ಮಕ್ಕಳ ಆರೋಗ್ಯ, ಉತ್ತಮ ಭವಿಷ್ಯಕ್ಕಾಗಿ ಕೈಗೊಳ್ಳುವ ವೃತದಲ್ಲಿ ಅಂತ್ಯದಲ್ಲಿನ ಪುಣ್ಯಸ್ನಾನದ ವೇಳೆ ಅವಘಢ ಸಂಭವಿಸಿದೆ. ದುರಂತದಲ್ಲಿ 42 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 37 ಮಕ್ಕಳು.
ಪಾಟ್ನಾ(ಸೆ.26) ಮಕ್ಕಳ ಆರೋಗ್ಯ, ವಿದ್ಯೆ, ಉತ್ತಮ ಭವಿಷ್ಯಕ್ಕಾಗಿ ತಾಯಂದಿರು ಕೈಗೊಳ್ಳುವ ಜೀವಿತ ಪುತ್ರಿಕಾ ವೃತದ ಅಂತ್ಯದಲ್ಲಿ ಭಾರಿ ದುರ್ಘಟನೆ ನಡೆದಿದೆ. ಉಪವಾಸ ಕುಳಿತು ಬಳಿಕ ಮಾಡುವ ಪುಣ್ಯ ಸ್ನಾದ ವೇಳೆ ಒಟ್ಟು 43 ಮಂದಿ ಮೃತಪಟ್ಟ ಘಟನೆ ಬಿಹಾರದಲ್ಲಿ ನಡೆದಿದೆ. ಬೇರೆ ಬೇರೆ ಜಿಲ್ಲಿಗಳಲ್ಲಿ ಈ ದುರಂತ ಸಂಭವಿಸಿದ್ದು, ಒಟ್ಟು 43 ಮಂದಿ ಮೃತಪಟ್ಟಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ. ಪೈಕಿ 37 ಮಕ್ಕಳಾಗಿದ್ದಾರೆ. 15 ಜಿಲ್ಲೆಗಳಲ್ಲಿ ಈ ರೀತಿಯ ಅವಘಡ ಸಂಭವಿಸಿದೆ.
ಬಿಹಾಹದಲ್ಲಿ ವಿಶೇಷವಾಗಿ ಆಚರಿಸುವ ಈ ಜೀವಿತ ಪುತ್ರಿಕಾ ಹಬ್ಬದಲ್ಲಿ ತಾಯಂದಿರು ತಮ್ಮ ಮಕ್ಕಳಿಗಾಗಿ ಉಪವಾಸ ಕುಳಿತುಕೊಳ್ಳುತ್ತಾರೆ. ಬಹುತೇಕ ಸಂದರ್ಭದಲ್ಲಿ ಮಕ್ಕಳೂ ಉಪಾಸವಿರುತ್ತಾರೆ. ಬಳಿಕ ಪುಣ್ಯಸ್ನಾನ ಮಾಡಿ ವೃತ ಅಂತ್ಯಗೊಳಿಸುತ್ತಾರೆ. ಹೀಗೆ ಪವಿತ್ರ ನದಿ, ಕೆರೆಗಳಲ್ಲಿ ಮುಳುಗಿ ಪುಣ್ಯಸ್ನಾನ ಮಾಡುವ ಮೂಲಕ ವೃತ ಸಂಪನ್ನಗೊಳಿಸಲಾಗುತ್ತದೆ. ಹೀಗೆ ಪುಣ್ಯಸ್ನಾನದ ವೇಳೆ ದುರಂತ ಸಂಭವಿಸಿದೆ. ಇದುವರೆಗೆ 43 ಮೃತದೇಹವನ್ನು ಹೊರತೆಗೆಯಲಾಗಿದೆ. ಈ ಪೈಕಿ ಮೂವರು ನಾಪತ್ತೆಯಾಗಿದ್ದಾರೆ. ಇದೀಗ ರಕ್ಷಣಾ ತಂಡಗಳು ಶೋಧಕಾರ್ಯ ಮುಂದುವರಿಸಿದೆ. ಮಕ್ಕಳ ಭವಿಷ್ಯಕ್ಕಾಗಿ ಕೈಗೊಂಡ ವೃತ ಇದೀಗ ಮಕ್ಕಳು ಹಾಗೂ ತಾಯಂದಿರನ್ನು ಬಲಿಪಡೆದಿದೆ. ಇತ್ತ ಘಟನೆ ಕುರಿತು ಆಘಾತವ್ಯಕ್ತಪಡಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಮೃತರ ಕಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಪೊಲೀಸ್ ಠಾಣೆಯಲ್ಲೇ ಕಳ್ಳತನ, ವಶಪಡಿಸಿಟ್ಟಿದ್ದ 16 ಮದ್ಯದ ಬಾಟಲಿ ಕದ್ದೊಯ್ದ 6 ಮಹಿಳೆಯರು!
ಪೂರ್ವ ಪಶ್ಚಿಮ ಚಂಪರನ್, ನಳಂದ, ಔರಂಗಬಾದ್, ಕೈಮೂರ್, ಬುಕ್ಸಾರ್, ಸಿವಾನ್, ರೋಹ್ಟಾಸ್, ಸರನ್, ಪಾಟ್ನ, ವೈಶಾಲಿ, ಮುಝಾಫರಪುರ್, ಸಮಸ್ತಿಪುರ್, ಗೋಪಾಲ್‌ಗಂಜ್ ಹಾಗೂ ಅರ್ವಾಲ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಉಪವಾಸ ಕುಳಿತು ಪುಣ್ಯಸ್ನಾನಕಿಳಿಯುತ್ತದ್ದಂತೆ ಮಕ್ಕಳು ಸೇರಿದಂತೆ ತಾಯಂದರಿರು ಅಸ್ವಸ್ಥಗೊಂಡಿದ್ದಾರೆ. ಹಲವೆಡೆ ನೀರಿನ ರಭಸದಲ್ಲಿ ಕಾಲು ಜಾರಿ ನೀರು ಪಾಲಾದ ಘಟನೆ ಸಂಭವಿಸಿದೆ.
ಘಟನೆ ಕುರಿತು ಬಿಹಾರ ಸರ್ಕಾರ ತನಿಖೆಗೆ ಆದೇಶಿಸಿದೆ. ಹಲವು ಜಿಲ್ಲೆಗಳಲ್ಲಿ ಈ ರೀತಿಯ ಘಟನೆ ಸಂಭವಿಸಿದೆ. ಹೀಗಾಗಿ ಈ ದುರಂತದ ಕುರಿತು ತನಿಖೆಯ ಅಗತ್ಯವಿದೆ ಎಂದಿದೆ. ಬುಧವಾರ(ಸೆ.24)ಈ ಜೀವಿತ ಪುತ್ರಿಕಾ ಹಬ್ಬವನ್ನು ಬಿಹಾರದಲ್ಲಿ ಆಚರಿಸಲಾಗಿದೆ. ಈ ವೇಳೆ ದುರಂತ ಸಂಭವಿಸಿದೆ. ಬಿಡುಗಡೆ ಮಾಡಿರುವ ಪರಿಹಾರ ಮೊತ್ತವನ್ನು ಶೀಘ್ರದಲ್ಲೇ ಮೃತ ಕುಟುಂಬಗಳಿಗೆ ತಲುಪಿಸುವಂತೆ ನಿತೀಶ್ ಕುಮಾರ್ ಸೂಚನೆ ನೀಡಿದ್ದಾರೆ. ಇದರಂತೆ 8 ಕುಟುಂಬಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ.
ಬಿಹಾರದಲ್ಲಿ ದಲಿತರ 35 ಮನೆಗಳಿಗೆ ಬೆಂಕಿ; ಇತ್ತ ರಾಜಕೀಯ ನಾಯಕರ ಕೆಸರೆರಾಚಟ