
ಪುಣೆ(ಜೂ.12): ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 1,125 ಕೋಟಿ ರೂಪಾಯಿ ದೇಣಿಗೆ ನೀಡಿದ್ದ ವಿಪ್ರೋ ಕಂಪನಿ ಇದೀಗ ಕೊರೋನಾ ಸೋಂಕಿತರಿಗಾಗಿಯೇ ಆಸ್ಪತ್ರೆ ತೆರೆದಿದೆ. ಇದು ದೇಶದ ಮೊದಲ ಕೊರೋನಾ ಸೋಂಕಿತರ ಚಿಕಿತ್ಸೆ ಆಸ್ಪತ್ರೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಆಸ್ಪತ್ರೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಉದ್ಘಾಟನೆ ಮಾಡಿದ್ದಾರೆ.
ಕೊರೋನಾ ಸಮರಕ್ಕೆ ಪ್ರೇಮ್‌ಜಿ ಕಂಪನಿಗಳಿಂದ 1,125 ಕೋಟಿ ಮೀಸಲು!
504 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆಯನ್ನು ಪುಣೆಯ ಹಿಂಜೆವಾಡಿ ಆಸ್ಪತ್ರೆಯಲ್ಲಿ ಕಟ್ಟಲಾಗಿದೆ. ಸದ್ಯ 18 ವೆಂಟಿಲೇಟರ್, ಇಂಟೆನ್ಸೀವ್ ಕೇರ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ. ಇದರ ಜೊತೆಗೆ ವಿಪ್ರೋ ಎರಡು ಆಧುನಿಕ ಹಾಗೂ ಅಗತ್ಯ ಸೌಲಭ್ಯಗಳಿರುವ ಆ್ಯಂಬುಲೆನ್ಸ್ ನೀಡಿದೆ.
ಕಳೆದ ಒಂದೂವರೆ ತಿಂಗಳಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿರುವ ವಿಪ್ರೋ, ಅತ್ಯುತ್ತಮ ಗುಣಟ್ಟದ ಸಲಕರಣಗಳನ್ನು ಬಳಸಿದೆ. ಈ ಮೂಲಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ವಿಪ್ರೋ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಉದ್ದವ್ ಠಾಕ್ರೆ ಹೇಳಿದ್ದಾರೆ.
ವಲಸೆ ಕಾರ್ಮಿಕರು, ಬಡವರಿಗೆ ಪ್ರತಿ ತಿಂಗಳು 7 ಸಾವಿರ ರೂ ನೀಡಿ; ಕೇಂದ್ರಕ್ಕೆ ಅಜೀಂ ಪ್ರೇಮ್‌ಜಿ ಮನವಿ!..
ಬೆಂಗಳೂರು ಮೂಲದ ವಿಪ್ರೋ ಕಂಪನಿ ವಿಪ್ರೋ ಮೇ ತಿಂಗಳಲ್ಲಿ ಮಹಾಾಷ್ಟ್ರ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿತು. ಈ ಮೂಲಕ ಗುಣಟ್ಟದ ಆಸ್ಪತ್ರೆ ಕಟ್ಟಲು ಮುಂದಾಗಿತ್ತು. ಅಷ್ಟೇ ವೇಗದಲ್ಲಿ ಆಸ್ಪತ್ರೆ ಕಟ್ಟಿಸಿ, ಎಲ್ಲಾ ಸೌಕರ್ಯಗಳನ್ನು ಒದಗಿಸಿ, ಮಹಾರಾಷ್ಟ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ