ಹೆಣದ ಮೇಲಿನ ಬಟ್ಟೆ ಕದ್ದು, ಹೊಸ ಸ್ಟಿಕ್ಕರ್‌ ಅಂಟಿಸಿ ಮಾರಾಟ!

Published : May 11, 2021, 09:04 AM ISTUpdated : May 11, 2021, 09:08 AM IST
ಹೆಣದ ಮೇಲಿನ ಬಟ್ಟೆ ಕದ್ದು, ಹೊಸ ಸ್ಟಿಕ್ಕರ್‌ ಅಂಟಿಸಿ ಮಾರಾಟ!

ಸಾರಾಂಶ

* 7 ಮಂದಿ ಗ್ಯಾಂಗ್ ಬಂಧಿಸಿದ ಪೊಲೀಸರು * ಹೆಣದ ಮೇಲಿನ ಬಟ್ಟೆ ಕದ್ದು, ಹೊಸ ಸ್ಟಿಕ್ಕರ್‌ ಅಂಟಿಸಿ ಮಾರಾಟ * ಕದ್ದ ಬಟ್ಟೆ ಒಗೆದು, ಇಸ್ತ್ರಿ ಮಾಡಿ ಗ್ವಾಲಿಯರ್‌ ಕಂಪನಿ ಲೇಬಲ್‌ ಅಂಟಿಸಿ ಮಾರಾಟ 

ಭಾಗ್ಪತ್‌(ಮೇ.11): ಕೊರೋನಾ ಸಾವು-ನೋವು ಹೆಚ್ಚಾಗುತ್ತಿರುವ ನಡುವೆಯೇ, ಚಿತಾಗಾರಗಳಲ್ಲಿ ಹೆಣಗಳ ಮೇಲಿನ ಬಟ್ಟೆಮತ್ತಿತರೆ ವಸ್ತುಗಳಣ್ನು ಕದಿಯುತ್ತಿದ್ದ 7 ಜನರನ್ನು ಉತ್ತರಪ್ರದೇಶದ ಭಾಗ್ಪತ್‌ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಹೆಣಗಳ ಮೇಲೆ ಹೊದಿಸುವ ಬಟ್ಟೆ, ಸೀರೆ ಮತ್ತಿತರ ವಸ್ತುಗಳನ್ನು ಕದಿಯುತ್ತಿದ್ದರು. ಮತ್ತು ಅವುಗಳನ್ನು ಒಗೆದು, ಇಸ್ತಿ್ರ ಮಾಡಿ ಗ್ವಾಲಿಯರ್‌ ಕಂಪನಿ ಲೇಬಲ್‌ ಅಂಟಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಕದ್ದ 520 ಬೆಡ್‌ಶೀಟ್‌ಗಳು, 127 ಕುರ್ತಾ, 52 ಬಿಳಿ ಸೀರೆ ಮತ್ತಿತರ ಬಟ್ಟೆವಶಪಡಿಸಿಕೊಳ್ಳಲಾಗಿದೆ.

ಇಲ್ಲಿನ ಕೆಲವು ಬಟ್ಟೆ ವ್ಯಾಪಾರಿಗಳು ಇವರಿಗೆ ದಿನಕ್ಕೆ 300 ರು. ಕೊಟ್ಟು ಕದಿಯಲು ಹೇಳುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, 10 ವರ್ಷದಿಂದ ಇದೇ ರೀತಿಯ ಕಳ್ಳತನ ಮಾಡಿ ಜೀವಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ