
ಚೀನಾ ಪ್ರಾಡಕ್ಟ್ ಬಾಯ್ಕಾಟ್ ಅಭಿಯಾನ ಆರಂಭವಾದ ಬೆನ್ನಲ್ಲೇ ಇದೀಗ ಚೀನಾ ವಸ್ತುಗಳಿಗೆ ಜಾಹೀರಾತು ನೀಡಬಾರದು ಎಂದು ಸಿಐಎಟಿ ಸಲೆಬ್ರಿಟಿಗಳಿಗೆ ಪತ್ರದ ಮೂಲಕ ತಿಳಿಸಿದೆ.
ಲಾಡಾಖ್‌ನ ಗಲ್ವಾನಾದಲ್ಲಿ ಚೀನಾ ಹಾಗೂ ಭಾರತದ ನಡುವಿನ ದಾಳಿ ಪ್ರತಿದಾಳಿ ಬೆಳವಣಿಗೆಯ ನಂತರ ಸಿಐಎಟಿ ಇಂತಹದೊಂದು ಸೂಚನೆ ನೀಡಿದೆ. 20 ಭಾರತೀಯ ಯೋಧರ ಹುತಾತ್ಮರಾದ ನಂತರ ಭಾರತೀಯ ವ್ಯಾಪಾರಿ ಒಕ್ಕೂಟ ಚೀನಾ ವಸ್ತುಗಳನ್ನು ಭಾರತದಿಂದ ನಿಷೇಧಿಸುವ ಅಭಿಯಾನವನ್ನೇ ಆರಂಭಿಸಿದೆ.
ಚೀನಾದ 371 ವಸ್ತುಗಳ ಆಮದಿಗೆ ನಿರ್ಬಂಧ
ಇದೀಗ ಇತ್ತೀಚಿನ ಬೆಳವಣಿಗೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ಬಹಿರಂಗ ಪತ್ರ ಬರೆಯಲಾಗಿದ್ದು, ಚೈನೀಸ್ ಪ್ರಾಡಕ್ಟ್‌ಗಳಿಗೆ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ತಿಳಿಸಲಾಗಿದೆ. ಈ ಮೂಲಕ ಅಭಿಯಾನಕ್ಕೆ ಕೈ ಜೋಡಿಸುವಂತೆ ಸೂಚಿಸಲಾಗಿದೆ.
ಸಾರಾ ಅಲಿಖಾನ್, ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್, ಬಾದ್‌ಶಾ, ರಣಬೀರ್ ಕಫೂಋf, ರಣವೀರ್ ಸಿಂಗ್, ಸಲ್ಮಾನ್ ಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಚೂನೀಸ್ ವಸ್ತುಗಳಿಗೆ ಜಾಹೀರಾತು ನೀಡುವ ಎಲ್ಲ ಸೆಲೆಬ್ರಿಟಿಗಳೂ ಜಾಹೀರಾತು ನೀಡದೆ ಅಭಿಯಾನದಲ್ಲಿ ಕೈಜೋಡಿಸಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಬೇಕೆಂದು ಕೇಳಿಕೊಂಡಿದ್ದಾರೆ. ಈ ಮೂಲಕ ಮಾಡುವುದರಿಂದ ಚೂನೀಸ್ ವಸ್ತುಗಳ ಆಮದು ಕಡಿಮೆಯಾಗುವುದಲ್ಲದೆ, ದೇಶೀಯ ವಸ್ತುಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ