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

click me!