ರಾಹುಲ್‌ಗೆ ಮತ್ತೆ 100 ಕೋಟಿ ತೆರಿಗೆ ಸಂಕಷ್ಟ!

By Web DeskFirst Published Nov 16, 2019, 9:01 AM IST
Highlights

ರಾಹುಲ್‌ಗೆ ಮತ್ತೆ 100 ಕೋಟಿ ತೆರಿಗೆ ಸಂಕಷ್ಟ| ರಾಹುಲ್‌ ಗಾಂಧಿ ಅರ್ಜಿ ತಳ್ಳಿ ಹಾಕಿದ ಆದಾಯ ತೆರಿಗೆ ನ್ಯಾಯಾಧೀಕರಣ

ನವದೆಹಲಿ[ನ.16]: ಯಂಗ್‌ ಇಂಡಿಯಾ ಸಂಸ್ಥೆಯನ್ನು ಚಾರಿಟೇಬಲ್‌ ಟ್ರಸ್ಟ್‌ ಎಂದು ಪರಿಗಣಿಸಬೇಕು ಎಂದು ಕೋರಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸಲ್ಲಿಸಿದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ ತಳ್ಳಿ ಹಾಕಿದೆ. ಇದರಿಂದಾಗಿ ರಾಹುಲ್‌ ಗಾಂಧಿ ವಿರುದ್ಧ 100 ಕೋಟಿ ತೆರಿಗೆ ವಂಚನೆ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.

2011-12ನೇ ಸಾಲಿನಲ್ಲಿ ರಾಹುಲ್‌ ಗಾಂಧಿ ತಮ್ಮ ಆದಾಯ 68 ಲಕ್ಷ ಎಂದು ಘೋಷಿಸಿಕೊಂಡಿದ್ದರು. ಆದರೆ ನ್ಯಾಶನಲ್‌ ಹೆರಾಲ್ಡ್‌ ಪ್ರಕರಣದ ತನಿಖೆ ನಡೆಸಿದ್ದ ಆದಾಯ ತೆರಿಗೆ ಇಲಾಖೆಯು, ಯಂಗ್‌ ಇಂಡಿಯಾ ಟ್ರಸ್ಟ್‌ನ ಆದಾಯವನ್ನು ರಾಹುಲ್‌ ತಮ್ಮ ಲೆಕ್ಕದಲ್ಲಿ ತೋರಿಸಿಲ್ಲ. ಈ ಸಂಬಂಧ ಅವರು 100 ಕೋಟಿ ರು. ತೆರಿಗೆ ಪಾವತಿಸಬೇಕು ಎಂದು ಸೂಚಿಸಿತ್ತು. ರಾಹುಲ್‌ ಇದನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ರಫೆಲ್ ತೀರ್ಪು: ತನಿಖೆಯ ವಿಸ್ತಾರವಾದ ಬಾಗಿಲು ತೆರೆದಿದೆ ಎಂದ ರಾಹುಲ್!

ಹೈಕೋರ್ಟ್‌ ಐಟಿ ವಾದ ಎತ್ತಿ ಹಿಡಿದಿತ್ತು. ಬಳಿಕ ಸುಪ್ರೀಂಕೋರ್ಟ್‌ ಕೂಡಾ ಇದೇ ರೀತಿಯ ಆದೇಶ ನೀಡಿತ್ತು. ಆದರೆ ರಾಹುಲ್‌ಗೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು.

ಆದರೆ ಇದೀಗ ಮೇಲ್ಮನವಿ ನ್ಯಾಯಾಧಿಕರಣ ಕೂಡಾ ರಾಹುಲ್‌ ವಾದವನ್ನು ವಜಾಗೊಳಿಸಿದ ಕಾರಣ, ರಾಹುಲ್‌ಗೆ ಮತ್ತೆ 100 ಕೋಟಿ ರು. ಸಂಕಷ್ಟ ಎದುರಾಗಿದೆ.

ಗರ್ವಿಷ್ಠ ರಾಹುಲ್ ಹಿಂದಿರುವ ಶಕ್ತಿ ಯಾರು?: ಬಿಜೆಪಿ ಪ್ರಶ್ನೆ!

click me!