
ಜೆರುಸಲೇಂ(ಜೂ.10): ಜೆರುಸಲೇಂನ Shaare Zedek Medical Centerನ ಪಾರ್ಕಿಂಗ್‌ನಲ್ಲಿ ವಿಶಾಲವಾದ ಗುಂಡಿಯೊಂದು ನಿರ್ಮಾಣವಾಗಿದ್ದು, ಅಲ್ಲಿ ನಿಲ್ಲಿಸಿದ್ದ ಮೂರು ಕಾರುಗಳನ್ನೂ ಇದು ನುಂಗಿ ಹಾಕಿದೆ.. ಸೋಶಿಯಲ್ ಮೀಡಿಯಾದಲ್ಲಿ ಪಾರ್ಕಿಂಗ್ ಲಾಟ್‌ನ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಈ ಗುಂಡಿ ಅಚಾನಕ್ಕಾಗಿ ಆಗಿದ್ದು ಎಂಬುವುದು ಸ್ಪಷ್ಟವಾಗುತ್ತದೆ. ಇದಾದ ಬಳಿಕ ಅಲ್ಲಿದ್ದ ಗೋಡೆಗಳು ಬಿದ್ದಿದ್ದು, ವಾಹನಗಳೂ ಬಿದ್ದಿವೆ. ರಕ್ಷಣಾ ತಂಡ ಕೂಡಲೇ ಸ್ಥಳಕ್ಕಾಗಮಿಸಿದೆ. ಅದೃಷ್ಟವಶಾತ್ ಈ ದುರಂತದಲ್ಲಿ ಯಾರಿಗೂ ಯಾವುದೇ ಹಾನಿಯುಂಟಾಗಿಲ್ಲ.
ಟೈಮ್ಸ್ ಆಫ್ ಇಸ್ರೇಲ್ ಅನ್ವಯ ಈ ಗುಂಡಿ ಬಳಿ ಸುರಂಗವೊಂದರ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಇದು ಆಸ್ಪತ್ರೆ ಹಾಗೂ ಪಾರ್ಕಿಂಗ್ ಲಾಟ್ ಕೆಳಗಿನಿಂದ ಹಾಧು ಹೋಗುತ್ತಿತ್ತು. ಇನ್ನು ಈ ಸುರಂಗದ ಒಂದು ಭಾಗ ಬಿದ್ದ ಪರಿಣಾಮ ಈ ಗುಂಟಿ ನಿರ್ಮಾಣವಾಗಿದೆ ಎನ್ನಲಾಗಿದೆ. ಇಲ್ಲಿ ಇತ್ತೀಚೆಗಷ್ಟೇ ನೂರಾರು ವಾಹನಗಳನ್ನು ಪಾರ್ಕ್ ಮಾಡುವಂತಹ ವಿಶಾಲವಾದ ಪಾರ್ಕಿಂಗ್ ನಿರ್ಮಿಸಲಾಗಿತ್ತು. ಗುಂಡಿ ಹಳೇ ಪಾರ್ಕಿಂಗ್ ಬಳಿ ಆಗಿರುವುದರಿಂದ ಹೆಚ್ಚಿನ ವಾಹನಗಳಿಗೆ ಹಾನಿಯಾಗಿಲ್ಲ.
ಇನ್ನು ಈ ಗುಂಡಿಯಲ್ಲಿ ಯಾರಾದರೂ ಬಿದ್ದಿದ್ದಾರಾ ಎಂದೂ ಪರಿಶೀಲಿಸಲಾಗಿದೆ. ಆದರೆ ಅದೃಷ್ಟವಶಾತ್ ಹೀಗಾಗಿಲ್ಲ. ಸದ್ಯ ಜನರಿಗೆ ಈ ಪ್ರದೆಶದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ