ಇಸ್ರೋ ಪ್ರಥಮ ರಾಕೆಟ್‌ ಉಡಾವಣೆಗೆ 60 ವರ್ಷ: ಸಂಭ್ರಮಾಚರಣೆಗೆ ಚಾಲನೆ

Published : Nov 26, 2023, 07:38 AM IST
ಇಸ್ರೋ ಪ್ರಥಮ ರಾಕೆಟ್‌ ಉಡಾವಣೆಗೆ 60 ವರ್ಷ: ಸಂಭ್ರಮಾಚರಣೆಗೆ ಚಾಲನೆ

ಸಾರಾಂಶ

ಇಸ್ರೋದಿಂದ ಮೊದಲ ರಾಕೆಟ್‌ ಉಡಾವಣೆಯಾಗಿ 60 ವರ್ಷ ತುಂಬುತ್ತಿದ್ದು, ಈ ನಿಮಿತ್ತ ಸಂಭ್ರಮಾಚರಣೆಗೆ ಶನಿವಾರ ಕೇಂದ್ರ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಚಾಲನೆ ನೀಡಿದರು.

ತಿರುವನಂತಪುರಂ: ಇಸ್ರೋದಿಂದ ಮೊದಲ ರಾಕೆಟ್‌ ಉಡಾವಣೆಯಾಗಿ 60 ವರ್ಷ ತುಂಬುತ್ತಿದ್ದು, ಈ ನಿಮಿತ್ತ ಸಂಭ್ರಮಾಚರಣೆಗೆ ಶನಿವಾರ ಕೇಂದ್ರ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಚಾಲನೆ ನೀಡಿದರು. 1963ರಲ್ಲಿ ಭಾರತ ಮೊದಲ ರಾಕೆಟ್ ಹಾರಿಸಿತ್ತು. ಈ ನಿಮಿತ್ತ ಈಗ 60ನೇ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದ ಸಿಂಗ್‌, 60ನೇ ವರ್ಷಾಚರಣೆ ವೇಳೆಯೇ ಚಂದ್ರಯಾನ-2 ಯಶಸ್ವಿಯಾಗಿರುವುದು ವಿಶೇಷ. ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವು ಭಾರತದ ಬಾಹ್ಯಾಕಾಶ ಯಾನದ ಆಕಾಂಕ್ಷೆಗಳನ್ನು ನಿಜ ಮಾಡಿ ತೋರಿಸಿರುವುದು ಹೆಮ್ಮೆಯ ವಿಚಾರ ಎಂದರು.

ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್‌ ಮಾತನಾಡಿ, ವಿದೇಶಗಳಲ್ಲಿ ಚಂದ್ರಯಾನ-2 ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಇಸ್ರೋ ಸಂಸ್ಥೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ ಎಂದರು.  ಸಂಭ್ರಮಾಚರಣೆ ನಿಮಿತ್ತ ಆರ್‌ಹೆಚ್‌-200 ರಾಕೆಟ್‌ ಉಡಾವಣೆ, ಬಾಹ್ಯಾಕಾಶ ತಂತ್ರಜ್ಞಾನ ಪ್ರದರ್ಶನ, ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ವಿಜ್ಞಾನಿಗಳಿಂದ ಉಪನ್ಯಾಸ ಏರ್ಪಡಿಸಲಾಗಿತ್ತು.
 

 

Chandrayan 4: ಚಂದ್ರನ ನೆಲದಿಂದ ಮಣ್ಣನ್ನು ಭೂಮಿಗೆ ವಾಪಾಸ್‌ ತರಲಿದೆ ಇಸ್ರೋ!

Tumakur : ಇಸ್ರೋ ಉತ್ಪಾದನಾ ಘಟಕ ಕಾರ್ಯಾರಂಭ ಶೀಘ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು