ಮೂರು ಕೃಷಿ ಮಸೂದೆಗಳನ್ನು ಸರ್ಕಾರ ಹಿಂಪಡೆಯಲು ಮುಂದಾಗಿರುವ ಬೆನ್ನೆಲ್ಲೇ ಒಂದೆಡೆ ಸಂಭ್ರಮ ಹಾಗೂ ಮತ್ತೊಂದೆಡೆ ಆಕ್ರೋಶವೂ ಕೇಳಿ ಬರುತ್ತಿದೆ. ಕಳೆದ ಒಂದು ವರ್ಷದಿಂದ ರಾಷ್ಟ್ರ ರಾಜಧಾನಿಯಲ್ಲಿ ಮಸೂದೆ ಹಿಂಪಡೆಯಲು ಕೆಲ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ನಡುವೆ ಪ್ರಧಾನಿ ಮಸೂದೆಗಳನ್ನು ವಾಪಸ್ ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ.
ಒಳ್ಳೆಯ ಸಾರ್ವಜನಿಕ ಕಾಯಿದೆಗಳಿಗೆ ಶಾರ್ಟ್‌ಕಟ್ ಎಂಬುದಿಲ್ಲ. ಇದಕ್ಕೆ ಸರ್ಕಾರವೇ ಕಾನೂನು ರೂಪಿಸುವ ಮೊದಲು ಆ ಕಾನೂನಿನ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕಾಗಿದೆ ಎಂದು ಘನ್ವಂತ್ ಹೇಳಿದ್ದಾರೆ. ಘನ್ವಂತ್ ಮಹಾರಾಷ್ಟ್ರ ಮೂಲದ ರೈತ ಸಂಘಟನೆಯ ನಾಯಕರಾಗಿದ್ದಾರೆ. ಇತ್ತ ಮತ್ತೊಂದೆಡೆ ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯ ಕುರಿತಾಗಿ ಶಾಸನಬದ್ಧವಾದ ಖಾತರಿ(statutory guarantee) ಸೇರಿದಂತೆ ಹಲವು ವಿಚಾರಗಳ ಬಗ್ಗೆಗಮನ ಸೆಳೆಯಲು ನವಂಬರ್ 29ರಂದು ರಾಷ್ಟ್ರ ರಾಜಧಾನಿ ದೆಹಲಿಗೆ 60 ಟ್ರ್ಯಾಕ್ಟರ್‌ಗಳೊಂದಿಗೆ ರಾಲಿ ತೆರಳುವುದಾಗಿ ಭಾರತೀಯ ಕಿಶಾನ್ ಯೂನಿಯನ್( Bharatiya Kisan Union (BKU) ಮುಖ್ಯಸ್ಥ ರಾಕೇಶ್ ಟಿಕಾಯತ್( Rakesh Tikait ) ಹೇಳಿದ್ದಾರೆ.
ನವಂಬರ್ 9ರಂದು 60 ಟ್ರ್ಯಾಕ್ಟರ್‌ಗಳು ಸಂಸತ್‌ನತ್ತ ರಾಲಿ ತೆರಳಲಿವೆ. ಟ್ರ್ಯಾಕ್ಟರ್‌ಗಳು ಸರ್ಕಾರ ತೆರವುಗೊಳಿಸಿದ ರಸ್ತೆಯಲ್ಲೇ ಈ ಸಮಾವೇಶ ಸಾಗಲಿದ್ದು, ನಾವೆಲ್ಲೂ ರಸ್ತೆಯನ್ನು ಬ್ಲಾಕ್ ಮಾಡಲು ಹೋಗುವುದಿಲ್ಲ. ರಸ್ತೆಗಳನ್ನು ಬಂದ್ ಮಾಡುವುದು ನಮ್ಮ ಉದ್ದೇಶವಲ್ಲ. ಸರ್ಕಾರದೊಂದಿಗೆ ಮಾತನಾಡುವುದು ನಮ್ಮ ಉದ್ದೇಶ. ಹೀಗಾಗಿ ನಾವು ಸೀದಾ ಸಂಸತ್‌ಗೆ ತೆರಳುತ್ತೇವೆ ಎಂದು ಮಾಧ್ಯಮಗಳಿಗೆ ಅವರು ಹೇಳಿಕೆ ನೀಡಿದ್ದಾರೆ. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ(Narendra Modi) ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಇದಾದ ಬಳಿಕ ಕೇಂದ್ರ ಸಚಿವ ಸಂಪುಟ ಈ ಮೂರು ಕಾನೂನುಗಳನ್ನು ರದ್ದುಗೊಳಿಸಲು ಅನುಮೋದನೆ ನೀಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ. ಕಳೆದ ಬಾರಿಯಂತೆ 200 ಜನ ಅಲ್ಲ, ಸಾವಿರ ಜನ ಸಂಸತ್‌ನತ್ತ ತೆರಳಲಿದ್ದೇವೆ ಎಂದು ಅವರು ಹೇಳಿದರು.
Parliament ಮೇಲೆ ಖಲಿಸ್ತಾನಿ ಧ್ವಜ ಹಾರಿಸಿದರೆ ₹93 ಲಕ್ಷ : ಪ್ರತ್ಯೇಕತಾವಾದಿ ಸಂಘಟನೆಯ ಆಫರ್!
ನಾವು ಕನಿಷ್ಠ ಬೆಂಬಲ ಬೆಲೆ ಬಗ್ಗೆ ಸರ್ಕಾರದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಬೆಂಬಲ ಬೆಲೆ ಇಲ್ಲದೇ ಕಳೆದೊಂದು ವರ್ಷದಲ್ಲಿ ಕನಿಷ್ಠ 750 ರೈತರು ಸಾವಿಗೀಡಾಗಿದ್ದಾರೆ. ಇದರ ಹೊಣೆಯನ್ನು ಸರ್ಕಾರ ಹೊರ ಬೇಕಾಗಿದೆ ಎಂದು ಹೇಳಿದರು. ನವಂಬರ್ 29ರಿಂದ ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಇದು ಡಿಸೆಂಬರ್ 23ರವರೆಗೆ ಮುಂದುವರೆಯುವ ಸಾಧ್ಯತೆ ಇದೆ.
ಈ ನಡುವೆ ಸಂಯುಕ್ತ ರೈತ ಮೋರ್ಚಾ, ಭಾಗಶಃ ವಿಜಯೋತ್ಸವಕ್ಕೆ ಸಜ್ಜಾಗಿದೆ. ಈ ಬಗ್ಗೆ ಅದು ಹೇಳಿಕೆ ನೀಡಿದೆ. ರಾಜ್ಯಗಳ ರಾಜಧಾನಿಗಳಲ್ಲೂ ಟ್ರ್ಯಾಕ್ಟರ್ ರಾಲಿ ಹಮ್ಮಿಕೊಳ್ಳಲಾಗುವುದು. ನವಂಬರ್26ರಂದು ಸಮಾವೇಶಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ದಿನ ದೇಶದ ವಿವಿಧೆಡೆಯಿಂದ ಸಾವಿರಾರು ರೈತರು ಈ ಸಮಾವೇಶಕ್ಕೆ ಬಂದು ಸೇರುವ ಸಾಧ್ಯತೆ ಇದೆ ಎಂದು ಸಂಯುಕ್ತ ಕಿಶಾನ್ ಮೋರ್ಚಾ ಹೇಳಿಕೆ ನೀಡಿದೆ. ನವಂಬರ್ 26ರಂದು ನಾವು ಭಾಗಶಃ ವಿಜಯೋತ್ಸವ ಆಚರಿಸುತ್ತೇವೆ. ಲಕ್ಷಕ್ಕೂ ಹೆಚ್ಚು ರೈತರ ನಿರಂತರ ಹಾಗೂ ಸುದೀರ್ಘವಾದ ಹೋರಾಟಕ್ಕೆ ವರ್ಷ ತುಂಬಿದ್ದು, ನವಂಬರ್ 26ರಂದು ಭಾಗಶಃ ವಿಜಯೋತ್ಸವ ಆಚರಿಸಲಾಗುವುದು ಹಾಗೂ ಉಳಿದ ಬೇಡಿಕೆಗಳಿಗೆ ಒತ್ತಾಯಿಸಲಾಗುವುದು ಎಂದು ಎಸ್‌ಕೆಎಂ ಹೇಳಿಕೆ ನೀಡಿದೆ.
ಹಾಗೆಯೇ ನವಂಬರ್ 26ರಂದು ಲಂಡನ್‌ನ ಭಾರತೀಯ ಹೈ ಕಮೀಷನ್ ಕಚೇರಿ(Inadian high commission office) ಎದುರು ಕೂಡ 12ರಿಂದ 2 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದೆ. ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ, ಕೆನಡಾದ ಸರೆ(Surrey)ಯಲ್ಲೂ ಪ್ರತಿಭಟನೆ ನಡೆಯಲಿದೆ. ಡಿಸೆಂಬರ್ 4ರಂದು ಕ್ಯಾಲಿಪೋರ್ನಿಯಾದಲ್ಲಿ ಕಾರು ರಾಲಿ ಇದೆ. ಹಾಗೆಯೇ ಅಮೆರಿಕಾದ ನ್ಯೂಯಾರ್ಕ್‌ನಲ್ಲಿಯೂ ಸಮಾವೇಶವಿದೆ. ಅಲ್ಲಿನ ಸಾನ್ ಜೋಸ್ ಗುರುದ್ವಾರದಲ್ಲಿ ಮೇಣದ ಬತ್ತಿ ಉರಿಸಲಾಗುವುದು. ಡಿಸೆಂಬರ್5 ರಂದು ನೆದರ್ಲ್ಯಾಂಡ್ ಹಾಗೂ ವಿಯೆನ್ನಾ ಆಸ್ಟ್ರೀಯಾದಲ್ಲಿ ಡಿಸೆಂಬರ್ 8 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಾಷಿಂಗ್ಟನ್ ಹಾಗೂ ಟೆಕ್ಸಾಸ್‌ನಲ್ಲಿಯೂ ಕಾರ್ಯಕ್ರಮವಿದ್ದು, ಈ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಎಸ್‌ಕೆಎಂ ತಿಳಿಸಿದೆ.
ದೆಹಲಿಯ ಗಡಿಯಲ್ಲಿ ರೈತರ ಪ್ರತಿಭಟನೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 25 ರಂದು ಹೈದರಾಬಾದ್‌ನಲ್ಲಿ "ಮಹಾ ಧರಣ." ನಡೆಯುತ್ತಿದೆ ಹಲವು ಎಸ್‌ಕೆಎಂ ನಾಯಕರು ನಾಳೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವಾರು ಕಾರ್ಮಿಕ ಸಂಘಟನೆಗಳು ಮತ್ತು ಇತರ ಸಾಮೂಹಿಕ ಸಂಘಟನೆಗಳ ಮುಖಂಡರು ಸಹ ಮಹಾ ಧರಣಿಯಲ್ಲಿ ಭಾಗವಹಿಸಲಿದ್ದಾರೆ. ನಾಳೆ, ನವೆಂಬರ್ 24 ರಂದು ಸರ್ ಛೋಟು ರಾಮ್ ಅವರ ಜಯಂತಿಯನ್ನು ಕಿಸಾನ್ ಮಜ್ದೂರ್ ಸಂಘರ್ಷ್ ದಿವಸ್ ಎಂದು ಗುರುತಿಸಲಾಗುತ್ತದೆ. ಎಂದು ಎಸ್‌ಕೆಎಂ ಹೇಳಿದೆ.
Farm Laws Repeal: ಕೃಷಿ ಕಾಯ್ದೆ ಹಿಂಪಡೆದ ಬೆನ್ನಲ್ಲೇ ಆರ್ಟಿಕಲ್ 370 ಮರುಸ್ಥಾಪನೆಗೆ ಆಗ್ರಹ!
ನವೆಂಬರ್ 29 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದ ತನ್ನ ಕಾರ್ಯಸೂಚಿಯಲ್ಲಿ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಮಸೂದೆಯನ್ನು ಸರ್ಕಾರವು ಪಟ್ಟಿ ಮಾಡಿದೆ. ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಧಾನ ಮಂತ್ರಿ ಗುರುಪುರಬ್‌ನಲ್ಲಿ ಇತ್ತೀಚೆಗೆ ಘೋಷಿಸಿದ್ದರು. ಕೃಷಿ ಕಾನೂನುಗಳ ರದ್ದತಿ ಮಸೂದೆ, 2021 ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನೆ ಮತ್ತು ಅನುಕೂಲ) ಕಾಯಿದೆ, 2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ, ಕೃಷಿ ಸೇವೆಗಳ ಕಾಯಿದೆ, 2020 ಮತ್ತು ಅಗತ್ಯ ಸರಕುಗಳ ಕಾಯ್ದೆಯನ್ನು ಸರ್ಕಾರ ರದ್ದುಗೊಳಿಸಲು ಮುಂದಾಗಿದೆ.
ಮೂರು ಮಸೂದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಕೃಷಿ ಕಾನೂನುಗಳ ರದ್ದತಿ ಮಸೂದೆ, 2021 ಅನ್ನು ಪರಿಚಯ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ. ಇದು ಸರ್ಕಾರದ ಕಾರ್ಯಸೂಚಿಯಲ್ಲಿನ 26 ಹೊಸ ಮಸೂದೆಗಳಲ್ಲಿ ಒಂದಾಗಿದೆ.