ಬೆಂಗಳೂರಿನ ಕೆಲಸ ಬಿಟ್ಟು ಮಣ್ಣಿಗಿಳಿದ ಇಂಜಿನಿಯರ್, ಭತ್ತ ಬೆಳೆದು ಲಕ್ಷಾಂತರ ಸಂಪಾದನೆ

By Roopa Hegde  |  First Published Sep 26, 2024, 2:16 PM IST

ಬಿ.ಟೆಕ್ ಮುಗಿಸಿ ಕೆಲಸ ಹುಡುಕಿ ಬಂದವನಿಗೆ ಶಿಬಿರವೊಂದು ದಾರಿ ತೋರಿಸಿದೆ. ಕೃಷಿ ತಜ್ಞರ ಸಲಹೆ ಮೇರೆಗೆ ತವರಿಗೆ ವಾಪಸ್ ಆದ ವ್ಯಕ್ತಿ, ಗದ್ದೆಯಲ್ಲಿ ಕೆಲಸ ಮಾಡಿ ಲಕ್ಷಾಂತರ ಸಂಪಾದನೆ ಮಾಡ್ತಿದ್ದಾನೆ. ಆತನ ಕೆಲಸ ಯುವಕರಿಗೆ ಸ್ಫೂರ್ತಿಯಾಗಿದೆ. 
 


ಕಲಿಕೆ ಜ್ಞಾನಕ್ಕೆ, ದುಡಿಮೆ ಜೀವನ ನಿರ್ವಹಣೆ ಹಾಗೂ ಸಂತೋಷಕ್ಕೆ ಎನ್ನುವ ಮಾತಿದೆ. ಕಲಿತ ಕ್ಷೇತ್ರದಲ್ಲಿ ಕೆಲಸ ಮಾಡ್ಬೇಕು ಎನ್ನುವ ನಿಯಮವಿಲ್ಲ. ಬಿ.ಟೆಕ್ (B. Tech) ಮಾಡಿದ ವ್ಯಕ್ತಿಯೊಬ್ಬ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾನೆ. ಉತ್ತರ ಪ್ರದೇಶದಲ್ಲಿ ಉತ್ತಮ ಕೃಷಿಕ ಎನ್ನಿಸಿಕೊಂಡಿರುವ ದುಷ್ಯಂತ್ ಕುಮಾರ್ (Dushyant Kumar) ಸಿಂಗ್ ದಾರಿ ಬದಲಿಸಿದ್ದು ಬೆಂಗಳೂರಿನಲ್ಲಿ ನಡೆದ ಕೃಷಿ ಶಿಬಿರ. ಕೃಷಿ ತಜ್ಞ ಸುಭಾಷ್ ಪಾಲೇಕರ್ (Agriculture Expert Subhash Palekar) ಮಾತುಗಳಿಗೆ ಪ್ರೇರೇಪಿತರಾದ  ದುಷ್ಯಂತ್ ಕುಮಾರ್ ಸಿಂಗ್, ಉದ್ಯೋಗ ಬಿಟ್ಟು ಕೃಷಿಯತ್ತ ಮುಖ ಮಾಡಿದರು. ಈಗ ತಮ್ಮ ಗದ್ದೆಯಲ್ಲಿ ಎರಡು ರೀತಿ ಭತ್ತ ಬೆಳೆಯುವ ಜೊತೆಗೆ ಪಶುಸಂಗೋಪನೆ (Animal Husbandry) ಮಾಡ್ತಾ, ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ.

ದುಷ್ಯಂತ್ ಕುಮಾರ್ ಸಿಂಗ್, ಉತ್ತರ ಪ್ರದೇಶ (Uttar Pradesh) ದ ಬಲ್ಲಿಯಾ ಜಿಲ್ಲೆಯ ಬಸಂತ್‌ಪುರ್ ಗ್ರಾಮದವರು. ಅವರು ಬಿ.ಟೆಕ್ ಮುಗಿಸಿ ಬೆಂಗಳೂರಿಗೆ ಬಂದ್ರು. ಖಾಸಗಿ ಕಂಪನಿಯೊಂದರಲ್ಲಿ ಒಂದು ವರ್ಷ ಕೆಲಸ ಮಾಡಿದ ಅವರಿಗೆ ಈ ಕೆಲಸ ತೃಪ್ತಿ ನೀಡಲಿಲ್ಲ. ಹಳ್ಳಿಗೆ ವಾಪಸ್ ಹೋಗಿ, ಕೃಷಿಯನ್ನು ವೃತ್ತಿ ಮಾಡಿಕೊಳ್ಳುವ ಆಲೋಚನೆಯಲ್ಲಿ ಅವರಿದ್ದರು. 2017ರಲ್ಲಿ ದುಷ್ಯಂತ್ ಕುಮಾರ್ ಸಿಂಗ್, ಬಿ.ಟೆಕ್ ಮುಗಿಸಿದ್ದರು.

Tap to resize

Latest Videos

ಏನೂ ಮಾಡದೇ ಸಿಗುತ್ತೆ ಸಂಬಳ ! ಭಿನ್ನವಾಗಿದೆ ಈತನ ಗಳಿಕೆ ಮೂಲ

ಬೆಂಗಳೂರಿನಲ್ಲಿ ನಡೆದ ಶಿಬಿರವೊಂದರಲ್ಲಿ ದುಷ್ಯಂತ್ ಕುಮಾರ್ ಸಿಂಗ್ ಪಾಲ್ಗೊಂಡಿದ್ದರು. ಅಲ್ಲಿ ಕೃಷಿ ತಜ್ಞ ಸುಭಾಷ್ ಪಾಲೇಕರ್ ಭೇಟಿಯಾಗಿದ್ದ ದುಷ್ಯಂತ್ ಅವರಿಗೆ, ಕೃಷಿ ಮೇಲೆ ಮತ್ತಷ್ಟು ಆಸಕ್ತಿ ಬೆಳೆಯಿತು. ಸುಭಾಷ್ ಪಾಲೇಕರ್ ಮಾರ್ಗದರ್ಶನದಲ್ಲಿ ಕೃಷಿ ಶುರು ಮಾಡಿದ ಅವರು ಹಿಂತಿರುಗಿ ನೋಡಲಿಲ್ಲ. ಪಾಲೇಕರ್ ಸಲಹೆಯಂತೆ, ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡ ದುಷ್ಯಂತ್ ಕುಮಾರ್, ಉತ್ತರ ಪ್ರದೇಶದ ಯಶಸ್ವಿ ಕೃಷಿಕರಾದ್ರು. 

ಈ ವರ್ಷದ ಆರಂಭದಲ್ಲಿ ದುಷ್ಯಂತ್, ನಾಲ್ಕು ಬಿಘಾ ಭೂಮಿಯಲ್ಲಿ ಮಣಿಲಾ ಭತ್ತವನ್ನು ನಾಟಿ ಮಾಡಿದ್ದರು. ಅವರು 65 ಬಿಘಾ ಭೂಮಿಯಲ್ಲಿ ಕಾಲಾ ನಮಕ್ ಕಿರಣ್ ಭತ್ತದ ಕೃಷಿ ಮಾಡಿದ್ದಾರೆ. ಇವರು ಕಳೆದ ನಾಲ್ಕು ವರ್ಷಗಳಿಂದ ಕಾಲಾ ನಮಕ್ ಕಿರಣ್ ಬೆಳೆ ಬೆಳೆಯುತ್ತಿದ್ದು, ಇದು ಅವರ ಪ್ರಸಿದ್ಧಿ ಹೆಚ್ಚಿಸಿದೆ. ಈ ಭತ್ತಕ್ಕೆ ಹೆಚ್ಚಿನ ಬೇಡಿಕೆ ಕೂಡ ಇದೆ. ಒಂದು ಬಿಗಾ ಬೇಸಾಯದ ವೆಚ್ಚ ಸುಮಾರು 4,000 ರಿಂದ 5,000 ರೂಪಾಯಿಗಳಾಗಿವೆ. ಒಂದು ಬಿಘಾದಲ್ಲಿ ಬೆಳೆದ ಬೆಳೆಯಿಂದ ದುಷ್ಯಂತ್ ಸುಮಾರು, 60,000 ರೂಪಾಯಿ ಲಾಭ ಪಡೆಯುತ್ತಿದ್ದಾರೆ.  65 ಬಿಘಾಗಳಿಂದ 39 ಲಕ್ಷದವರೆಗೆ ಅವರು ಆದಾಯ ನಿರೀಕ್ಷೆ ಮಾಡಿದ್ದಾರೆ. ಇದಕ್ಕೆ ಅವರು ಸುಮಾರು 3 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಬಿಘಾ ಎಂಬುದು ಭೂಮಿಯ ಪ್ರಾಚೀನ ಅಳತೆಯಾಗಿದೆ.   ಭಾರತ, ನೇಪಾಳ ಸೇರಿದಂತೆ ನೆರೆ ದೇಶಗಳಲ್ಲಿ ಭೂಮಿ ಅಳತೆಯನ್ನು ಬಿಘಾ ಎಂದು ಕರೆಯಲಾಗುತ್ತದೆ. ಒಂದು ಬಿಘಾವನ್ನು 3/10 ಎಕರೆ ಎಂದು ಲೆಕ್ಕ ಹಾಕಲಾಗುತ್ತದೆ. 

ಕನ್ನಡಿಗರನ್ನು ಕೆಣಕಿದ ಸುಗಂಧ ಶರ್ಮಾಗೆ ಇದೆಂಥಾ ಸ್ಥಿತಿ ಬಂತು: ಕೆಲಸ ಕಳೆದುಕೊಂಡವಳಿಗೆ ನೆಲೆ ಕಳೆದುಕೊಳ್ಳುವ ಆತಂಕ!

ದುಷ್ಯಂತ್ ತಮ್ಮ ಗದ್ದೆಯಲ್ಲಿ ಕಾಲಾ ನಮಕ್ ಜೊತೆ ಮನಿಲಾ ಭತ್ತವನ್ನು ಬೆಳೆಯುತ್ತಾರೆ. ಮನಿಲಾ ಭತ್ತಕ್ಕೆ ಕಡಿಮೆ ನೀರು ಸಾಕಾಗುತ್ತದೆ. ಜೊತೆಗೆ ಪ್ರತಿ ಹೆಕ್ಟೇರ್‌ಗೆ 55 ರಿಂದ 60 ಕ್ವಿಂಟಾಲ್ ಬೆಳೆ ತೆಗೆಯಬಹುದು. ನೈಸರ್ಗಿಕ ಕೃಷಿಗೆ ದುಷ್ಯಂತ್ ಹೆಚ್ಚಿನ ಗಮನ ನೀಡ್ತಿದ್ದಾರೆ. ಇದೇ ಕಾರಣಕ್ಕೆ ಅವರು ಭತ್ತದ ಬೆಳೆ ಜೊತೆ ಪಶುಸಂಗೋಪನೆಗೆ ಮುಂದಾಗಿದ್ದಾರೆ. ಇದು ಅವರಿಗೆ ಸಾವಯವ ಗೊಬ್ಬರ ತಯಾರಿಸಲು ನೆರವಾಗುತ್ತದೆ. ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಹಾಗೂ ಲಾಭಕ್ಕೆ ಸಾವಯವ ಗೊಬ್ಬರ ನೆರವಾಗ್ತಿದೆ ಎನ್ನುತ್ತಾರೆ ದುಷ್ಯಂತ್. 
 

click me!