ಜಮ್ಮು ಸ್ಫೋಟದ ಬೆನ್ನಲ್ಲೇ ತಪ್ಪಿತು ಮಹಾ ದುರಂತ; ಲಷ್ಕರ್ ಉಗ್ರ, 6 ಕೆಜಿ IED ವಶ!

Published : Jun 27, 2021, 05:33 PM IST
ಜಮ್ಮು ಸ್ಫೋಟದ ಬೆನ್ನಲ್ಲೇ ತಪ್ಪಿತು ಮಹಾ ದುರಂತ; ಲಷ್ಕರ್ ಉಗ್ರ,  6 ಕೆಜಿ IED ವಶ!

ಸಾರಾಂಶ

ಜಮ್ಮುವಿನಲ್ಲಿ ಹೆಚ್ಚಾಯ್ತು ಉಗ್ರರ ಉಪಟಳ, ಆತಂಕದಲ್ಲಿ ಜನ ಭಾರತೀಯ ಸೇನೆ ವಾಯುನೆಲೆ ಸ್ಫೋಟದ ಬೆನ್ನಲ್ಲೇ ತಪ್ಪಿದ ದುರಂತ ಲಷ್ಕರ್ ಉಗ್ರ ಹಾಗೂ ಬರೋಬ್ಬರಿ 6 ಕೆಜಿ IED ಸ್ಫೋಟಕ ವಶಕ್ಕೆ

ಜಮ್ಮು(ಜೂ.27):  ಕಣಿವೆ ರಾಜ್ಯದ ಜಮ್ಮುವಿನ ಭಾರತೀಯ ಸೇನೆ ವಾಯುನೆಲೆಯಲ್ಲಿ ಸಂಭವಿಸಿದ ಡ್ರೋನ್ ಸ್ಫೋಟ ಮತ್ತೊಮ್ಮೆ ದೇಶದ ಭದ್ರತೆಗೆ ಸವಾಲೆಸೆದಿದೆ. ಏರ್‌ಬೇಸ್ ತಾಂತ್ರಿಕ ಪ್ರದೇಶದಲ್ಲಿ 5 ನಿಮಿಷಗಳ ಅಂತರದಲ್ಲಿ 2 ಸ್ಫೋಟ ಸಂಭವಿಸಿದೆ. ಈ ಘಟನೆ ಬೆನ್ನಲ್ಲೇ ಇದೀಗ ಜಮ್ಮುವಿನಲ್ಲಿ ಮತ್ತೊಂದು ಮಹಾದುರಂತ ತಪ್ಪಿದೆ. ಜಮ್ಮುವಿನಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ ಲಷ್ಕರ್ ಇ ತೈಬಾ ಉಗ್ರ ಹಾಗೂ ಆತನಿಂದ ಬರೋಬ್ಬರಿ 6 ಕೆಜಿ IED ಸ್ಫೋಟಕಗಳನ್ನು ಜಮ್ಮು ಪೊಲೀಸರು ವಶಪಡಿಸಿದ್ದಾರೆ.

5 ನಿಮಿಷದ ಅಂತರದಲ್ಲಿ 2 ಸ್ಫೋಟ, ಜಮ್ಮು ಏರ್‌ಫೋರ್ಟ್‌ನಲ್ಲಿ ಆತಂಕ!

ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್ ಇ ತೈಬಾದ ಉಗ್ರನೋರ್ವ ಜಮ್ಮುವಿನಲ್ಲಿ ವಿದ್ವಂಸಕ ಕೃತ್ಯ ಎಸೆಗಲು ಮಾಸ್ಟರ್ ಪ್ಲಾನ್ ಮಾಡಿದ್ದ. ಉಗ್ರನನ್ನು ಜಮ್ಮು ಪೊಲೀಸರು ಬಂಧಿಸಿದ್ದಾರೆ. ಜಮ್ಮು ಕಾಶ್ಮೀರ ಡಿಜಿಪಿ ದಿಲ್‌ಭಾಗ್ ಸಿಂಗ್ ಘಟನೆ ಕುರಿತು ಸುದ್ಧಿಗೋಷ್ಠಿ ನಡೆಸಿದ್ದಾರೆ.

ಲಷ್ಕರ್‌ನ ಟಾಪ್ ಉಗ್ರವಾದಿ ಮುದಾಸಿರ್ ಪಂಡಿತ್ ಸೇರಿ ಮೂವರ ಎನ್ಕೌಂಟರ್

ಲಷ್ಕರ್ ಇ ತೈಬಾ ಉಗ್ರ ಸಂಘಟನೆ ವ್ಯವಸ್ಥಿತವಾಗಿ ರೂಪಿಸಿದ ಪ್ಲಾನ್ ಇದು. ಆದರೆ ಈ ಕುರಿತು ಮಾಹಿತಿ ಪಡೆದು ಉಗ್ರರನ್ನು ಬಂಧಿಸಿ ದುರಂತ ತಪ್ಪಿಸುವಲ್ಲಿ ಜಮ್ಮು ಪೊಲೀಸರು ಯಶಸ್ವಿಯಾಗಿದ್ದಾರೆ. ಮತ್ತಷ್ಟು ಉಗ್ರರು ಈ ಕೃತ್ಯಕ್ಕಾಗಿ ಸಜ್ಜಾಗಿರುವ ಮಾಹಿತಿ ಇದೆ. ಹೀಗಾಗಿ ಕಾರ್ಯಚರಣೆ ಮುಂದುವರಿದಿದೆ ಎಂದು ದಿಲ್‌ಬಾಗ್ ಸಿಂಗ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!