ಬಿಆರ್‌ಎಸ್ ನಾಯಕಿ ಕೆ.ಕವಿತಾ ತಿಹಾರ್ ಜೈಲಿನ ಅಧಿಕಾರಿಗಳ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಜೈಲಿನ ಅಧಿಕಾರಿಗಳು ನನಗೆ ಮನೆ ಊಟ ನೀಡುತ್ತಿಲ್ಲ, ಮೆತ್ತನೆಯ ಹಾಸಿಗೆ ಕೊಟ್ಟಿಲ್ಲ ಎಂದು ಅವರು ದೂರಿದಿದ್ದಾರೆ.
ನವದೆಹಲಿ (ಮಾ.30): ಕೋರ್ಟ್ ನೀಡಿರುವ ಆದೇಶದಂತೆ ಮನೆಯ ಊಟ ಹಾಗೂ ಮೆತ್ತನೆಯ ಹಾಸಿಗೆ ನೀಡಲು ತಿಹಾರ್ ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಬಿಆರ್‌ಎಸ್ ನಾಯಕಿ ಕೆ.ಕವಿತಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಜೈಲುಪಾಲಾಗಿರುವ ಕೆ.ಕವಿತಾ, ತಮಗೆ ಜೈಲನಲ್ಲಿ ದಾಲ್ ರೈಸ್ ಹಾಗೂ ಜೈಲಿನ ಹಾಸಿಗೆಯನ್ನೇ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕೆ. ಕವಿತಾ ತಿಹಾರ್ ಜೈಲಿನಲ್ಲಿ ತಮ್ಮ ಮೊದಲ ದಿನವನ್ನು ಕಳೆದಿದ್ದಾರೆ. ಅದರ ಬೆನ್ನಲ್ಲಿಯೇ ನಿಜಾಮಾಬಾದ್‌ನ ಎಂಎಲ್‌ಸಿ ಹಾಗೂ ಬಿಆರ್‌ಎಸ್ ಸಂಸ್ಥಾಪಕ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಜೈಲು ಅಧಿಕಾರಿಗಳ ವಿರುದ್ಧ ದೂರಿದ್ದಾರೆ. ಮೊದಲ ದಿನ ಜೈಲಿನಲ್ಲಿ ಅವರಿಗೆ ಜೈಲಿನ ಆಹಾರವನ್ನೇ ನೀಡಲಾಗಿದ್ದು, ಇಬ್ಬರು ಮಹಿಳಾ ಕೈದಿಗಳಿದ್ದ ಸೆಲ್‌ನಲ್ಲಿನೇ ದಿನವನ್ನು ಕಳೆದಿದ್ದಾರೆ.
ಮಹಿಳಾ ಕೈದಿಗಳಿಗೆ ಮೀಸಲಾದ ತಿಹಾರ್‌ನ ಜೈಲು ಸಂಖ್ಯೆ ಆರರಲ್ಲಿ ಇಬ್ಬರು ಮಹಿಳಾ ಕೈದಿಗಳ ಜೊತೆ ನಿಜಾಮಾಬಾದ್ ಎಂಎಸ್‌ಎಲ್ ತಮ್ಮ ಮೊದಲ ದಿನ ಕಳೆದಿದ್ದಾರೆ. "ಅವರು ಮಂಗಳವಾರ ರಾತ್ರಿ ಇತರ ಕೈದಿಗಳಿಗೆ ನೀಡಲಾಗುತ್ತಿದ್ದ ದಾಲ್ ಮತ್ತು ಅನ್ನವನ್ನು ಸೇವಿಸಿದರು ಮತ್ತು ಬುಧವಾರ ಬೆಳಿಗ್ಗೆ ತಿಂಡಿ ಹಾಗೂ ಚಹಾವನ್ನು ಸೇವನೆ ಮಾಡಿದ್ದಾರೆ" ಎಂದು ಜೈಲು ಮೂಲವನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಪ್ರಭಾವಿ ಅರೆಸ್ಟ್ ಆಗಿರುವ ಕೆ. ಕವಿತಾ ಅವರು ಹೊರಗಡೆ ಇದ್ದಲ್ಲಿ ಬೇರೆಯವರ ಮೇಲೆ ಪ್ರಭಾವ ಬೀರಬಹುದು ಎಂದು ಜಾರಿ ನಿರ್ದೇಶನಾಲಯ ಮನವಿ ಮಾಡಿದ ನಂತರ ದೆಹಲಿ ನ್ಯಾಯಾಲಯವು ಅವರನ್ನು ಏಪ್ರಿಲ್ 9 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಇದರ ಬೆನ್ನಲ್ಲಿಯೇ ಮಂಗಳವಾರ ಸಂಜೆ ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯಲಾಗಿತ್ತು. ಅವರು ಬಿಡುಗಡೆಯಾದಲ್ಲಿ ಸಾಕ್ಷಿಗಳು ಮತ್ತು ಸಾಕ್ಷ್ಯ ನಾಶಕ್ಕೆ ಪ್ರಯತ್ನ ಮಾಡುತ್ತಾರೆ ಎಂದು ದೂರಲಾಗಿತ್ತು.
ಆಕೆಯನ್ನು ಜೈಲಿಗೆ ಕಳುಹಿಸುವ ಮೊದಲು, ಬಿಆರ್‌ಎಸ್ ನಾಯಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ವೈದ್ಯರ ಮುಂದೆ ಹಾಜರುಪಡಿಸಲಾಯಿತು ಎಂದು ವರದಿ ತಿಳಿಸಿದೆ. ತಪಾಸಣೆಯ ಸಮಯದಲ್ಲಿ ಆಕೆಯ ರಕ್ತದೊತ್ತಡ ಸ್ವಲ್ಪ ಕಡಿಮೆಯಾಗಿತ್ತು ಆದರೆ ನಂತರ ಸಾಮಾನ್ಯ ಸ್ಥಿತಿಗೆ ಸುಧಾರಿಸಿತು.
'ವೈದ್ಯಕೀಯ ಪರೀಕ್ಷೆಗಳನ್ನು ಬಳಿಕ ಅವರನ್ನು ನೇರವಾಗಿ ಸೆಲ್‌ಗೆ ಕಳುಹಿಸಲಾಯಿತು. ವೈದ್ಯಕೀಯ ತಪಾಸಣೆಯ ಸಮಯದಲ್ಲಿ ಅವರ ರಕ್ತದೊತ್ತಡ ಸ್ವಲ್ಪ ಕಡಿಮೆಯಾಗಿತ್ತು ಆದರೆ ನಂತರ ಅದು ಸಹಜ ಸ್ಥಿತಿಗೆ ಮರಳಿತು" ಎಂದು ಮೂಲವನ್ನು ಉಲ್ಲೇಖಿಸಿ ವರದಿ ಹೇಳಿದೆ.
ಸಿಎಂ ಕೇಜ್ರಿವಾಲ್, ಸಿಸೋಡಿಯಾಗೆ ಕೆ ಕವಿತಾ 100 ಕೋಟಿ ರೂ ಲಂಚ, ತನಿಖೆಯಲ್ಲಿ ಬಹಿರಂಗ!
ಜೈಲು ನಿಯಮಗಳ ಪ್ರಕಾರ, ಬಿಆರ್‌ಎಸ್ ನಾಯಕನಿಗೆ ಹಾಸಿಗೆ, ಚಪ್ಪಲಿ, ಬಟ್ಟೆ, ಬೆಡ್‌ಶೀಟ್ ಮತ್ತು ಹೊದಿಕೆಯನ್ನು ನೀಡಲಾಯಿತು. ಆಕೆಗೆ ಔಷಧಗಳನ್ನು ಸಹ ಒದಗಿಸಲಾಗಿದೆ. ಈ ಹಂತದಲ್ಲಿ ತಮಗೆ ಜೈಲನಲ್ಲಿ ಇಂಥದ್ದೇ ಬೇಕು ಎಂದು ಕೇಳಲಿಲ್ಲ ಎಂದು ಜೈಲಿನ ಅಧಿಕಾರಿ ತಿಳಿಸಿದ್ದಾರೆ. “ನ್ಯಾಯಾಲಯದ ಆದೇಶದಂತೆ ಕವಿತಾ ಮನೆಯಲ್ಲಿ ಅಡುಗೆ ಮಾಡಿದ ಆಹಾರ, ಹಾಸಿಗೆ, ಚಪ್ಪಲಿ, ಬಟ್ಟೆ, ಬೆಡ್‌ಶೀಟ್, ಹೊದಿಕೆ, ಪುಸ್ತಕಗಳು, ಪೆನ್ನು ಮತ್ತು ಕಾಗದ ಮತ್ತು ಔಷಧಿಗಳನ್ನು ಹೊಂದಲು ಅನುಮತಿ ಇದೆ. "ಚಹಾ, ಆಹಾರ ಮತ್ತು ಟಿವಿ ನೋಡುವ ಸಮಯವು ಇತರ ಕೈದಿಗಳಂತೆಯೇ ಇರುತ್ತದೆ" ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು, ಎಲ್ಲಾ ಕೈದಿಗಳಿಗೆ ತೆರೆದಿರುವ ತಿಹಾರ್ ಜೈಲಿನ ಲೈಬ್ರರಿಯಲ್ಲಿ ಪುಸ್ತಕಗಳನ್ನು ಓದಬಹುದು ಎನ್ನಲಾಗಿದೆ.
ಲೋಕಸಭಾ ಚುನಾವಣೆ ಬೆನ್ನಲ್ಲೇ, ಇಡಿ ಸುಳಿಯಲ್ಲಿ ವಿಪಕ್ಷಗಳ ಪ್ರಮುಖ ನಾಯಕರು! ಯಾರ‍್ಯಾರು?