ಮೂಲಗಳ ಪ್ರಕಾರ, ದರ್ಗಾಗಳು, ಮಸೀದಿಗಳು, ಸ್ಮಶಾನಗಳು ಮತ್ತು ಮದರಸಾಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಸಮಿತಿಯು ಸ್ಪಷ್ಟವಾಗಿ ತಿರಸ್ಕರಿಸಿದೆ. ಈ ವಿಚಾರವಾಗಿ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನ, ಜಾಕೀರ್ ನಾಯ್ಕ್ ದಾರಿ ತಪ್ಪಿಸುತ್ತಿದ್ದಾರೆ ಎಂಬ ಅನುಮಾನ ಮೂಡಿಸಿದೆ.
Waqf Amendment Bill: ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ದೇಶಾದ್ಯಂತ ರಾಜಕೀಯ ಬಿಸಿ ಏರುತ್ತಿದೆ. ಏತನ್ಮಧ್ಯೆ, ವಕ್ಫ್ ಮಸೂದೆಯ ಕುರಿತು ರಚಿಸಲಾದ ಸಂಸತ್ತಿನ ಜಂಟಿ ಸಮಿತಿಯ ಸಭೆಯ ಮುಂದೆ, ಈ ಕಾನೂನು ಜಾರಿಗೆ ಬಂದರೆ ದೇಶಾದ್ಯಂತ ದರ್ಗಾಗಳು, ಮಸೀದಿಗಳು, ಸ್ಮಶಾನಗಳು ಮತ್ತು ಮದರಸಾಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಕಾರಣವಾಗುತ್ತದೆ ಎಂಬ ಕೆಲವು ಮುಸ್ಲಿಂ ಮುಖಂಡರ ಹೇಳಿಕೆಯಿಂದ ಸಮುದಾಯದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ವಕ್ಫ್ (ತಿದ್ದುಪಡಿ) ಮಸೂದೆಯ ಬಗ್ಗೆ ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿಯು ಅಂತಹ ಎಲ್ಲಾ ಆತಂಕಗಳನ್ನು ತಳ್ಳಿಹಾಕಿದೆ, ಪ್ರಸ್ತುತ ಮಸೂದೆಯಲ್ಲಿ, ಮಸೀದಿಗಳು, ದರ್ಗಾಗಳು, ಸ್ಮಶಾನಗಳು ಅಥವಾ ಮದರಸಾಗಳನ್ನು ಸರ್ಕಾರದ ಅಡಿಯಲ್ಲಿ ತರುವ ಯಾವುದೇ ನಿಬಂಧನೆ ಇಲ್ಲ. ಇಂತಹ ಅಪಪ್ರಚಾರ ಮಾಡುವ ಮೂಲಕ ಮುಸ್ಲಿಂ ಸಮುದಾಯದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾತ್ರ ನಡೆಯುತ್ತಿದೆ ಸಮಿತಿ ತಿಳಿಸಿದೆ.
undefined
ವಕ್ಫ್ ತಿದ್ದುಪಡಿ ಕಾಯ್ದೆಗೆ ದಾಖಲೆಯ 1.25 ಕೋಟಿ ಪ್ರತಿಕ್ರಿಯೆಗೆ ಬಿಜೆಪಿಯಿಂದ ಅನುಮಾನ
ಪಾಕಿಸ್ತಾನ-ಚೀನಾ ಕೈವಾಡ:
ಈ ಕುರಿತು ನಿಶಿಕಾಂತ್ ದುಬೆ, ವಕ್ಫ್ ಮಸೂದೆ ತನಿಖಾ ಸಮಿತಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದು, ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ಇದುವರೆಗೆ 1.25 ಕೋಟಿ ಪ್ರತಿಕ್ರಿಯೆ ಬಂದಿವೆ. ಈ ಪ್ರತಿಕ್ರಿಯೆಗಳ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಜಾಕೀರ್ ನಾಯ್ಕ್ ಮತ್ತು ಚೀನಾದಂತಹ ವಿದೇಶಿ ಶಕ್ತಿಗಳ ಕೈವಾಡ ಇದ್ದಿರಬಹುದು ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಜಾಕೀರ್ ನಾಯ್ಕ್ ಪಿತೂರಿಯಲ್ಲಿ ಭಾರತೀಯ ಮುಸ್ಲಿಮರು?
ಭಾರತದಲ್ಲಿ ಪರಾರಿಯಾಗಿರುವ ಮೂಲಭೂತವಾದಿ ಇಸ್ಲಾಂ ಧರ್ಮ ಪ್ರಚಾರಕ ಸದ್ಯ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಶತ್ರುವಿನ ಶತ್ರು ಮಿತ್ರ ಎಂಬಂತೆ ಪಾಕಿಸ್ತಾನದ ಐಎಸ್‌ಐ ಗುಪ್ತಚರ ಸಂಸ್ಥೆ ಝಾಕಿರ್ ನಾಯ್ಕ್ ಸಲುತ್ತಿದೆ. ಅವನು ಇತ್ತೀಚೆಗೆ ಭಾರತದಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಉದ್ರೇಕಕಾರಿ ಹೇಳಿಕೆ ನೀಡಿದ್ದಾನೆ.
ಭಾರತದ ಮುಸ್ಲಿಮರು ವಕ್ಫ್ ಮಸೂದೆಯನ್ನು ಯಾವುದೇ ಕಾರಣಕ್ಕೆ ಒಪ್ಪಿಕೊಳ್ಳಬಾರದು, ವಕ್ಫ್ ಮಸೂದೆಯನ್ನು ವಿರೋಧಿಸಬೇಕು, ವಕ್ಫ್ ತಿದ್ದು ಇಸ್ಲಾಂ ವಿರೋಧಿಯಾಗಿದೆ. ಮೋದಿ ಸರ್ಕಾರ ವಕ್ಫ್ ತಿದ್ದುಪಡಿ ಮೂಲಕ ಮುಸ್ಲಿಮರ ಭೂಮಿಯನ್ನು ಕಸಿದುಕೊಳ್ಳಲು ಬಯಸಿದೆ. ಕೇಂದ್ರದ ಮೋದಿ ಸರ್ಕಾರ ಮುಸ್ಲಿಂ ಮತ್ತು ಇಸ್ಲಾಂ ವಿರೋಧಿಯಾಗಿದೆ. ಭಾರತದ 50 ಲಕ್ಷ ಮುಸ್ಲಿಮರು ಇದನ್ನು ವಿರೋಧಿಸಿದರೆ, ಈ ಮಸೂದೆಯನ್ನು ನಿಲ್ಲಿಸಬಹುದು ಎಂದು ಅವರು ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ವಿಡಿಯೋ ಬಿಡುಗಡೆ ಬೆನ್ನಲ್ಲೇ ಇದೀಗ ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ 1.25 ಕೋಟಿ ಪ್ರತಿಕ್ರಿಯೆ ಬಂದಿವೆ. ಹೀಗಾಗಿ ಇದರ ಹಿಂದೆ ಪಾಕಿಸ್ತಾನ-ಚೀನಾದ ಸಂಚಿದೆ. ಜಾಕೀರ್ ನಾಯ್ಕ್ ಪಿತೂರಿಯಲ್ಲಿ ಭಾರತೀಯ ಮುಸ್ಲಿಮರು ಸಿಲುಕಿದ್ದಾರಾ ಎಂಬ ಅನುಮಾನ ಮೂಡಿಸಿದೆ.
ಊರಿಗೆ ಊರೇ ನಮ್ದು: ದೇವಸ್ಥಾನ, ಸಾರಿಗೆ ಬಸ್ ಟರ್ಮಿನಲ್ ಎಲ್ಲವೂ ವಕ್ಫ್ ಆಸ್ತಿ ಎಂದು ಘೋಷಣೆ!
ವಕ್ಫ್ ಮಸೂದೆ ತಿದ್ದುಪಡಿ ಉದ್ದೇಶ ಏನು?
ಸರ್ಕಾರದ ಮೂಲಗಳ ಪ್ರಕಾರ, ದೇಶಾದ್ಯಂತ ವಕ್ಫ್ ಆಸ್ತಿಯನ್ನು ನೋಂದಾಯಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಸಮಿತಿಯು ಎಲ್ಲಾ ಮಧ್ಯಸ್ಥಗಾರರಿಗೆ ತಿಳಿಸಿದೆ. ಆಸ್ತಿ ನೋಂದಾಯಿಸುವುದರಿಂದ ಇದರಿಂದ ಯಾವ ಭೂಮಿ ವಕ್ಫ್ ವ್ಯಾಪ್ತಿಗೆ ಬರುತ್ತದೆ, ಯಾವುದು ಬರುವುದಿಲ್ಲ ಎಂಬುದು ತಿಳಿಯಬಹುದಾಗಿ. ವಕ್ಫ್ ಆಸ್ತಿಗಳ ನೋಂದಾಣಿ ಮೂಲಕ ಪಾರದರ್ಶಕ ವ್ಯವಸ್ಥೆ ತರುವ ಉದ್ದೇಶದಿಂದ ಮಾಡಲಾಗಿದೆ. ಆದರೆ ಪಾಕಿಸ್ತಾನ, ಚೀನಾ, ಜಾಕೀರ್ ನಾಯ್ಕರಂತಹ ಶತ್ರುಗಳ ಹೆಣೆದಿರುವ ಪಿತೂರಿಗೆ ಬಾರತೀಯ ಮುಸ್ಲಿಮರು ಸಿಲುಕಿದ್ದಾರೆ. ಅದಕ್ಕೆ ನಿದರ್ಶನವೆಂಬಂತೆ ದೇಶಾದ್ಯಂತದಿಂದ ಸಮಿತಿಗೆ ಬಂದಿರುವ ಕೋಟಿಗಟ್ಟಲೆ ವಿರೋಧ ಪ್ರತಿಕ್ರಿಯೆಗಳು. ಸಾರ್ವಜನಿಕರಲ್ಲಿ ನಡೆಯುತ್ತಿರುವ ಈ ತಪ್ಪು ಮಾಹಿತಿ ಅಪಪ್ರಚಾರವನ್ನು ತಡೆಯುವುದು, ಜನರ ಅನುಮಾನಗಳನ್ನ ಪರಿಹರಿಸುವುದು ಸಮಿತಿಯ ಮುಂದಿದೆ.