
ಬೆಂಗಳೂರು (ನ.26) ಹೊಸ ವರ್ಷಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ. ಆದರೆ ತಯಾರಿಗಳು ಆರಂಭಗೊಂಡಿದೆ. ಇತ್ತ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಘೋಷಿಸಿದೆ. ಹ್ಯಾಪಿ ನ್ಯೂ ಇಯ್ 2.0 ಆಫರ್ ಮೂಲಕ ಅನ್‌ಲಿಮಿಟೆಡ್ 4ಜಿ ಹಾಗೂ 5ಜಿ ಡೇಟಾ ಯೋಜನೆ ಇದಾಗಿದೆ. 28 ದಿನಗಳ ವ್ಯಾಲಿಟಿಡಿಯಲ್ಲಿ ಅನ್‌ಲಿಮಿಟೆಡ್ ಡೇಟಾ, ಕಾಲ್ ಸೌಲಭ್ಯ ನೀಡಲಾಗುತ್ತಿದೆ. ಹ್ಯಾಪಿ ನ್ಯೂ ಇಯರ್ ಆಫರ್ ಮೂಲಕ 399 ರೂಪಾಯಿ ರೀಚಾರ್ಜ್ ಮಾಡಿದರೆ ಭರ್ಜರಿ ಆಫರ್ ನೀಡಿದೆ.
28 ದಿನಗಳ ಕಾಲ ಅನ್‌ಲಿಮಿಟೆಡ್ ಡೇಟಾ 4G ಹಾಗೂ 5G ಇಂಟರ್ನೆಟ್ ಅವಕಾಶ, ಸಂಪೂರ್ಣ ವಾಯ್ಸ್ ಕಾಲ್ ಉಚಿತ, ಪ್ರತಿದಿನ 100 SMS ಸೇರಿದಂತೆ ಹಲವು ಎಂಟರ್ಟೈನ್ಮೆಂಟ್ ಸೌಲಭ್ಯ ಸಿಗಲಿದೆ. ವೀಡಿಯೋ ಸ್ಟ್ರೀಮಿಂಗ್, ಗೇಮಿಂಗ್ ಅಥವಾ ಸಾಮಾಜಿಕ ಮಾಧ್ಯಮವಾಗಲಿ, ಡೇಟಾ ಮುಗಿಯುವ ಬಗ್ಗೆ ಚಿಂತೆ ಇಲ್ಲ. ತನ್ನ 10ನೇ ವಾರ್ಷಿಕೋತ್ಸವ ಆಫರ್ ಜೊತೆಯಲ್ಲಿ ನ್ಯೂ ಇಯರ್ ಆಫರ್ ಘೋಷಿಸಿದೆ.
399 ರೂಪಾಯಿ ಪ್ಲಾನ್‌ನಲ್ಲಿ 12 ತಿಂಗಳ Canva Pro ಸಬ್ಸ್‌ಸ್ಕ್ರಿಪ್ಷನ್ ಸೇರಿದೆ. ಬೆಲೆ ₹4,000 ಆಗಿದೆ. ಇದಕ್ಕೆ ಜೊತೆಗೆ, ನೀವು JioHotstar Mobile + Hollywood, jiotv ಮೂಲಕ Fancode, jiogames ಮೊಬೈಲ್ ಸಬ್ಸ್‌ಸ್ಕ್ರಿಪ್ಷನ್ ಮತ್ತು JioAIClauder ನಲ್ಲಿ 50GB ಉಚಿತ ಸಂಗ್ರಹಣೆಯನ್ನು ಪಡೆಯಬಹುದು. Justdial Lite, Hyperlocal ಕೂಪನ್ ಗಳು ಮತ್ತು ಡಿಜಿಟಲ್ ಡೈರಿ ಮುಂತಾದ ವೈಶಿಷ್ಟ್ಯಗಳೂ ಸೇರಿವೆ. ಇದೀಗ, ₹3,999 ವಾರ್ಷಿಕ ಯೋಜನೆ 12 ತಿಂಗಳ Canva Pro Lite, JioHotstar, FanCode ಮತ್ತು 50GB ಕ್ಲೌಡ್ ಸಂಗ್ರಹಣೆಯಂತಹ ಸೌಲಭ್ಯಗಳನ್ನು ನೀಡುತ್ತದೆ.
ಇದರ ಜೊತೆಗೆ ವಾರ್ಷಿಕ ರಿಚಾರ್ಜ್ ಪ್ಲಾನ್ ಘೋಷಿಸಿದೆ. ಜಿಯೋ ವಾರ್ಷಿಕ ₹3,999 ಯೋಜನೆಯನ್ನು ಪರಿಚಯಿಸಿದೆ. ರೀಚಾರ್ಜ್ ಮಾಡಿದ ನಂತರ, ನೀವು ಸಂಪೂರ್ಣ 365 ದಿನಗಳ ಅನ್‌ಲಿಮಿಟೆಡ್ 4G-5G ಡೇಟಾವನ್ನು ಸೌಲಭ್ಯ ಸಿಗಲಿದೆ. ಇದರಲ್ಲಿ ಉಚಿತ ವಾಯ್ಸ್ ಕರೆ ಮತ್ತು ದಿನಕ್ಕೆ 100 SMS ಕೂಡ ಸೇರಿವೆ. ಎರಡೂ ಯೋಜನೆಗಳ ವಿಶೇಷ ವೈಶಿಷ್ಟ್ಯವೆಂದರೆ ಅವು 4G ಮತ್ತು 5G ನೆಟ್ ವರ್ಕ್ ಗಳಲ್ಲಿ ಅನ್‌ಲಿಮಿಟೆಡ್ ಡೇಟಾ ನೀಡುತ್ತದೆ. ಇದರ ಜೊತೆಗೆ, ಮನರಂಜನೆ, ವಿನ್ಯಾಸ ಮತ್ತು ಕ್ಲೌಡ್ ಸಂಗ್ರಹಣೆ ಮುಂತಾದ ಡಿಜಿಟಲ್ ಲಾಭಗಳೂ ಲಭ್ಯವಿವೆ.
ಇತರ ಜಿಯೋ ಯೋಜನೆಗಳ ಬಳಕೆದಾರರಿಗೆ ವಿಶೇಷ ಆಫರ್ ಕೂಡ ಇದೆ. ಕೆಲವು ಸಮಯಕ್ಕೆ ಹೆಚ್ಚುವರಿ ಡೇಟಾ ಬೇಕಾದ ಬಳಕೆದಾರರು ₹15 ಅಥವಾ ₹25ಕ್ಕೆ ಅನಿಯಮಿತ 5G ಆ್ಯಡ್ ಆನ್ ಪಡೆಯಬಹುದು. ₹15 ರೂಪಾಯಿಗೆ, ಒಂದು ದಿನಕ್ಕೆ ಅನಿಯಮಿತ 5G ಡೇಟಾ ಮತ್ತು ಎರಡು ದಿನಗಳಿಗೆ ₹25 ರೂಪಾಯಿಗೆ ಪಡೆಯಬಹುದು. ಕಂಪನಿಯ ಪ್ರಕಾರ, ಈ ಅಡ್ಆನ್ ಗಳಿಗೆ ಡೌನ್ ಲೋಡ್ ಅಥವಾ ಬಳಕೆ ಮಿತಿ ಇರುವುದಿಲ್ಲ ಮತ್ತು ವೇಗ ಥ್ರಾಟ್ಲಿಂಗ್ ಕೂಡ ಇರುವುದಿಲ್ಲ. ಇದೀಗ, ಗೇಮಿಂಗ್, ಬಿಂಜ್ ವಾಚ್ ಅಥವಾ ರಾತ್ರಿ ತಡವಾಗಿ ಕೆಲಸ ಮಾಡುವವರಿಗೆ ₹50 ರಾತ್ರಿ ಡೇಟಾ ಪ್ಯಾಕ್ ಪರಿಚಯಿಸಲಾಗಿದೆ. ಇದು ಪ್ರತಿದಿನ ರಾತ್ರಿ 12 ರಿಂದ ಬೆಳಿಗ್ಗೆ 5 ಗಂಟೆಯವರೆಗೆ 28 ದಿನಗಳ ಕಾಲ ಅನಿಯಮಿತ 4G-5G ಡೇಟಾವನ್ನು ಒದಗಿಸುತ್ತದೆ. ರಾತ್ರಿ ಬಳಸುವ ಡೇಟಾ ಮುಖ್ಯ ಯೋಜನೆಯ ಡೇಟಾ ಬ್ಯಾಲೆನ್ಸ್ ಆಗಿದೆ.
ಬಿಂಜ್ ವಾಚ್ ಅಥವಾ ಕೆಲಸ ಮಾಡುವವರಿಗೆ ₹50ರ ರಾತ್ರಿ ಡೇಟಾ ಪ್ಯಾಕ್ ಪರಿಚಯಿಸಲಾಗಿದೆ. ಇದು 28 ದಿನಗಳ ಕಾಲ ಪ್ರತಿದಿನ ರಾತ್ರಿ 12 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಅನಿಯಮಿತ 4G-5G ಡೇಟಾವನ್ನು ಒದಗಿಸುತ್ತದೆ. ರಾತ್ರಿ ಬಳಸುವ ಡೇಟಾವನ್ನು ಮುಖ್ಯ ಯೋಜನೆಯ ಡೇಟಾದಿಂದ ಕಡಿತಗೊಳಿಸಲಾಗುವುದಿಲ್ಲ. ಅಂದರೆ ದಿನದ ಡೇಟಾವನ್ನು ಉಳಿಸಬಹುದು ಮತ್ತು ರಾತ್ರಿ ಸಮಯದಲ್ಲಿ ಇಂಟರ್ನೆಟ್ ಪ್ರವೇಶಿಸಬಹುದು.
ಹೊಸ 399 ರೂಪಾಯಿ ಮತ್ತು 3,999 ರೂಪಾಯಿ ಯೋಜನೆಗಳು ನವೆಂಬರ್ 24 ರಿಂದ ದೇಶದಾದ್ಯಾಂತ ಮೈಜಿಯೋ ಆಪ್, ಜಿಯೋ ವೆಬ್ ಸೈಟ್ ಮತ್ತು ಜಿಯೋ ಸ್ಟೋರ್‌ಗಳಲ್ಲಿ ಮತ್ತು ರಿಟೇಲರ್ ಗಳಲ್ಲಿ ರೀಚಾರ್ಜ್ ಮಾಡಲು ಲಭ್ಯವಾಗುತ್ತವೆ. ₹25 5G ಅಡ್ಒನ್ ಕೂಡ ಅದೇ ದಿನ ಬರುತ್ತದೆ, ₹15 ಪ್ಯಾಕ್ ಈಗಾಗಲೇ ಲಭ್ಯವಿದೆ. ₹50 ರಾತ್ರಿ ಡೇಟಾ ಪ್ಯಾಕ್ ನವೆಂಬರ್ 26 ರಿಂದ ಲಭ್ಯವಿರುತ್ತದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ