Aiyar comments:ಅಮೆರಿಕದ ಗುಲಾಮನಂತೆ ವರ್ತಿಸುತ್ತಿರೋ ಭಾರತ: ಮಣಿಶಂಕರ್ ಐಯ್ಯರ್ ಆರೋಪ

Suvarna News   | Asianet News
Published : Nov 24, 2021, 12:54 PM ISTUpdated : Nov 24, 2021, 01:18 PM IST
Aiyar comments:ಅಮೆರಿಕದ ಗುಲಾಮನಂತೆ ವರ್ತಿಸುತ್ತಿರೋ ಭಾರತ: ಮಣಿಶಂಕರ್ ಐಯ್ಯರ್ ಆರೋಪ

ಸಾರಾಂಶ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿಗೆ ಕೆಲವೇ ದಿನಗಳು ಬಾಕಿಯಿರೋ ಹಿನ್ನೆಲೆಯಲ್ಲಿ ಭಾರತ-ಅಮೆರಿಕ ಸಂಬಂಧ ಕುರಿತ ಕಾಂಗ್ರೆಸ್ ನಾಯಕ ಮಣಿಶಂಕ ಐಯ್ಯರ್ ಹೇಳಿಕೆ ಗಮನ ಸೆಳೆದಿದೆ. 

ನವದೆಹಲಿ (ನ.24): ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರೋ ಕಾಂಗ್ರೆಸ್ (Congress) ನಾಯಕ ಮಣಿಶಂಕರ್ ಐಯ್ಯರ್ (Manishankar Aiyar) ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾತಿನ ದಾಳಿ ಮುಂದುವರಿಸಿದ್ದಾರೆ. 2014ರಿಂದ ಭಾರತ ಅಮೆರಿಕದ (USA) ಗುಲಾಮನಂತೆ (Slave) ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮಂಗಳವಾರ ಭಾರತ-ರಷ್ಯಾ ಸ್ನೇಹ ಸಂಘದ (IIndo-Russia friendship society )ಕಾರ್ಯಕ್ರಮದಲ್ಲಿ ಪಾಲ್ಗೊಂಡ ಐಯ್ಯರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ʼಕಳೆದ 7 ವರ್ಷಗಳಿಂದ ಅಲಿಪ್ತ ನೀತಿ ಹಾಗೂ ಶಾಂತಿಗೆ ಸಂಬಂಧಿಸಿ ಯಾವುದೇ ಮಾತುಕತೆ ನಡೆದಿಲ್ಲ.ನಾವು ಚೀನಾದಿಂದ ರಕ್ಷಣೆ ಒದಗಿಸುವಂತೆ ಬೇಡುತ್ತ ಅಮೆರಿಕದ ಗುಲಾಮರಂತೆ ವರ್ತಿಸುತ್ತಿದ್ದೇವೆʼ ಎಂದು ಆರೋಪಿಸಿದರು. 2014ರ ಬಳಿಕ ರಷ್ಯಾದೊಂದಿಗಿನ ಭಾರತದ ಸಂಬಂಧಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಪ್ರಸಕ್ತ ಸರ್ಕಾರ ಕೈಗೊಳ್ಳುತ್ತಿರೋ ಯಾವುದೇ ನೀತಿಗಳನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿಲ್ಲ ಎಂದರು.ರಷ್ಯಾದೊಂದಿಗಿನ ಭಾರತದ ಸಂಬಂಧವನ್ನು ಗಟ್ಟಿಗೊಳಿಸುವಂತೆ ಐಯ್ಯರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putini) ಭಾರತ ಭೇಟಿಗೆ ಕೆಲವೇ ದಿನಗಳು ಬಾಕಿಯಿರೋ ಹಿನ್ನೆಲೆಯಲ್ಲಿ ಐಯ್ಯರ್ ಹೇಳಿಕೆ ಗಮನ ಸೆಳೆದಿದೆ. 

AAP Mission Punjab: ಆಟೋ ಚಾಲಕನ ಮನೆಗೆ ತೆರಳಿ ಭೋಜನ ಸವಿದ ಕೇಜ್ರಿವಾಲ್‌

ರಷ್ಯಾದ ಹೆಣ್ಣುಮಕ್ಕಳಿಗೆ ಇಂದಿರಾ ಹೆಸರು
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಭಾರತ ಹಾಗೂ ರಷ್ಯಾ ಉತ್ತಮ ಬಾಂಧವ್ಯ ಹೊಂದಿದ್ದವು. ʼಇಂದಿರಾʼ ಎಂಬ ಹೆಸರು ಕೂಡ ರಷ್ಯಾದಲ್ಲಿ ಜನಪ್ರಿಯವಾಗಿತ್ತು.ಅಲ್ಲಿನ ಅನೇಕ ಹೆಣ್ಣು ಮಕ್ಕಳಿಗೆ ʼಇಂದಿರಾʼ ಎಂದು ನಾಮಕರಣ ಕೂಡ ಮಾಡಲಾಗಿತ್ತು ಎಂದು ಐಯ್ಯರ್ ಹೇಳಿದರು. 
ಲಡಖ್ನಲ್ಲಿ ಪ್ರಸಕ್ತ ತಲೆದೋರಿರೋ ಬಿಕ್ಕಟ್ಟಿಗೆ ಸಂಬಂಧಿಸಿ ಭಾರತದ ಗಡಿಯನ್ನು ಆಕ್ರಮಿಸಿಕೊಳ್ಳಲು ಚೀನಾಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪವನ್ನು ಐಯ್ಯರ್ ಸಮರ್ಥಿಸಿಕೊಂಡಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಈಗಾಗಲೇ ಈ ಆರೋಪವನ್ನು ತಳ್ಳಿ ಹಾಕಿದೆ. ಅಲ್ಲದೆ, ಬಿಜೆಪಿಯ ಅನೇಕ ನಾಯಕರು ಈ ಆರೋಪಕ್ಕೆ ಈಗಾಗಲೇ ತಿರುಗೇಟು ನೀಡಿದ್ದಾರೆ ಕೂಡ. 

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೇರಿದ ಕಾಂಗ್ರೆಸ್ ನಾಯಕ ಕೀರ್ತಿ ಅಜಾದ್

5 ಸಾವಿರ ಕೋಟಿ ಒಪ್ಪಂದಕ್ಕೆ ಒಪ್ಪಿಗೆ
ಡಿಸೆಂಬರ್ 6ಕ್ಕೆ ಪುಟಿನ್ ಭಾರತ ಭೇಟಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಮೇಠಿಯಲ್ಲಿ 7.5 ಲಕ್ಷ AK-203 assault ರೈಫಲ್ಸ್ ಉತ್ಪಾದನೆಗೆ ರಷ್ಯಾದೊಂದಿಗೆ 5 ಸಾವಿರ ಕೋಟಿ ರೂ. ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಈಗಾಗಲೇ ಒಪ್ಪಿಗೆ ನೀಡಿದೆ. ರಷ್ಯಾ ನಿರ್ಮಿತ ಎರಡು S-400 ವಾಯು ರಕ್ಷಣಾ ವ್ಯವಸ್ಥೆ (Air Defence System) ಈಗಾಗಲೇ ಭಾರತಕ್ಕೆ ಬಂದಿದೆ. ಇವುಗಳನ್ನು 2022ರ ಪ್ರಾರಂಭದಲ್ಲಿ ಭಾರತದ ಉತ್ತರ ಹಾಗೂ ಪೂರ್ವ ಗಡಿಯಲ್ಲಿ ನಿಯೋಜಿಸಲಾಗೋದು. ಈ ವ್ಯವಸ್ಥೆ ಗಡಿಯೊಳಗೆ ಶತ್ರುರಾಷ್ಟ್ರಗಳ ಸೇನೆ ಅತಿಕ್ರಮಿಸೋದನ್ನು ಪತ್ತೆ ಹಚ್ಚಲು ಸೇನೆಗೆ ನೆರವು ನೀಡಲಿದೆ. ಲಡಖ್ನಲ್ಲಿ ಚೀನಾ ಸೇನೆ 2020ರ ಮೇನಲ್ಲಿ 1,597 ಕಿ.ಮೀ.ಅತಿಕ್ರಮ ಪ್ರವೇಶ ಮಾಡೋ ಮೂಲಕ ಭಾರತೀಯ ಸೇನೆಗೆ ಆಘಾತ ನೀಡಿತ್ತು. ವಾಯು ರಕ್ಷಣಾ ವ್ಯವಸ್ಥೆ ಅಳವಡಿಸೋದ್ರಿಂದ ಇಂಥ ಘಟನೆಗಳು ತಕ್ಷಣ ಸೇನೆಯ ಅರಿವಿಗೆ ಬರಲಿದೆ. ಭಾರತ ಕಳೆದ ವರ್ಷದಿಂದ ಲಡಖ್ನಲ್ಲಿ ಚೀನಾದೊಂದಿಗೆ ಗಡಿ ತಕರಾರು ಹೊಂದಿದೆ. 2020ರ ಜೂನ್ನಲ್ಲಿ ಎರಡೂ ರಾಷ್ಟ್ರಗಳ ಸೇನೆಗಳು ಸ್ಕಿರ್ಮಿಸ್ (skirmish)ಎಂಬ ಪ್ರದೇಶದಲ್ಲಿ ಜಮಾವಣೆಗೊಂಡಿದ್ದು,ಭಾರತೀಯ ಸೇನೆಯ 20 ಸೈನಿಕರು ಪ್ರಾಣ ತ್ಯಾಗ ಮಾಡಿದ್ದರು. ಎರಡೂ ರಾಷ್ಟ್ರಗಳ ಸೇನೆಗಳು  ಸಾಕಷ್ಟು ಹಾನಿ ಅನುಭವಿಸಿದ್ದವು. ಭಾರತದ ಗಡಿ ರಕ್ಷಣೆಗೆ ಸಂಬಂಧಿಸಿ ಆಧುನಿಕ ಪರಿಕರಗಳನ್ನು ಅಳವಡಿಸಿಕೊಳ್ಳೋ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷರ ಭೇಟಿ ಭಾರತಕ್ಕೆ ಮಹತ್ವದಾಗಿದೆ. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!