
ನವದೆಹಲಿ(ನ.17): ಪಿಎಂ ಮೋದಿ ಸೋಮವಾರದಂದು ಜೈನ ಆಚಾರ್ಯ ಶ್ರೀ ವಿಜಯವಲ್ಲಭ ಸುರಿಶ್ವರ್ ಜೀ ಮಹಾರಾಜ್‌ರವರ 151ನೇ ಜಯಂತಿ ಆಚರಣೆ ವೇಳೆ 'Statue Of Peace' ಅನಾವರಣಗೊಳಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು ಯಾವ ರೀತಿ ಸ್ವಾತಂತ್ರ್ಯ ಆಂದೋಲನದ ಮುನ್ನುಡಿ ಭಕ್ತಿ ಆಂದೋಲನದ ಮೂಲಕ ಆರಂಭವಾಗಿತ್ತೋ, ಹಾಗೆಯೇ ಆತ್ಮನಿರ್ಭರ ಭಾರತದ ಮುನ್ನುಡಿಯನ್ನು ನಮ್ಮ ಸಾಧು ಸಂತರು ಬರೆಯಬಹುದೆಂದಿದ್ದರು.
ದೇಶದ ಪ್ರತಿಯೊಬ್ಬ ವ್ಯಕ್ತಿಯವರೆಗೆ ವೋಕಲ್ ಫಾರ್ ಲೋಕಲ್ ಸಂದೇಶ ತಗುಪುತ್ತಿರಬೇಕು. ಹೀಗಾಗಿ ನಾನು ಸಂತರು ಹಾಗೂ ಮಹಾಪುರುಷರಲ್ಲಿ ಈ ನಿಟ್ಟಿನಲ್ಲಿ ಮುಂದುವರೆಯುವಂತೆ ಆಗ್ರಹಿಸುತ್ತೇನೆ ಎಂದಿದ್ದರು.
ಆತ್ಮನಿರ್ಭರ್ ಭಾರತ: In ಮೊಬೈಲ್ ಸೀರಿಸ್ ಬಿಡುಗಡೆ ಮಾಡುತ್ತಿದೆ ಮೈಕ್ರೋಮ್ಯಾಕ್ಸ್!
ಯಾರು ಏನು ಹೇಳಿದ್ದಾರೆ?
ಈ ಸಂಬಂಧ ಪ್ರತಿಕ್ರಿಯಿಸಿರುವ ಗುರುದೇವ್ ಶ್ರೀ ಶ್ರೀ ರವಿಶಂಕರ್ 'ಪಿಎಂ ಮೋದಿಯವರ ಆತ್ಮನಿರ್ಭರ ಅಭಿಯಾನವನ್ನು ಸಮರ್ಥಿಸಿಕೊಳ್ಳುತ್ತಾ ನಮ್ಮ ಯುವಕರು ಸೋಶಿಯಲ್ ಮೀಡಿಯಾದಲ್ಲಿ ElymentsApp ನಿರ್ಮಿಸಿದ್ದಾರೆ. ದಿನನಿತ್ಯ ಉಪಯೋಗಕ್ಕೆ ಬೀಳುವ ವಸ್ತಯಗಳ ಕ್ಷೇತ್ರದಲ್ಲೂ ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ SriSriTattva, ArtofLiving ಸಂಪೂರ್ಣವಾಗಿ ಸಮರ್ಪಿಸುತ್ತೇವೆ' ಎಂದಿದ್ದಾರೆ.
ಅತ್ತ ಬಾಬಾ ರಾಮ್‌ದೇವ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಭಾರತವನ್ನು ಎಲ್ಲಾ ದಿಕ್ಕಿನಿಂದ ಆತ್ಮನಿರ್ಭರವನ್ನಾಗಿಸಲು, ಆರ್ಥಿಕ ಮತ್ತು ಸಾಮಾಜಿಕವಾಗಿ ಲೂಟಿಯಾಗುವುದನ್ನು ತಪ್ಪಿಸಲು ಪತಂಜಲಿ ಸಂಸ್ಥೆ ಹಾಗೂ ನಮ್ಮ ಕೋಟ್ಯಂತರ ಬೆಂಬಲಿಗರು ತಯಾರಿದ್ದಾರೆ ಎಂದಿದ್ದಾರೆ.
ಬಂದೇ ಬಾರಿಗೆ ಸಿಎಂ, ಪಿಎಂನಿಂದ ರೈತರಿಗೆ ಭರ್ಜರಿ ಗಿಫ್ಟ್...!
ಸದ್ಗುರು ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಆತ್ಮನಿರ್ಭರ ಒಂದು ಮೂಲಭೂತ ಶಕ್ತಿ. ಒಂದು ಬಲಶಾಲಿ ಹಾಗೂ ಸ್ಥಿರ ರಾಷ್ಟ್ರಕ್ಕೆ ಇದು ಮಹತ್ವಪೂರ್ಣವಾಗಿದೆ. ಆದರೆ ಇದು ಕೇವಲ ಬದ್ಧ ನಾಗರಿಕರ ಸಹಕಾರದಿಂದಷ್ಟೇ ಸಾಧ್ಯ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ