ಲಕ್ಷ ಲಕ್ಷ ಲಸಿಕೆ ಡೋಸ್ ಪೋಲು: ಜಾರ್ಖಂಡ್‌ನಲ್ಲಿ ಗರಿಷ್ಠ,ಕೇರಳದಲ್ಲಿ ಕನಿಷ್ಠ!

By Chethan KumarFirst Published Jun 10, 2021, 6:22 PM IST
Highlights

ಹಲವು ರಾಜ್ಯಗಳಲ್ಲಿ ಅತ್ಯಮೂಲ್ಯ ಲಸಿಕೆ ಪೋಲು
ಗರಿಷ್ಠ ಲಸಿಕೆ ವ್ಯರ್ಥ ಮಾಡಿದ ರಾಜ್ಯದಲ್ಲಿ ಜಾರ್ಖಂಡ್‌ಗೆ ಮೊದಲ ಸ್ಥಾನ
ಕೇರಳದಲ್ಲಿ ಕನಿಷ್ಠ ಲಸಿಕೆ ಪೋಲು

ನವದೆಹಲಿ(ಜೂ.10): ಪ್ರಧಾನಿ ನರೇಂದ್ರ ಮೋದಿ ಈಗಗಾಲೇ 18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ ಘೋಷಿಸಿದ್ದಾರೆ. ಜೂನ್ 21 ರಿಂದ ಹೊಸ ಲಸಿಕೆ ನೀತಿ ಜಾರಿಗೆ ಬರಲಿದೆ. ಆದರೆ ಸದ್ಯ ಕೆಲ ರಾಜ್ಯಗಳು ಲಸಿಕೆ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಪರಿಣಾಮ ಲಕ್ಷ ಲಕ್ಷ ಲಸಿಕೆ ಡೋಸ್ ವ್ಯರ್ಥವಾಗುತ್ತಿದೆ. ಈ ಪೈಕಿ ಜಾರ್ಖಂಡ್‌ನಲ್ಲಿ ಅತೀ ಹೆಚ್ಚು ಲಸಿಕೆಗಳು ಪೋಲಾಗುತ್ತಿದೆ.

ಎಲ್ಲರಿಗೂ ಉಚಿತ ವ್ಯಾಕ್ಸಿನ್, ದೀಪಾವಳಿ ವರೆಗೆ ಉಚಿತ ರೇಶನ್; ಪ್ರಧಾನಿ ಮೋದಿ ಘೋಷಣೆ!

ಜಾರ್ಖಂಡ್‌ನಲ್ಲಿ ಲಸಿಕೆ ಪೋಲು ಪ್ರಮಾಣ 33.95 ರಷ್ಟು ಲಸಿಕೆ ಪೋಲು ಮಾಡಿದೆ. ಇನ್ನು ಚತ್ತೀಸಘಡದಲ್ಲಿ ಶೇಕಡಾ 15.79 ರಷ್ಟು ಲಸಿಕೆ ಪೋಲು ಮಾಡಿದೆ. ಮಧ್ಯಪ್ರದೇಶದಲ್ಲಿ ಶೇಕಡಾ 7.35 ರಷ್ಟು ಲಸಿಕೆ ವ್ಯರ್ಥ ಮಾಡಿದೆ. ಪಂಜಾಬ್‌ನಲ್ಲಿ ಶೇಕಡಾ 7.08 ರಷ್ಟು ಪೋಲು ಮಾಡಿದೆ.

ದೆಹಲಿಯಲ್ಲಿ ಶೇಕಡಾ 3.95, ರಾಜಸ್ಥಾನದಲ್ಲಿ 3.91 ,ಉತ್ತರ ಪ್ರದೇಶದಲ್ಲಿ  3.78,  ಗುಜರಾತ್‌ನಲ್ಲಿ 3.63 ಹಾಗೂ ಮಹಾರಾಷ್ಟ್ರದಲ್ಲಿ 3.59 ರಷ್ಟು ಲಸಿಕೆ ಪೋಲು ಮಾಡಿದೆ. ಪರಿಣಾಮ ರಾಜ್ಯಗಳಿಗೆ ಹಂಚಿಕೆ ಮಾಡಿದ ಲಸಿಕೆ ಪೈಕಿ ಅರ್ಧದಷ್ಟು ಲಸಿಕೆ ವ್ಯರ್ಥವಾಗಿದೆ.

ಕಮಲಾ ಹ್ಯಾರಿಸ್‌ ಜೊತೆ ಮೋದಿ ಮಾತುಕತೆ; ಲಸಿಕೆ ಪೂರೈಕೆ ಭರವಸೆಗೆ ಅಮೆರಿಕಾಗೆ ಧನ್ಯವಾದ!

ಲಸಿಕೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿದ ರಾಷ್ಟ್ರಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ 2ನೇ ಸ್ಥಾನದಲ್ಲಿದೆ. ಒಂದು ಡೋಸ್ ವ್ಯರ್ಥವಾಗದಂತೆ ನೋಡಿಕೊಂಡಿದೆ. ಕೇರಳ 1.10 ಲಕ್ಷ ಡೋಸ್ ಹಾಗೂ ಬಂಗಾಳ 1.61 ಲಕ್ಷ ಡೋಸ್ ಉಳಿಸಿದೆ. 

click me!