43% ಮಧ್ಯವಯಸ್ಕರು ಕೊರೋನಾಗೆ ಬಲಿ| 30ರಿಂದ 59 ವರ್ಷದೊಳಗಿನವರ ಸಾವು ಹೆಚ್ಚಳ| ಆರೋಗ್ಯ ಇಲಾಖೆ ಮಾಹಿತಿ
ನವದೆಹಲಿ(ಜು.11): ಗಂಭೀರ ಆರೋಗ್ಯ ಸಮಸ್ಯೆ ಹೊಂದಿದವರು ಹಾಗೂ ವಯೋವೃದ್ಧರು ಕೊರೋನಾ ವೈರಸ್‌ಗೆ ಸುಲಭ ತುತ್ತಾಗುತ್ತಾರೆ ಎಂಬುದು ದೃಢಪಟ್ಟಿರುವಾಗಲೇ, ಯುವಕರು ಹಾಗೂ ಮಧ್ಯವಯಸ್ಕರನ್ನೂ ಈ ವೈರಾಣು ಭಾರಿ ಸಂಖ್ಯೆಯಲ್ಲೇ ಬಲಿ ಪಡೆಯುತ್ತಿದೆ ಎಂಬ ಕಳವಳಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಕೊರೋನಾದಿಂದ ದೇಶದಲ್ಲಿ ಈವರೆಗೆ ಬಲಿಯಾಗಿರುವವರಲ್ಲಿ ಶೇ.43ರಷ್ಟುಮಂದಿ 30ರಿಂದ 59 ವರ್ಷದೊಳಗಿನವರು ಎಂಬ ಸಂಗತಿ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಲ್ಲೇ ಇದೆ.
undefined
ಕೊರೋನಾ ಆತಂಕದ ನಡುವೆ ದೇಶದಲ್ಲಿ ಡೇಂಘೀ ಹಾವಳಿ!
ದೇಶದ ಒಟ್ಟು ಜನಸಂಖ್ಯೆಯಲ್ಲಿ 45 ವರ್ಷ ಮೇಲ್ಪಟ್ಟವರ ಸಂಖ್ಯೆ ಶೇ.25ರಷ್ಟಿದೆ. ಕೊರೋನಾದಿಂದ ಈವರೆಗೆ ದೇಶದಲ್ಲಿ ಸಾವಿಗೀಡಾಗಿರುವವರಲ್ಲಿ 45 ಮೇಲ್ಪಟ್ಟವರ ಸಂಖ್ಯೆ ಶೇ.85ರಷ್ಟಿದೆ. ಆ ಪೈಕಿ ಶೇ.71ರಷ್ಟುಸಾವುಗಳು 45ರಿಂದ 74ರ ವಯೋಮಾನದೊಳಗಿವೆ.
ಮತ್ತೊಂದೆಡೆ, 30ರಿಂದ 44 ಹಾಗೂ 45ರಿಂದ 59 ವರ್ಷದವರ ಲೆಕ್ಕವನ್ನು ಪ್ರತ್ಯೇಕವಾಗಿ ಮಾಡಿದಾಗ, ಕೊರೋನಾದಿಂದ ಈ ವಯೋಮಾನದ ಶೇ.43ರಷ್ಟುಮಂದಿ ಬಲಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ.
ಈ ನಡುವೆ, ಕೊರೋನಾದಿಂದ ದೇಶದಲ್ಲಿ ಗುಣಮುಖರಾಗುವವರ ಸಂಖ್ಯೆ ಶೇ.63ಕ್ಕೆ ಹೆಚ್ಚಳವಾಗಿದೆ.
ಕೊರೋನಾ ಸೋಂಕು ದೇಶದಲ್ಲಿ ತೀವ್ರಗೊಂಡಿರುವ ನಡುವೆಯೇ ಸೋಂಕಿಗೆ ಬಲಿಯಾದವರು, ಗುಣಮುಖರಾದವರ ಬಗ್ಗೆ ಹಲವು ನಿಖರ ಅಂಕಿ-ಅಂಶಗಳು ಈಗ ಲಭ್ಯವಾಗಿವೆ. ಕೊರೋನಾಗೆ ಬಲಿಯಾದವರ ಪ್ರಮಾಣ ಕೇವಲ ಶೇ.2.72. ಬಲಿಯಾದವರಲ್ಲಿ 30ರಿಂದ 59 ವರ್ಷದ ನಡುವಿನವರ ಸಂಖ್ಯೆ ಶೇ.43 ಎಂದು ಗೊತ್ತಾಗಿದೆ. ಆದರೆ ಗುಣಮುಖರಾದವರ ಪ್ರಮಾಣ ಶೇ.63 ಎಂಬ ದೊಡ್ಡ ಸಮಾಧಾನದ ಸಂಗತಿಯೂ ಲಭಿಸಿದೆ.
ಭಾರತದಲ್ಲಿ ಕೊರೋನಾ ಲಸಿಕೆ 2021ರಲ್ಲಿ ಮಾತ್ರ ಲಭ್ಯ: ಕೇಂದ್ರ!
ದೇಶದ 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರಾಸರಿ ಮರಣ ಪ್ರಮಾಣ ರಾಷ್ಟ್ರೀಯ ಮರಣ ಪ್ರಮಾಣಕ್ಕಿಂತ ಕಡಿಮೆ ಇದೆ. ರಾಷ್ಟ್ರೀಯ ಮರಣ ಪ್ರಮಾಣ ಶೇ.2.72ಕ್ಕೆ ಕುಸಿದಿದೆ. ವಿಶ್ವದ ಇತರ ದೇಶಗಳ ಮರಣ ಪ್ರಮಾಣಕ್ಕೆ ಹೋಲಿಸಿದರೆ ಇದು ತುಂಬಾ ಕಡಿಮೆ. ಕೊರೋನಾ ಪರಿಸ್ಥಿತಿಯ ಸೂಕ್ತ ನಿರ್ವಹಣೆಯಿಂದ ಇದು ಸಾಧ್ಯವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಇನ್ನು ಶುಕ್ರವಾರದ ಅಂಕಿ ಅಂಶಗಳ ಪ್ರಕಾರ ಗುಣಮುಖ ಪ್ರಮಾಣ ಶೇ.62.42ರಷ್ಟಿದೆ. 18 ರಾಜ್ಯಗಳಲ್ಲಿ ಗುಣಮುಖ ಪ್ರಮಾಣ ರಾಷ್ಟ್ರೀಯ ಪ್ರಮಾಣಕ್ಕಿಂತ ಹೆಚ್ಚಿದೆ.
ದೇಶದಲ್ಲಿ 7,93,802 ಜನರಿಗೆ ಈವರೆಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 21,604 ಇದೆ. ಗುಣಮುಖರಾದವರ ಸಂಖ್ಯೆ 4,95,515 ಎಂದು ಅದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ‘ಕೊರೋನಾ ಟೆಸ್ಟಿಂಗ್ ಪ್ರಮಾಣ ತೀವ್ರವಾಗಿ ಹೆಚ್ಚಿಸಲಾಗಿದೆ. ದಿನಕ್ಕೆ 2.7 ಟೆಸ್ಟಿಂಗ್ ನಡೆಯುತ್ತಿದೆ. ಇದರಿಂದ ಹೆಚ್ಚು ಕೇಸುಗಳು ಪತ್ತೆಯಾಗಿ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಿದೆ’ ಎಂದರು.
30-59 ವರ್ಷದವರು ಶೇ.43:
ಈ ನಡುವೆ, ವೈರಸ್‌ಗೆ ಬಲಿಯಾದವರಲ್ಲಿ 30ರಿಂದ 59 ವರ್ಷ ವಯಸ್ಸಿನವರ ಪ್ರಮಾಣ ಶೇ.43 ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿವೆ.
ದೇಶದ ಶೇ.25ರಷ್ಟುಜನಸಂಖ್ಯೆ ಹೊಂದಿರುವ 45 ವರ್ಷಕ್ಕಿಂತ ಹೆಚ್ಚಿನವರು ಕೊರೋನಾಗೆ ‘ಹೈರಿಸ್ಕ್’ ಆಗಿದ್ದಾರೆ. ಕೊರೋನಗೆ ಬಲಿಯಾದವರಲ್ಲಿ 45 ವರ್ಷಕ್ಕಿಂತ ಹೆಚ್ಚಿನವರ ಪ್ರಮಾಣ ಶೇ.85. 45-74 ವರ್ಷ ವಯಸ್ಸಿನವರು ಶೇ.71 ಹಾಗೂ 30-44 ವರ್ಷ ವಯಸ್ಸಿನವರು ಶೇ.37 ಹಾಗೂ 45-59 ವರ್ಷ ವಯಸ್ಸಿನವರು ಶೇ.43 ಎಂದು ಆರೋಗ್ಯ ಸಚಿವಾಲಯ ಹೇಳಿದೆ.
‘ಕೆಲವು ದೇಶಗಳಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಕೊರೋನಾದಿಂದ ಮರಣ ಪ್ರಮಾಣ 40 ಇದ್ದರೆ ಭಾರತದಲ್ಲಿ 15 ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.