ಸೂರ್ಯ ನಮಸ್ಕಾರ, ಸರಸ್ವತಿ ಪೂಜೆ ಅನ್ಯಧರ್ಮಿಯರ ಮೇಲೆ ಹೇರುವುದು ಸಂವಿಧಾನ ವಿರೋಧಿ: ಜಮೀಯತ್‌

By Kannadaprabha NewsFirst Published Jul 7, 2024, 11:25 AM IST
Highlights

ಸೂರ್ಯ ನಮಸ್ಕಾರ, ಸರಸ್ವತಿ ಪೂಜೆಯಂಥ ಒಂದು ಧರ್ಮದ ಆಚರಣೆಗಳನ್ನು ಶಾಲೆಗಳಲ್ಲಿ ಬೇರೆ ಧರ್ಮೀಯರ ಮೇಲೆ ಹೇರುವುದು ಶಿಕ್ಷಣದ ಕೇಸರೀಕರಣ ಎಂದು ಕಿಡಿಕಾರಿರುವ ಪ್ರಭಾವಿ ಇಸ್ಲಾಮಿಕ್‌ ಸಂಘಟನೆ ಜಮೀಯತ್‌ ಉಲೇಮಾ ಇ ಹಿಂದ್‌ ಸಂಘಟನೆ, ಇಂಥ ಬೆಳವಣಿಗೆ ಸಂವಿಧಾನ ವಿರೋಧಿ ಎಂದು ಆರೋಪಿಸಿದೆ.

ನವದೆಹಲಿ: ಸೂರ್ಯ ನಮಸ್ಕಾರ, ಸರಸ್ವತಿ ಪೂಜೆಯಂಥ ಒಂದು ಧರ್ಮದ ಆಚರಣೆಗಳನ್ನು ಶಾಲೆಗಳಲ್ಲಿ ಬೇರೆ ಧರ್ಮೀಯರ ಮೇಲೆ ಹೇರುವುದು ಶಿಕ್ಷಣದ ಕೇಸರೀಕರಣ ಎಂದು ಕಿಡಿಕಾರಿರುವ ಪ್ರಭಾವಿ ಇಸ್ಲಾಮಿಕ್‌ ಸಂಘಟನೆ ಜಮೀಯತ್‌ ಉಲೇಮಾ ಇ ಹಿಂದ್‌ ಸಂಘಟನೆ, ಇಂಥ ಬೆಳವಣಿಗೆ ಸಂವಿಧಾನ ವಿರೋಧಿ ಎಂದು ಆರೋಪಿಸಿದೆ. ಇಲ್ಲಿ ನಡೆದ ಸಂಘಟನೆಯ 2 ದಿನಗಳ ಆಡಳಿತ ಮಂಡಳಿ ಸಭೆಯಲ್ಲಿ ಮುಸಲ್ಮಾನರ ವಿರುದ್ಧ ದ್ವೇಷದ ಘಟನೆಗಳು, ಸಮೂಹ ದಾಳಿ, ಮದರಸಾಗಳ ಮೇಲೆ ದಾಳಿ, ಏಕರೂಪ ನಾಗರಿಕ ಸಂಹಿತೆ, ಇಸ್ರೇಲ್‌-ಪಾಲೆಸ್ತೀನ್‌ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಶಿಕ್ಷಣದ ಕೇಸರಿಕರಣ, ಏಕರೂಪ ನಾಗರಿಕ ಸಂಹಿತೆ ಜಾರಿ ಮತ್ತು ಮದ್ರಸಾಗಳ ಮೇಲಿನ ದಾಳಿಯನ್ನು ಖಂಡಿಸಲಾಯಿತು. ಜೊತೆಗೆ ಶಾಲೆಗಳಲ್ಲಿ ಸೂರ್ಯ ನಮಸ್ಕಾರ, ಸರಸ್ವತಿ ಪೂಜೆ, ಹಿಂದೂ ಹಾಡುಗಳು, ಶ್ಲೋಕ, ಹಣೆಗೆ ತಿಲಕ ಇಡುವ ಸಂಪ್ರದಾಯಗಳನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕೆಂಬ ಸರ್ಕಾರದ ಆದೇಶಗಳು ಸಂವಿಧಾನ ವಿರೋಧಿ ಮತ್ತು ಶಿಕ್ಷಣದ ಕೇಸರೀಕರಣ ಎಂದು ಸಭೆ ವಿರೋಧ ವ್ಯಕ್ತಪಡಿಸಿತು.

Latest Videos

ಜ್ಞಾನವಾಪಿ ತೀರ್ಪುಗಳು ಕೋರ್ಟ್‌ನ ಮೇಲೆ ಜನರ ನಂಬಿಕೆ ಕಡಿಮೆ ಮಾಡಿದೆ: Muslim Personal Law Board

ನೂತನ ಕ್ರಿಮಿನಲ್‌ ಕಾಯ್ದೆ ರಚಿಸಿದ್ದು ಪಾರ್ಟ್‌ ಟೈಮರ್‌ಗಳು: ಚಿದಂಬರಂ

ನವದೆಹಲಿ: ‘ಕೇಂದ್ರ ಸರ್ಕಾರ ಇತ್ತೀಚೆಗೆ ದೇಶವ್ಯಾಪಿ ಜಾರಿಗೆ ತಂದ ನೂತನ ಕ್ರಿಮಿನಲ್‌ ಕಾಯ್ದೆಗಳನ್ನು ರಚಿಸಿದ್ದು ಪಾರ್ಟ್‌ ಟೈಮರ್‌ಗಳು (ಅರೆಕಾಲಿಕರ)’ ಎಂದು ಹಿರಿಯ ಕಾಂಗ್ರೆಸ್‌ ನಾಯಕ, ರಾಜ್ಯಸಭಾ ಸಂಸದ ಪಿ.ಚಿದಂಬರಂ ಕಿಡಿಕಾರಿದ್ದಾರೆ.  ಸಂದರ್ಶನವೊಂದರಲ್ಲಿ ನೂತನ ಕಾಯ್ದೆ ಬಗ್ಗೆ, ಅದರಲ್ಲಿನ ಅಡಕಗಳ ಬಗ್ಗೆ ಕಿಡಿಕಾರಿರುವ ಚಿದಂಬರಂ, ಇದನ್ನು ರೂಪಿಸಿದ್ದು ಪಾರ್ಟ್‌ ಟೈಮರ್‌ಗಳು ಎಂದು ಟೀಕಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯಸಭೆ ಸಭಾಧ್ಯಕ್ಷ ಮತ್ತು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ಸಂಸತ್ತಿನಲ್ಲಿ ಇರುವ ನಾವೆಲ್ಲರೂ ಪಾರ್ಟ್‌ ಟೈಮರ್‌ಗಳೇ? ಇದು ಸಂಸತ್ತಿನ ಜ್ಞಾನ ಸಂಪತ್ತಿಗೆ ಮಾಡಿದ ಕ್ಷಮಿಸಲಾಗದ ಅಪಮಾನ ಎಂದು ತಿರುಗೇಟು ನೀಡಿದ್ದಾರೆ.

ಭಾರತೀಯ ಮುಸ್ಲಿಮರನ್ನು ಯಾವತ್ತೂ ಗೌರವಿಸುತ್ತೇವೆ. ಆದರೆ, ಭಾರತದ ಮುಸ್ಲಿಮರನ್ನಲ್ಲ!

ಇಂದು ಬೆಳಗ್ಗೆ ಪತ್ರಿಕೆ ಓದಿದಾಗ ಈ ಹಿಂದೆ ದೇಶದ ಹಣಕಾಸು ಸಚಿವರಾಗಿದ್ದ, ಸುದೀರ್ಘ ಅವಧಿಗೆ ಸಂಸತ್‌ ಸದಸ್ಯರಾಗಿದ್ದ ಮತ್ತು ಹಾಲಿ ಸಂಸದರೂ ಆಗಿರುವ ವ್ಯಕ್ತಿಯೊಬ್ಬರು ನೀಡಿರುವ ಹೇಳಿಕೆ ನನಗೆ ಆಘಾತ ಮೂಡಿಸಿದೆ. ಈ ಸಂಸತ್‌ ಅತ್ಯದ್ಭುತ ಕೆಲಸಗಳನ್ನು ಮಾಡಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಹೊಸ ಕಾಯ್ದೆಯು ನಮಗೆ ವಸಾಹತುಶಾಹಿ ಕಾಲದ ಕಾಯ್ದೆಯಿಂದ ಮುಕ್ತಿ ನೀಡುವ ಜೊತೆಗೆ ನವಯುಗದ ದೃಷ್ಟಿಕೋನ ಒಳಗೊಂಡ ಕಾನೂನನ್ನು ನೀಡಿದೆ. ಸಂಸತ್ತಿನ ಪ್ರತಿಯೊಬ್ಬ ಸದಸ್ಯರಿಗೂ ಈ ಕಾಯ್ದೆ ರೂಪಿಸುವಲ್ಲಿ ಕೈಜೋಡಿಸುವ ಎಲ್ಲಾ ಅವಕಾಶಗಳಿತ್ತು. ಆದರೆ ಈ ಗೌರವಾನಿತ್ವ ಸಂಭಾವಿತ ವ್ಯಕ್ತಿ ಹೊಸ ಕಾನೂನುಗಳನ್ನು ಪಾರ್ಟ್‌ ಟೈಮರ್‌ಗಳು ರಚಿಸಿದ್ದಾರೆ ಎಂದಿದ್ದಾರೆ. ಇದು ಕ್ಷಮಿಸಲಾಗದ ಅಪಮಾನ ಎಂದು ಧನಕರ್ ಕಿಡಿಕಾರಿದ್ದಾರೆ.

ಓವೈಸಿ ಪಾಕಿಸ್ತಾನಕ್ಕೆ ಹೋದ್ರೆ ಭಾರತೀಯ ಮುಸ್ಲಿಂರಿಗೆ ನೆಮ್ಮದಿ; ಸೈಯದ್ ವಾಸೀಮ್ ತಿರುಗೇಟು!

click me!