ಭಾರತದಲ್ಲಿ ಗೋಚರವಾಗದ ಚಂದ್ರ, ದೇಶಾದ್ಯಂತ ಏಪ್ರಿಲ್‌ 11ಕ್ಕೆ ಈದ್‌ ಆಚರಣೆ

By Santosh NaikFirst Published Apr 9, 2024, 8:27 PM IST
Highlights


ಭಾರತದಲ್ಲಿ ಮಂಗಳವಾರ ಚಂದ್ರ ಗೋಚರವಾಗದ ಹಿನ್ನಲೆಯಲ್ಲಿ ದೇಶಾದ್ಯಂತ ಈದ್‌ ಅನ್ನು ಗುರುವಾರ ಅಂದರೆ ಏಪ್ರಿಲ್‌ 11 ರಂದು ಆಚರಣೆ ಮಾಡಲಾಗುತ್ತದೆ ಎಂದು ಘೋಷಿಸಲಾಗಿದೆ.
 

ನವದೆಹಲಿ (ಏ.9): ದೆಹಲಿಯ ಜಾಮಾ ಮಸೀದಿ ಮತ್ತು ಫತೇಪುರಿ ಮಸೀದಿಯ ಇಮಾಮ್‌ಗಳು ಮಂಗಳವಾರ ಚಂದ್ರನ ದರ್ಶನವಾಗದ ಕಾರಣ ಭಾರತದಲ್ಲಿ ಈದ್ ಅನ್ನು ಗುರುವಾರ ಆಚರಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. 'ಏಪ್ರಿಲ್ 9 ರಂದು ಲಕ್ನೋದಲ್ಲಿ ಚಂದ್ರನನ್ನು ನೋಡಲು ಸಾಧ್ಯವಾಗಲಿಲ್ಲ ಮತ್ತು ಭಾರತದ ಯಾವುದೇ ಭಾಗದಿಂದ ಚಂದ್ರನ ದರ್ಶನದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ, 30 ನೇ ರೋಜಾವನ್ನು ನಾಳೆ (ಏಪ್ರಿಲ್ 10 ರಂದು) ಮತ್ತು ಈದ್-ಉಲ್-ಫಿತರ್ ಅನ್ನು ಏಪ್ರಿಲ್ 11 ರಂದು ದೇಶಾದ್ಯಂತ ಆಚರಿಸಲಾಗುವುದು ಎಂದು ಘೋಷಿಸಲಾಗಿದೆ' ಎಂದು  ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾ (ಐಸಿಐ) ಅಧ್ಯಕ್ಷ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ಮಂಗಳವಾರ ಚಂದ್ರದರ್ಶನದ ಕುರಿತು ಹೇಳಿದ್ದಾರೆ.

ಇನ್ನೊಂದೆಡೆ ಭಾರತದ ಕರಾವಳಿ ಪ್ರದೇಶದಲ್ಲಿ ಚಂದ್ರಗೋಚರವಾಗಿದೆ ಎನ್ನಲಾಗಿದ್ದು, ಕೇರಳದಲ್ಲಿ ಏಪ್ರಿಲ್‌ 10ರಂದೇ ಈದ್‌ ಆಚರಣೆ ಮಾಡುವುದಾಗಿ ಘೋಷಣೆಯಾಗಿದೆ. ಅದಲ್ಲದೆ, ಕರ್ನಾಟಕದ ಕರಾವಳಿ ಜಿಲ್ಲೆಯ ಮುಸ್ಲಿಮರು ಕೂಡ ಏಪ್ರಿಲ್‌ 10 ರಂದೇ ಈದ್‌ ಆಚರಣೆ ಮಾಡುವುದಾಗಿ ತಿಳಿಸಿದ್ದಾರೆ.

Moon not sighted, Eid to be celebrated in India on Thursday: Imams of Delhi's Jama Masjid and Fatehpuri mosque

— Press Trust of India (@PTI_News)

 

 

click me!