ISRO Technology: ಬರಲಿದೆ ತನ್ನನ್ನು ತಾನೇ ಭಕ್ಷಿಸೋ ರಾಕೆಟ್!

By Suvarna News  |  First Published Nov 24, 2021, 4:22 PM IST

ಹಾಲಿವುಡ್ ಸಿನಿಮಾಗಳಲ್ಲಿ ತೋರಿಸುವಂತಹ ಬಾಹ್ಯಾಕಾಶ ತಂತ್ರಜ್ಞಾನವನ್ನು ಇಸ್ರೋ ಅಭಿವೃದ್ಧಿಪಡಿಸುತ್ತಿದೆ. ಸ್ವನಾಶಪಡಿಕೊಳ್ಳೋ ರಾಕೆಟ್, ಉಪಗ್ರಹಗಳು ಭವಿಷ್ಯದಲ್ಲಿ ನಿರ್ಮಾಣಗೊಳ್ಳಲಿವೆ.


ಬೆಂಗಳೂರು(ನ.24): ಅಂತರಿಕ್ಷ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿರೋ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (IISRO) ಈಗ ಅಂತರತಾರಾ ಯಾನಕ್ಕ(Interstellar) ಸಂಬಂಧಿಸಿ ವಿನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಹಾಲಿವುಡ್ (Hollywood)) ಸೈನ್ಸ್ ಫಿಕ್ಸನ್ (Scii-fi) ಫಿಲ್ಮ್ಗಳಲ್ಲಿ ತೋರಿಸೋ ಅಸಾಧ್ಯವೆನಿಸೋ ತಂತ್ರಜ್ಞಾನಗಳನ್ನು ಇಸ್ರೋ ನಿಜವಾಗಿಸಲು ಹೊರಟಿದೆ. ತನ್ನನ್ನೇ ತಾನು ತಿನ್ನೋ ರಾಕೆಟ್ (Rocket) ಹಾಗೂ ತನ್ನನ್ನೇ ತಾನು ಸುಟ್ಟುಕೊಂಡು ನಾಶವಾಗೋ ಉಪಗ್ರಹ (Satellite))… ಹಾಲಿವುಡ್ ಸಿನಿಮಾಗಳಲ್ಲಷ್ಟೇ ಕಂಡಿರೋ ಇಂಥ ದೃಶ್ಯಗಳನ್ನು ನಿಜವಾಗಿಸಲು ಹೊರಟಿರೋ ಇಸ್ರೋ, ಇಂಥ 46 ಅಪ್ರತಿಮ ವಿನೂತನ ತಂತ್ರಜ್ಞಾನಗಳನ್ನು ತನ್ನ ಸಂಶೋಧನಾ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸುತ್ತಿದೆ. 

COP26 Summit| ಇಡೀ ವಿಶ್ವಕ್ಕೊಂದು ಪವರ್‌ಗ್ರಿಡ್‌: ‘ಕಾಪ್‌ 26’ ಶೃಂಗದಲ್ಲಿ ಮೋದಿ ಪರಿಕಲ್ಪನೆ!

Tap to resize

Latest Videos

undefined

‘ಈ ತನಕ ನಮ್ಮ ಎಲ್ಲ ರಾಕೆಟ್ಗಳು ಲೋಹದ ಹೊದಿಕೆ (metal casing)) ಹೊಂದಿದ್ದು, ಉಡಾವಣೆ (Launch)ಬಳಿಕ ಇವು ಸಮುದ್ರಕ್ಕೆ ಬೀಳುತ್ತಿದ್ದವು ಅಥವಾ ಕೊನೆಯ ಹಂತದಲ್ಲಿ ಬಾಹ್ಯಾಕಾಶದ ಅವಶೇಷಗಳಾಗುತ್ತಿದ್ದವು. ಆದ್ರೆ ನಾವೀಗ ಹೊಸ ತಂತ್ರಜ್ಞಾನವೊಂದನ್ನು ಎದುರು ನೋಡುತ್ತಿದ್ದೇವೆ. ಈ ತಂತ್ರಜ್ಞಾನದಲ್ಲಿ ರಾಕೆಟ್ಗಳು ತಮ್ಮನ್ನೇ ತಾವು ಭಕ್ಷಿಸಲಿವೆ. ಇದ್ರಿಂದ ತ್ಯಾಜ್ಯಗಳು ಸಮುದ್ರಕ್ಕೆ ಬೀಳೋದು ಅಥವಾ ಬಾಹ್ಯಾಕಾಶ ಅವಶೇಷಗಳಾಗೋದು ತಪ್ಪುತ್ತದೆ. ಹೀಗಾಗಿ ಮೋಟರ್ಗಳೊಂದಿಗೆ ಉರಿದುಹೋಗೋ ವಿಶೇಷ ಸಾಮಗ್ರಿಗಳಿಂದ ರಾಕೆಟ್ನ ಹೊದಿಕೆ ಸಿದ್ಧಪಡಿಸಲು ಸಂಶೋಧನೆ ನಡೆಸುತ್ತಿದ್ದೇವೆʼ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ಹೇಳಿದ್ದಾರೆ.ಇದೇ ಮಾದರಿಯಲ್ಲಿ ತನ್ನನ್ನೇ ತಾನು ನಾಶಪಡಿಸಿಕೊಳ್ಳೋ ಉಪಗ್ರಹ ತಂತ್ರಜ್ಞಾನವನ್ನು ಕೂಡ ಅಭಿವೃದ್ಧಿಪಡಿಸಲಾಗೋದು. ಒಮ್ಮೆಗೆ ಉಪಗ್ರಹದ ಜೀವಿತಾವಧಿ ಮುಗಿದ ತಕ್ಷಣ ʼಕಿಲ್ ಬಟನ್ (Kill button) ಮೂಲಕ ಕಕ್ಷೆಯಲ್ಲಿ ಉಪಗ್ರಹ ಉರಿದು ನಾಶವಾಗುವಂತಹ ತಂತ್ರಜ್ಞಾನವನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿರೋ ಬಗ್ಗೆ ಶಿವನ್ ಮಾಹಿತಿ ನೀಡಿದ್ದಾರೆ. ರಾಕೆಟ್ಗಳನ್ನು ಉಡಾವಣೆ ಮಾಡಿದಾಗ ಕೆಲವೊಮ್ಮೆ ಅದ್ರಲ್ಲಿ ಕೆಲವು ಅಡಚಣೆಗಳಿರುತ್ತವೆ. ಇದನ್ನು ಸ್ವ-ದುರಸ್ತಿ ಸಾಮಗ್ರಿಗಳನ್ನು ಬಳಸಿ ಸರಿಪಡಿಸಬಹುದಾಗಿದೆ. ಇದೇ ಮಾದರಿಯಲ್ಲಿ ರಾಕೆಟ್ಗಳನ್ನು ತ್ಯಾಜ್ಯಗಳಿರದಂತೆ ನಾಶಪಡಿಸೋ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗೋದು ಎಂಬ ಮಾಹಿತಿಯನ್ನು ಶಿವನ್ ನೀಡಿದ್ದಾರೆ.  ಮೇಕ್ ಇನ್ ಸ್ಪೇಸ್ ಪರಿಕಲ್ಪನೆಯಲ್ಲಿ ಕ್ವಾಟಂ ಸಂವಹನ ಹಾಗೂ ಸುಧಾರಿತ ರಾಡಾರ್ ಮುಂತಾದ ಇತರ ತಂತ್ರಜ್ಞಾನಗಳನ್ನು ಕೂಡ ಇಸ್ರೋ ಅಭಿವೃದ್ಧಿಪಡಿಸುತ್ತಿದೆ. ಖಾಸಗಿ ಸಂಸ್ಥೆಗಳು ಕೂಡ ದಿನನಿತ್ಯದ ಉಡಾವಣೆ ಕಾರ್ಯಗಳನ್ನು ನಿರ್ವಹಿಸೋ ರೀತಿಯಲ್ಲಿ ಭಾರತವನ್ನುಭವಿಷ್ಯಕ್ಕೆ ಸಜ್ಜುಗೊಳಿಸಲು ಇಸ್ರೋ ಯೋಜನೆ ರೂಪಿಸುತ್ತಿದೆ.

ತನ್ನ ಕಕ್ಷೆಯಲ್ಲಿ 7 ವರ್ಷ ಪೂರೈಸಿದ ಮಾರ್ಸ್ ಸ್ಪೇಸ್‌ಕ್ರಾಫ್ಟ್!

ಚಂದ್ರಯಾನ-ನಾಸಾ ಅರ್ಬಿಟರ್ ಡಿಕ್ಕಿ ತಪ್ಪಿತ್ತು
ಚಂದ್ರಯಾನ- 2 ಆರ್ಬಿಟರ್ ಮತ್ತು ನಾಸಾದ ಚಂದ್ರ ಸ್ಥಳಾನ್ವೇಷಣಾ ಆರ್ಬಿಟರ್ಗಳ  ಕಕ್ಷೆ ಸೇರುವ ಸ್ಥಳದಲ್ಲಿ 2 ಉಪಗ್ರಹಗಳು ಕಳೆದ ತಿಂಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಆದರೆ ಈ ವಿಷಯ ಇಸ್ರೋಗೆ ಮೊದಲೇ ತಿಳಿದ ಕಾರಣ ಚಂದ್ರಯಾನ ಆರ್ಬಿಟರ್ನ ಕಕ್ಷೆಯನ್ನು ಸ್ವಲ್ಪ ಬದಲಿಸುವ ಮೂಲಕ ಸಂಭವನೀಯ ಅನಾಹುತವನ್ನು ತಪ್ಪಿಸಿತ್ತು. ಒಂದು ವೇಳೆ ಎರಡು ಉಪಗ್ರಹಗಳ ನಡುವೆ ಢಿಕ್ಕಿ ಸಂಭವಿಸಿದ್ದರೆ ಎರಡೂ ದೇಶಗಳ ಮಿಶನ್ ಚಂದ್ರಯಾನ ಯೋಜನೆ ವಿಫಲವಾಗುತ್ತಿತ್ತು. ಆದರೆ ಪಥ ಬದಲಿಸಿರುವ ಕಾರಣ ಇನ್ನು 2 ಆರ್ಬಿಟರ್ಗಳು ಸಮೀಪಕ್ಕೆ ಬರುವ ಭೀತಿ ಇಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ. 
ಎರಡು ಬಾಹ್ಯಾಕಾಶ ನೌಕೆಗಳ ನಡುವಿನ ಡಿಕ್ಕಿ ತಪ್ಪಿಸಲು ಅಕ್ಟೋಬರ್ 18 ರಂದು ರೇಡಿಯಲ್ ಬೇರ್ಪಡಿಕೆ ಸಾಧನನ್ನು ವಿನ್ಯಾಸಗೊಳಿಸಲಾಗಿತ್ತು. ಚಂದ್ರಯಾನ-2 ಅದೇ ದಿನ ರಾತ್ರಿ 8:22 IST ಇದನ್ನು ಕಾರ್ಯಗತಗೊಳಿಸಿತು, ಅದರ ನಂತರ ಇಂಜಿನಿಯರ್ಗಳು ಆರ್ಬಿಟರ್ನ ನಂತರದ ಟ್ರ್ಯಾಕಿಂಗ್ ಅನ್ನು ನಡೆಸಿದರು, ಹೊಸ ಕಕ್ಷೆಯೊಂದಿಗೆ ಮುಂದಿನ ದಿನಗಳಲ್ಲಿ LRO ನೊಂದಿಗೆ ಯಾವುದೇ ನಿಕಟ ಸಂಪರ್ಕಗಳು ಇರುವುದಿಲ್ಲ ಎಂದು ಮರುದೃಢೀಕರಿಸಿದರು. ಚಂದ್ರಯಾನ-2 ಮತ್ತು ನಾಸಾದ ಚಂದ್ರನ ಆರ್ಬಿಟರ್ ಎರಡೂ ಧ್ರುವೀಯ ಕಕ್ಷೆಯಲ್ಲಿ ಚಂದ್ರನ ಸುತ್ತಲೂ ಹೋಗುತ್ತವೆ ಆದ್ದರಿಂದ, ಎರಡೂ ಬಾಹ್ಯಾಕಾಶ ನೌಕೆಗಳು ಚಂದ್ರನ ಧ್ರುವಗಳ ಮೇಲೆ ಪರಸ್ಪರ ಹತ್ತಿರ ಬರುತ್ತವೆ.
 


 

click me!