ರಸ್ತೆ ತುಂಬ ಹಿಮಪಾತ, ವಾಹನ ಸಂಚಾರ ಬಂದ್, ತೀವ್ರ ಹಿಮಪಾತದೊಳಗೆ ಸಿಲುಕಿದ ನಾಗರೀಕರನ್ನು ರಕ್ಷಿಸಲು ಭಾರತೀಯ ಸೇನೆ ಮಧ್ಯರಾತ್ರಿ ಸತತ 5 ಗಂಟೆ ಕಾಲ್ನಡಿಗೆಯಲ್ಲಿ ತೆರಳಿ ಯಶಸ್ವಿಯಾಗಿ ಕಾರ್ಯಚರಣೆ ಮಾಡಿದೆ. ಈ ರೋಚಕ ಘಟನೆ ವಿವರ ಇಲ್ಲಿದೆ.
ಜಮ್ಮು ಮತ್ತು ಕಾಶ್ಮೀರ(ನ.17); ದೇಶದ ಬಹುತೇಕ ಭಾಗಗಳಲ್ಲಿ ತೀವ್ರ ಚಳಿ ವಾತಾವರಣವಿದೆ. ಇನ್ನು ಜಮ್ಮ ಮತ್ತು ಕಾಶ್ಮೀರದಲ್ಲಿ ಹಿಮಪಾತವಾಗುತ್ತಿದೆ. ಮಂಜಿನ ಮಳೆ ಸುರಿಯುತ್ತಿದೆ. ಹೀಗಾಗಿ ಅಪಾಯದ ಮಟ್ಟ ಹೆಚ್ಚಾಗಿದೆ. ಚಿಂಗಮ್ ತೆರಳುವ NH-244 ದಾರಿಯ ಸಿಂತನ್ ಪಾಸ್ ಬಳಿ ಹಿಮಪಾತದಲ್ಲಿ ಸಿಲುಕಿದ್ದ 10 ನಾಗರೀಕರನ್ನು ಭಾರತೀಯ ಸೇನೆ ಹರಸಾಹಸಪಟ್ಟು ರಕ್ಷಿಸಿದೆ.
ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ದೀಪಾವಳಿ ಗಿಫ್ಟ್ ನೀಡಿದ ಭಾರತೀಯ ಸೇನೆ!.
undefined
ಸಿಂತಮ್ ಪಾಸ್ ಬಳಿ ಇಬ್ಬರು ಮಹಿಳೆಯರು, ಮಗು ಸೇರಿದಂತೆ ಒಟ್ಟು 10 ನಾಗರೀಕರು ಹಿಮಪಾತದಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವಿಚಾರ ಭಾರತೀಯ ಸೇನೆ ತಿಳಿದಿದೆ. ತಕ್ಷಣವೇ ಸೇನೆ ಕಾರ್ಯಪ್ರವೃತ್ತವಾಗಿದೆ. ಆದರೆ ಸ್ಥಳಕ್ಕೆ ಧಾವಿಸಲು ಇರುವ ಮಾರ್ಗಗಳೆಲ್ಲಾ ಹಿಮದಿಂದ ಬಂದ್ ಆಗಿತ್ತು.
ಸೈನಿಕರಿಗಾಗಿ ವ್ಯಾಟ್ಸಾಪ್ ರೀತಿ ಮೆಸೇಜ್ ಆ್ಯಪ್ ಲಾಂಚ್ ಮಾಡಿದ ಭಾರತೀಯ ಸೇನೆ!.
ತಡ ಮಾಡದ ಸೇನೆ ಮಧ್ಯರಾತ್ರಿ ಕಾಲ್ನಡಿಗೆಯಲ್ಲಿ ತೆರಳಿತು. ಟಾರ್ಟ್ ಬೆಳಕು ಹಾಯಿಸಿದರೆ ಮಂಜಿನ ಕಾರಣ ಸ್ವಲ್ಪವೂ ಕಾಣದ ಪರಿಸ್ಥಿತಿ. ಛಲ ಬಿಡದ ಸೇನೆ ಸತತ 5 ಗಂಟೆ ಕಾಲ್ನಡಿಗೆಯಲ್ಲಿ ತೆರಳಿ 10 ನಾಗರೀಕರನ್ನು ರಕ್ಷಿಸಿದೆ. ಬಳಿಕ ಸಿಂಥಮ್ ಸೇನಾ ಮೈದಾನಕ್ಕೆ ಕರೆ ತಂದು, ಆಹಾರ, ನೀರು, ಬೆಚ್ಚಿಗಿನ ಹೊದಿಕೆ ನೀಡಿ ಆರೈಸಲಾಗಿದೆ.
ಕಳೆದ 24 ಗಂಟೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ದಾಖಲೆ ಪ್ರಮಾಣದ ಹಿಮಪಾತವಾಗಿದೆ. 3.7mm ಹಿಮಪಾತ ದಾಖಲಾಗಿದೆ. ಇನ್ನು ತಾಪಮಾನ 2.3 ಡಿಗ್ರಿಗಿಂತ ಕಡಿಮೆಯಾಗಿದೆ. ಕೊರವ ಚಳಿಯಲ್ಲಿ ನಾಗರೀಕರನ್ನು ರಕ್ಷಿಸಿದ ಭಾರತೀಯ ಸೇನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.