ಮುಂಬೈ(ಮೇ.11): ಕೊರೋನಾದ ಜೊತೆ ಸತತವಾಗಿ ಹೋರಾಡುತ್ತಿರುವ ಮುಂಬೈ ಜನರಿಗೆ ಈಗ ಧಾರ್ಮಿಕ ಕೇಂದ್ರದಲ್ಲಿ ಅಭಯ ಸಿಕ್ಕಿದೆ. ಮುಂಬೈನ ಜೈನ ದೇವಾಲಯದಲ್ಲಿ ಕೊರೋನಾ ಲಸಿಕೆ ಕೇಂದ್ರ ಆರಂಭಿಸಿದ್ದು ಈ ಮೂಲಕ ಧಾರ್ಮಿಕ ಕೇಂದ್ರದಲ್ಲಿ ತೆರೆಯ ಮೊದಲ ವ್ಯಾಕ್ಸಿನೇಷನ್ ಸೆಂಟರ್ ಆಗಿದೆ ಇದು.
ಅಂದೇರಿಯ ಜೆಬಿ ನಗರದಲ್ಲಿರುವ ಜೈನ ಮಂದಿರದ ಆವರಣದಲ್ಲಿ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಈ ಜೈನ ಮಂದಿರವನ್ನು ಸುಸಜ್ಜಿತ ಲಸಿಕಾ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, ಸಿಸಿಟಿವಿ, ರೆಫ್ರಿಜರೇಟರ್, ಕೊಠಡಿ ಎಲ್ಲವನ್ನೂ ಸಿದ್ಧ ಮಾಡಲಾಗಿದೆ.
undefined
ಇತರರಿಗೆ ಆಕ್ಸಿಜನ್ ಕೊಳ್ಳೋಕೆ ಒಡವೆ ಮಾರಿದ ದಂಪತಿಗೆ ಜನ ಥ್ಯಾಂಕ್ಸ್ ಹೇಳಿದ್ದು ಹೀಗೆ
ಕೊವಿನ್ ಆಪ್‌ನಲ್ಲಿ ಇದನ್ನು ತರುಣ್‌ಭಾರತ್ ಜೈನ ಮಂದಿರ ಎಂದು ಲಸಿಕಾ ಕೇಂದ್ರದ ಲಿಸ್ಟ್‌ನಲ್ಲಿ ಸೇರಿಸಲಾಗಿದೆ. ಇಲ್ಲಿ ಸೆವೆನ್ ಹಿಲ್ಸ್ ಆಸ್ಪತ್ರೆ ಲಸಿಕೆ ಅಭಿಯಾನ ನಡೆಸಲಿದೆ.
ಲಸಿಕಾ ಕೇಂದ್ರದಲ್ಲಿ ಜಾತಿ, ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ ಎನ್ನಲಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಈ ಪ್ಲಾನ್ ಬಂದಿತ್ತು. ಅಗತ್ಯ ವ್ಯವಸ್ಥೆಗಳನ್ನು ಮಾಡಿ, ಸೌಕರ್ಯಗಳನ್ನು ಮಾಡಿದ ನಂತರ ಕೇಂದ್ರ ತೆರೆಯಲಾಗಿದೆ ಎಂದು ಸಂಘದ ಕಾರ್ಯದರ್ಶಿ ಸಂಜಯ್ ವೋರಾ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona