ಕೊರೋನಾ ನಡುವೆ ಫ್ಯಾಷನೇಬಲ್ ರೂಪ ತಾಳಿದ ಮಾಸ್ಕ್| ಚಿನ್ನ, ಬೆಳ್ಳಿ ಬಿಡಿ ಮಾರುಕಟ್ಟೆಯಲ್ಲಿ ಬಂದಿದೆ ವಜ್ರದ ಮಾಸ್ಕ್| ಜ್ಯುವೆಲ್ಲರಿ ಮಾಲೀಕನಿಗೆ ಐಡಿಯಾ ಬಂದಿದ್ದು ಹೇಗೆ?
ಅಹಮದಾಬಾದ್(ಜು.11): ಗುಜರಾತ್‌ನ ಸೂರತ್‌ನಲ್ಲಿ ಜ್ಯುವೆಲ್ಲರಿ ಶಾಪ್ ಕೊರೋನಾ ವೈರಸ್ ಮಹಾಮಾರಿ ನಡುವೆ ನಡೆಯುತ್ತಿದ್ದ ಮದುವೆಗೆ ವಿಶೇಷ ತಯಾರಿ ನಡೆಸಿದೆ. ಈ ಜ್ಯುವೆಲ್ಲರಿ ಶಾಪ್ ಒಂದು ವಿಶೇಷವಾದ ಮಾಸ್ಕ್ ತಯಾರಿಸಿದ್ದು, ಇದರ ಬೆಲೆ ಸುಮಾರು 1.5 ಲಕ್ಷದಿಂದ 4 ಲಕ್ಷದವರೆಗೆ ಇದೆ. ಅಷ್ಟಕ್ಕೂ ಇದರಲ್ಲಿ ವಿಶೇಷತೆ ಏನಿದೆ ಎಂಬ ಪ್ರಶ್ನೆ ಬರುತ್ತದೆ. ಇದು ಸಾಮಾನ್ಯ ಮಾಸ್ಕ್ ಅಲ್ಲ, ಇದೊಂದು ವಜ್ರಗಳಿಂದ ತುಂಬಿದ ಮಾಸ್ಕ್ ಆಗಿದೆ.
So,we assigned our designers to create masks which the customer later bought. After this, we made a wide range of these masks as people will require them in coming days. Pure diamond&American diamond have been used with gold to make these masks: Owner of a jewellery shop in Surat https://t.co/efsm0HKRsB
— ANI (@ANI)ಸುದ್ದಿ ಸಂಸ್ಥೆ ANIಗೆ ಪ್ರತಿಕ್ರಿಯಿಸಿದ ಜ್ಯುವೆಲ್ಲರಿ ಶಾಪ್ ಮಾಲೀಕ ದೀಪಕ್ ಚೋಕ್ಸಿ 'ತಮ್ಮ ಮನೆಯಲ್ಲಿ ಮದುವೆ ಇದೆ ಎಂದು ಹೇಳಿ ಗ್ರಾಹಕನೊಬ್ಬ ನಮ್ಮ ಶಾಪ್‌ಗೆ ಬಂದಿದ್ದ. ಈ ವೇಳೆ ನನಗೆ ಈ ಐಡಿಯಾ ಬಂತು. ಹೀಗಾಗಿ ವಿನೂತನ ಶೈಲಿಯ ಮಾಸ್ಕ್ ತಯಾರಿಸಿ ಕೊಡಿ ಎಂದು ಅವರು ಕೇಳಿದ್ರು. ಆಗ ನನಗೆ ಕೊರೋನಾ ವೈರಸ್ ಲಾಕ್‌ಡೌನ್ ನಡುವೆ ಈ ಮದುವೆಯನ್ನು ನೆನಪುಳಿಯುಂತೆ ಮಾಡಬಹುದೆಂದು ಅನಿಸಿತು. ಇದರ ಬೆನ್ನಲ್ಲೇ ಈ ವಿಸೇಷ ಮಾಸ್ಕ್ ತಯಾರಿಸಲು ಡಿಸೈನರ್ಸ್‌ಗಳಿಗೆ ಸೂಚಿಸಿದೆ ಎಂದಿದ್ದಾರೆ.
ಅಲ್ಲದೇ ಮಾಸ್ಕ್ ತಯಾರಾದ ಬಳಿಕ ಆಗ್ರಾಹಕ ನಮ್ಮ ಶಾಪ್‌ಗೆ ಬಂದು ಮಾಸ್ಕ್ ಖರೀದಿಸಿದ್ರು. ಇಂತಹ ಮಾಸ್ಕ್ ಅಗತ್ಯ ಬೀಳುವ, ಫ್ಯಾಷನ್‌ಗಾಗಿ ಬಳಸುವ ದಿನಗಳು ದೂರವಿಲ್ಲ ಎಂಬುವುದು ಚೋಕ್ಸಿ ಮಾತಾಗಿದೆ.