ಐಸಿಸ್‌ ನಂಟು, ಬಂಧಿತನಿಗಿಲ್ಲ ಬೇಲ್‌ : ನ್ಯಾಯಾಂಗ ಬಂಧನ ವಿಸ್ತರಿಸಿದ ಹೈಕೋರ್ಟ್

By Anusha KbFirst Published Apr 18, 2022, 4:30 AM IST
Highlights
  • ಆರೋಪ ಗಂಭೀರ, ಆದ್ದರಿಂದ ಜಾಮೀನು ನೀಡಲಾಗದು
  • 180ಕೆ ದಿನ ನ್ಯಾಯಾಂಗ ಬಂಧನ ವಿಸ್ತರಣೆ
  • ಐಸಿಸ್‌ ನಂಟು ಹೊಂದಿದ್ದ ಜುಹಾಬ್‌ ಹಮೀದ್‌ ಸಲ್ಲಿಸಿದ್ದ ಅರ್ಜಿ
     

ನಿಷೇಧಿತ ಐಸಿಎಸ್‌ (ಇಸ್ಲಾಮಿಕ್‌ ಸ್ಟೇಟ್‌) ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವುದಲ್ಲದೇ ಸಂಘಟನೆಗೆ ಮುಸ್ಲಿಂ ಯುವಕರನ್ನು ಸೇರಿಸುವ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾದ ವ್ಯಕ್ತಿಗೆ ಜಾಮೀನು ನೀಡಲು ಹೈಕೋರ್ಚ್‌ ನಿರಾಕರಿಸಿದೆ. ಪ್ರಕರಣ ಸಂಬಂಧ ಜಾಮೀನು ಕೋರಿ ಜುಹಾಬ್‌ ಹಮೀದ್‌ ಶಕೀಲ್‌ ಮನ್ನಾ ಅಲಿಯಾಸ್‌ ಜೋಹಿಬ್‌ ಮನ್ನಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ (Naga Prasanna) ಅವರ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.

ಅಲ್ಲದೆ, ಕಾನೂನು ಬಾಹಿರ ಚಟುವಟಿಕೆಗಳ ತಡೆ (ಯುಎಪಿಎ) ಕಾಯ್ದೆಯ ಸೆಕ್ಷನ್‌ 43(ಡಿ) ಅಡಿಯಲ್ಲಿ ಆರೋಪಿಯ ನ್ಯಾಯಾಂಗ ಬಂಧನ (Judicial custody)ಅವಧಿಯನ್ನು 90 ದಿನಗಳಿಂದ 180 ದಿನಗಳಿಗೆ ವಿಸ್ತರಿಸಿದ ಎನ್‌ಐಎ ವಿಶೇಷ ನ್ಯಾಯಾಲಯದ (Special Court) ಆದೇಶವನ್ನೂ ಇದೇ ವೇಳೆ ಎತ್ತಿಹಿಡಿದಿದೆ.

ಪ್ರಕರಣದ ವಿವರ

ಬೆಂಗಳೂರಿನ ಜಯನಗರದ ತಿಲಕ್‌ ನಗರದ ನಿವಾಸಿ ಜುಹಾಬ್‌ ಹಮೀದ್‌ ಶಕೀಲ್‌ ಜೀವನೋಪಾಯಕ್ಕಾಗಿ ಕುಟುಂಬದೊಂದಿಗೆ ಸೌದಿ ಅರೇಬಿಯಾಗೆ ಹೋಗಿದ್ದರು. ಐಸಿಎಸ್‌ ಸಂಘಟನೆ ಜೊತೆ ನಂಟು ಹೊಂದಿದ್ದಲ್ಲದೇ ಅದಕ್ಕೆ ಮುಸ್ಲಿಂ ಯುವಕರನ್ನು (Muslim youth) ಸೇರಿಸುವ ಕೆಲಸದಲ್ಲಿ ಜುಹಾಬ್‌ ತೊಡಗಿಕೊಂಡಿದ್ದ. ಈ ಬಗ್ಗೆ ಮಾಹಿತಿ ತಿಳಿದ ಎನ್‌ಐಎ ಪೊಲೀಸರು (NIA Police) 2020ರ ಅ.5ರಂದು ಸೌದಿ ಅರೇಬಿಯಾದಲ್ಲಿ (Saudi Arabia) ಬಂಧಿಸಿದ್ದರು. 2021ರ ನ.11ರಂದು ಅತನನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಅಲ್ಲಿಂದ ಕರೆತಂದು ನಗರದ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿತ್ತು. ಆತನನ್ನು ವಿಶೇಷ ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದರಿಂದ ಜಾಮೀನು ಕೋರಿ ಹೈಕೋರ್ಟ್‌‌ಗೆ ಅರ್ಜಿ ಸಲ್ಲಿಸಿದ್ದ.

ISIS Chief Killed by US: ಐಸಿಸ್‌ ಬಾಸ್ ಖುರೇಶಿ ಕೊಲ್ಲಲು 2 ತಿಂಗಳಿಂದ ಅಮೆರಿಕ ಪ್ಲ್ಯಾನ್‌!

ಈ ಅರ್ಜಿ ತಿರಸ್ಕರಿಸಿದ ಹೈಕೋರ್ಚ್‌, ಆರೋಪಿ ಇರಾಕ್‌ (Iraq) ಮತ್ತು ಸಿರಿಯಾದ (Syria) ಐಸಿಎಸ್‌ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದು, ಮುಸ್ಲಿಂ ಯುವಕರನ್ನು ಪ್ರಚೋದನೆ ಮಾಡಿ ಐಸಿಎಸ್‌ಗೆ ಸೇರಿಸಿ ಅವರಿಂದ ಅಪರಾಧಿಕ ಪಿತೂರಿ ಮಾಡುತ್ತಿದ್ದ. ಸಂಘಟನೆಗೆ ಹಣ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದ ಎಂಬ ಗಂಭೀರ ಆರೋಪವಿದೆ. ಹಾಗಾಗಿ ಅಧೀನ ನ್ಯಾಯಾಲಯವು ಜಾಮೀನು ನಿರಾಕರಿಸಿರುವುದು ಸೂಕ್ತವಾಗಿದೆ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ವಿಚಾರಣೆ ವೇಳೆ ಆರೋಪಿಯು ಅಪರಾಧಿಕ ಪಿತೂರಿಯಲ್ಲಿ ತೊಡಗಿದ್ದಾನೆ ಎಂಬುದು ಕಂಡು ಬಂದರೆ, ಅಂತಹ ಸಂದರ್ಭದಲ್ಲಿ ತನಿಖಾಧಿಕಾರಿ ಅರ್ಜಿ ಸಲ್ಲಿಸಿ ಯುಪಿಎ ಕಾಯ್ದೆಯಡಿ ನ್ಯಾಯಾಂಗ ಬಂಧನ ಅವಧಿಯನ್ನು 90 ದಿನಗಳಿಂದ 180 ದಿನಗಳಿಗೆ ವಿಸ್ತರಿಸಲು ಅರ್ಜಿ ಸಲ್ಲಿಸಬಹುದು. ಅದರಂತೆ ಈ ಪ್ರಕರಣದಲ್ಲೂ ತನಿಖಾಧಿಕಾರಿ ಸಲ್ಲಿಸಿದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ (NIA Special Court) ಪುರಸ್ಕರಿಸಿದೆ. ಅದರಲ್ಲಿ ಯಾವುದೇ ಲೋಪವಾಗಿರದ ಕಾರಣ ಅಧೀನ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ತಿಳಿಸಿದ ಹೈಕೋರ್ಚ್‌, ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ISIS: ಅಮೆರಿಕಾದ ಮಾಸ್ಟರ್ ಪ್ಲ್ಯಾನ್, ವ್ಯವಸ್ಥಿತ ಕಾರ್ಯಾಚರಣೆ, ಐಸಿಸ್‌ ಬಾಸ್‌ ಹತ್ಯೆ

click me!