ಮುಂಬೈ(ಮೇ.11): ಕೊರೋನಾ ಬಂದನಂತರ ನಮ್ಮ ಸುತ್ತ ಮುತ್ತ ಬಹಳಷ್ಟು ಮನ ಮಿಡಿಯುವ ಮಾನವೀಯ ಘಟನೆಗಳನ್ನು ನೋಡುತ್ತಲೇ ಇದ್ದೇವೆ. ಬದುಕುವ ಸಾಧ್ಯತೆ ಇದ್ದರೂ ಬೆಡ್ ಬಿಟ್ಟುಕೊಡುವ ನಿಸ್ವಾರ್ಥ ಸೋಂಕಿತರಿಂದ ಹಿಡಿದು, ಸೋಂಕಿತರ ಮೃತದೇಹ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆಗಳನ್ನು ದಾನ ಮಾಡುವುದನ್ನೂ ನೋಡಿಯಾಯಿತು.
ಕೊರೋನಾವೈರಸ್ ವ್ಯಾಪಿಸಿದ ಹಾಗೆ ನಾವೆಲ್ಲರೂ ಒಂದೇ, ಬಡವ, ಶ್ರೀಮಂತ ಎಲ್ಲರಿಗೂ ಬದುಕಲು ಆಕ್ಸಿಜನ್ ಬೇಕೇ ಬೇಕು ಎನ್ನುವ ಸತ್ಯವಂತೂ ಬಹಳಷ್ಟು ಜನ ಅರ್ಥ ಮಾಡಿಕೊಂಡಾಗಿದೆ.
undefined
ದಂಪತಿ ಕೊರೋನಾ ಸೋಂಕಿತರ ಜೀವ ಉಳಿಸಲು ತಮ್ಮ ಆಕ್ಸಿಜನ್ ಸಿಲಿಂಡರ್ ನೀಡಿದ್ದು ಮಾತ್ರವಲ್ಲದೆ, ಹಿಂದೆ ಮುಂದೆ ಯೋಚಿಸದೆ ತಮ್ಮಲ್ಲಿದ್ದ ಅಷ್ಟೂ ಒಡವೆಯನ್ನು ಆಕ್ಸಿಜನ್ ಸಿಲಿಂಡರ್ ಖರೀದಿಸುವುದಕ್ಕಾಗಿ ನೀಡಿದ್ದಾರೆ. ಈ ಮೂಲಕ 8 ಜನ ಸೋಂಕಿತರ ಜೀವ ಉಳಿಸಿದ್ದಾರೆ.
ಟಿಫಿನ್ ಬಾಕ್ಸ್‌ನಲ್ಲಿ ಚಿನ್ನದ ಬಳೆ: ಸೋಂಕಿತರಾಗಿದ್ದಾಗ ಊಟ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದು ಹೀಗೆ
ಡಯಾಲಿಸಿಸ್ ರೋಗಿಯಾದ ರೋಸಿ ಮತ್ತು ಅವಳ ಪತಿ ಪ್ಯಾಸ್ಕಲ್ ತಮ್ಮದೇ ಆದ ಆಕ್ಸಿಜನ್ ಸಿಲಿಂಡರ್ ಅನ್ನು ಬಿಟ್ಟುಕೊಟ್ಟಿದ್ದಲ್ಲದೆ, ಅವರ ಆಭರಣಗಳನ್ನು ಮಾರಾಟ ಮಾಡಿದ ನಂತರ ಹೆಚ್ಚಿನ ಸಿಲಿಂಡರ್ ಖರೀದಿಸಿ ಇತರ ಎಂಟು ಜನರ ಪ್ರಾಣವನ್ನು ಉಳಿಸಿದ್ದಾರೆ. ನಿಧಿಯನ್ನು ಸಂಗ್ರಹಿಸಲು ಸಹಾಯ ಮಾಡಲು ಕೆಟ್ಟೊ ಅವರನ್ನು ಸಂಪರ್ಕಿಸಿದರು. ಕೆಲವೇ ದಿನಗಳಲ್ಲಿ ಕೆಟ್ಟೊ 31.3 ಲಕ್ಷ ರೂಪಾಯಿ ಸಂಗ್ರಹಿಸಿತು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಚಿಕಿತ್ಸೆಗೆ ಒಳಪಟ್ಟ ನಂತರ ತಮ್ಮದೆಲ್ಲವನ್ನೂ ಕಳೆದುಕೊಂಡ ಜನರಿಗೆ ಸಹಾಯ ಮಾಡುವ ಯೋಜನೆಯನ್ನು ಪ್ಯಾಸ್ಕಲ್ ಹೊಂದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಖರ್ಚು ಹೆಚ್ಚು. ಅಗತ್ಯವಿರುವವರಿಗೆ ನೀಡಲು 30 ಆಕ್ಸಿಜನ್ ಸಿಲಿಂಡರ್ ಮತ್ತು ಅದರ ಕಿಟ್‌ಗಳನ್ನು ಖರೀದಿಸಲು ಅವರು ಯೋಜಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona