ಕಚ್ಚತೀವು ಬಳಿಕ ಮತ್ತೊಂದು ವಿವಾದ, ನೆಹರೂ ತಿರಸ್ಕಾರದಿಂದ 1950ರಲ್ಲಿ ಪಾಕ್ ಪಾಲಾಯ್ತಾ ಗ್ವಾದರ್?

By Suvarna NewsFirst Published Apr 7, 2024, 6:59 PM IST
Highlights

ಭಾರತದ ಕಚ್ಚತೀವು ದ್ವೀಪವನ್ನು ಕಾಂಗ್ರೆಸ್ ಶ್ರೀಲಂಕಾಗೆ ನೀಡಿದ ವಿವಾದ ಭುಗಿಲೆದ್ದ ಬಳಿಕ ಇದೀಗ ಗ್ವಾದರ್ ಬಂದರು ವಿವಾದ ಭುಗಿಲೆದ್ದಿದೆ. 1950ರಲ್ಲಿ ಈ ಬಂದರು ಸ್ಥಳವನ್ನು ಜವಾಹರ್‌ಲಾಲ್ ನೆಹರೂ ತಿರಸ್ಕರಿಸಿದ ಪರಿಣಾಮ ಪಾಕಿಸ್ತಾನ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇದೀಗ ಪಾಕಿಸ್ತಾನ ಹಾಗೂ ಚೀನಾದ ಪ್ರಮುಖ  ಬಂದರು ನೆಲೆಯಾಗಿದೆ. 
 

ನವದೆಹಲಿ(ಏ.07) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತಮಿಳುನಾಡಿನಿಂದ ಕೆಲವೇ ಅಂತರದಲ್ಲಿರುವ ಕಚ್ಚತೀವು ದ್ವೀಪ ಭಾರಿ ವಿವಾದ ಸೃಷ್ಟಿಸಿದೆ. 1974ರಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ನೀಡಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಮಿಳುನಾಡಿನ ಮೀನುಗಾರರ ಬದುಕನ್ನೇ ದುಸ್ತರ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಆರ್‌ಟಿಐ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಕಚ್ಚತೀವು ಕಾವು ಪಡೆದುಕೊಂಡಿತು. ಇದೀಗ ಕಾಂಗ್ರೆಸ್ ಸರ್ಕಾರ ಮಾಡಿದ ಮತ್ತೊಂದು ವಿವಾದ ಗ್ವಾದರ್ ಅನ್ನೋ ಆರೋಪ ಭುಗಿಲೆದ್ದಿದೆ. 1950ರಲ್ಲಿ ಜವಾಹರ್ ಲಾಲ್ ನೆಹರೂ ಗ್ವಾದರ್ ಬಂದರು ನೆಲೆ ಖರೀದಿ ಆಫರ್ ತಿರಸ್ಕರಿಸಿದ ಕಾರಣ ಈ ನೆಲೆ ಪಾಕಿಸ್ತಾನದ ಪಾಲಾಯಿತು ಎಂದು ದಾಖಲೆಗಳು ಹೇಳುತ್ತಿದೆ. ಇದೀಗ ಗ್ವಾದರ್ ಬಂದರು ವಿವಾದ ಕಾಂಗ್ರೆಸ್‌ಗೆ ಸುತ್ತಿಕೊಳ್ಳುತ್ತಿದೆ.

ಗ್ವಾದರ್ ಪಾಕಿಸ್ತಾನದ 3ನೇ ಅತೀ ದೊಡ್ಡ ಬಂದರಾಗಿದೆ. ಇದೇ ಬಂದರನ್ನು ಚೀನಾ ಕೂಡ ಬಳಸುತ್ತಿದೆ. ಇದರಿಂದ ಪಾಕಿಸ್ತಾನ ಹಾಗೂ ಚೀನಾ ಮೀನುಗಾರಿಗೆ, ವ್ಯಾಪಾರ ವಹಿವಾಟುಗಳು ಸೂಸೂತ್ರವಾಗಿ ನಡೆಯುತ್ತಿದೆ. ಪಾಕಿಸ್ತಾನದ ಆಡಳಿತದಲ್ಲಿರುವ ಈ ಗ್ವಾದರ್ ಬಂದರು ನೆಲೆ 1950ರ ವರೆಗೆ ಪಾಕಿಸ್ತಾನದ್ದಾಗಿರಲಿಲ್ಲ. ಬರೋಬ್ಬರಿ 200 ವರ್ಷಗಳ ಕಾಲ ಇದು ಒಮಾನಿ ಆಡಳಿತಕ್ಕೊಳಪಟ್ಟಿತ್ತು.

ಕಚ್ಚತೀವು ದ್ವೀಪ ಶ್ರೀಲಂಕಾಗೆ ನೀಡಿ ಭಾರತಕ್ಕೆ ದ್ರೋಹ ಬಗೆದ ಕಾಂಗ್ರೆಸ್, ಬಿಜೆಪಿ ಸುದ್ದಿಗೋಷ್ಠಿ!

1783ರಿಂಗ ಒಮನ್ ಸುಲ್ತಾನ್ ಬಳಿ ಇದ್ದ ಗ್ವಾದರನ್ನು 1950ರಲ್ಲಿ ಒಮನ್ ಮಾರಾಟಕ್ಕೆ ಮುಂದಾಯಿತು. ಒಮನ್ ಮೊದಲು ಭಾರತದ ಪ್ರಧಾನಿ ಜವಾಹರ್‌ಲಾಲ್ ಸಂಪರ್ಕಿಸಿ ಈ ಬಂದರು ನೆಲೆ ಖರೀದಿಸುವಂತೆ ಆಫರ್ ನೀಡಿದ್ದರು. ಆದರೆ ಈ ಬಂದರು ನಮಗ್ಯಾಕೆ ಎಂದು ನೆಹರೂ ಆಫರ್ ತಿರಸ್ಕರಿಸಿದ್ದರು ಎಂದು ವರದಿಯಾಗಿದೆ. ಒಟ್ನಲ್ಲಿ ಈ ಬಂದರು ನೆಲೆಯನ್ನು ಭಾರತ ಖರೀದಿಸಲಿಲ್ಲ. ಭಾರತದ ಮನಸ್ಸು ಬದಲಾಯಿಸಿ ಈ ಬಂದರು ನೆಲೆಯನ್ನು ಖರೀದಿಸಬಹುದು ಎಂದು ಕಾದ ಒಮನ್ ಸುಲ್ತಾನ್‌ಗೆ ಭಾರತದಿಂದ ಯಾವುದೇ ಸ್ಪಂದನೆ ಸಿಗಲಿಲ್ಲ.

1958ರಲ್ಲಿ ಅಂದರೆ ಭಾರತಕ್ಕೆ ಈ ಗ್ವಾದರ್ ಖರೀದಿಗೆ ಆಫರ್ ಮಾಡಿ 8 ವರ್ಷಗಳ ಬಳಿಕ ಪಾಕಿಸ್ತಾನ ಈ ಗ್ವಾದರ್ ಖರೀದಿಸಿತು. ಭಾರತದ ಆರ್ಥಿಕ ನೆರವಿನಲ್ಲಿ ಉಸಿರಾಡುತ್ತಿದ್ದ ಪಾಕಿಸ್ತಾನ ಈ ಬಂದರು ಖರೀದಿಸಿ ಐತಿಹಾಸಿಕ ಹಾಗೂ ಅತ್ಯಂತ ಮಹತ್ವದ ಹೆಜ್ಜೆ ಇಟ್ಟಿತ್ತು. ರಾಜಕೀಯ ಇಚ್ಚಾಶಕ್ತಿ ಹಾಗೂ ದೂರದೃಷ್ಟಿಯ ಕೊರತೆಯಿಂದ ಭಾರತ ಈ ಬಂದರು ನೆಲೆಯನ್ನು ಕಳೆದುಕೊಂಡಿತ್ತು ಎಂಬ ಆರೋಪ ಇದೀಗ ಭುಗಿಲೆದ್ದಿದೆ. 

ಕಚತೀವು ಮುಗಿದ ಅಧ್ಯಾಯ, ಲಂಕಾ-ಭಾರತ ಜಂಟಿಯಾಗಿ ಸಮಸ್ಯೆ ಇತ್ಯರ್ಥ; ಶ್ರೀಲಂಕಾ ಸರ್ಕಾರದ ಸ್ಪಷ್ಟನೆ!

ಭಾರತದ ಅವಿಭಾಜ್ಯ ಅಂಗವಾಗಿದ್ದ ಕಚ್ಚತೀವು ದ್ವೀಪವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಶ್ರೀಲಂಕಾಗೆ ನೀಡಿದ್ದರು. ಈ ದ್ವೀಪವನ್ನು ಶ್ರೀಲಂಕಾಗೆ ನೀಡಲು ಯಾವುದೇ ತಕರಾರಿಲ್ಲ ಎಂದು ಜವಾಹರ್‌ಲಾಲ್ ನೆಹರೂ ಕೂಡ ಹೇಳಿದ್ದರು. ಇದೀಗ ನೆಹರೂ ಕಾಲದಲ್ಲಿ ನಡೆದ ಮತ್ತೊಂದು ಘಟನೆ ಚುನಾವಣೆ ಹೊಸ್ತಿಲಲ್ಲೇ ವಿವಾದಕ್ಕೀಡಾಗಿದೆ.
 

click me!