ಕರೆಂಟ್ ಕಂಬ ಏರಿದ ಮೇಕೆ :ವೀಡಿಯೋ ರಿಯಲ್ಲಾ ಫೇಕಾ ನೀವೇ ಹೇಳಿ

Published : Apr 09, 2025, 03:56 PM ISTUpdated : Apr 09, 2025, 05:04 PM IST
ಕರೆಂಟ್ ಕಂಬ ಏರಿದ ಮೇಕೆ :ವೀಡಿಯೋ ರಿಯಲ್ಲಾ ಫೇಕಾ ನೀವೇ ಹೇಳಿ

ಸಾರಾಂಶ

ಸಾಮಾನ್ಯವಾಗಿ ಮೇಕೆಗಳು ಎತ್ತರ ಪ್ರದೇಶ ಏರುತ್ತವೆ. ಆದರೆ ಇಲ್ಲೊಂದು ಮೇಕೆ ಕರೆಂಟ್ ಕಂಬವನ್ನೇ ಏರಿ ನಿಂತಿರುವ ವಿಡಿಯೋ ವೈರಲ್ ಆಗಿದೆ. ಇದು ನಿಜವೋ ಸುಳ್ಳೋ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ಸಾಮಾನ್ಯವಾಗಿ ಮೇಕೆಗಳು/ಆಡುಗಳು ಎತ್ತರ ಪ್ರದೇಶಗಳನ್ನು ಸುಲಭವಾಗಿ ಏರುತ್ತವೆ. ಆದರೆ ಕರೆಂಟ್ ಕಂಬ ಏರುವುದು ಎಂದ್ರೆ ಸುಮ್ನೆ ಅಲ್ಲ, ನಂಬಲು ಅಸಾಧ್ಯ ಎನಿಸಿದರು ಇಲ್ಲೊಂದು ಕಡೆ ಮೇಕೆಯೊಂದು ಕರೆಂಟ್ ಕಂಬವನ್ನು ಏರಿ ನಿಂತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಆದರೆ ಈ ಘಟನೆ ಎಲ್ಲಿ ನಡೆದಿರುವುದು ಎಂಬ ಬಗ್ಗೆ ಮಾಹಿತಿ ಇಲ್ಲ, ಅಲ್ಲದೇ ಕೆಲವರು ಇದು ನಕಲಿ ಎಐ ವೀಡಿಯೋ ಎಂದು ಹೇಳುತ್ತಿದ್ದಾರೆ.

ಆದರೆ ಐರಲ್ ಆದ ವೀಡಿಯೋದಲ್ಲಿ ಎತ್ತರದಲ್ಲಿರುವ ಕರೆಂಟ್ ಕಂಬ ಏರಿದ ಮೇಕೆಯೊಂದು ಅಲ್ಲಿ ಏನೋ ಜಗ್ಗಿಯುತ್ತಾ ಸ್ಥಿರವಾಗಿ ನಿಂತಿರುವುದು ಕಂಡು ಬಂದಿದೆ. ಕರೆಂಟ್‌ ವೈರ್‌ನಲ್ಲಿ ಹಬ್ಬಿರುವ ಬಳ್ಳಿಯೊಂದನ್ನು ಅದು ಮೇಯುತ್ತಿರುವುದು ಕಂಡು ಬಂದಿದೆ. rareindianclips ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, 47 ಸಾವಿರಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ವೀಡಿಯೋ ನೋಡಿ ಕುತೂಹಲದಿಂದ ಅನೇಕರು ಆ ಮೇಕೆ ಅಲ್ಲಿಗೆ ಹೋಗಿದ್ದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. 

ಕರೆಂಟ್ ವೈರ್‌ಗಳ ಮೇಲೆ ಯಾವುದೇ ಶ್ರಮವಿಲ್ಲದೇ ಈ ಮೇಕೆ ಸಮತೋಲನ ಸಾಧಿಸಿದ್ದು, ಆತ್ಮವಿಶ್ವಾಸದಿಂದ ಅಲ್ಲಿ ಆಹಾರವನ್ನು ಸೇವಿಸುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು. ವೀಡಿಯೋದ ಆರಂಭದಲ್ಲಿ ಜನರು ಓಡಾಡುತ್ತಿರುವ ರಸ್ತೆಯೊಂದನ್ನು ತೋರಿಸುತ್ತಿದ್ದು, ಬಳಿಕ ಕರೆಂಟ್ ಕಂಬದ ಮೇಲೆ ನಿಂತು ಮೇಯುತ್ತಿರುವ ಮೇಕೆಯನ್ನು ಪೋಕಸ್ ಮಾಡಲಾಗಿದೆ. ಅಪರಿಚಿತರು ಯಾರೋ ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ. 

ಈ ವೀಡಿಯೋ ನಿಜವೇ? 
ಮೇಕೆಗಳು ಗೋಡೆ, ಕಟ್ಟಡ, ಮರಗಳು, ಬೆಟ್ಟಗಳನ್ನು ಸುಲಭವಾಗಿ ಏರುವುದಕ್ಕೆ ಹೆಸರುವಾಸಿಯಾಗಿವೆ. ಆದರೆ ಕರೆಂಟ್ ಕಂಬ ಏರಿದ್ದು ಹೇಗೆ ಎಂಬುದೇ ಅಚ್ಚರಿ, ಕೆಳಗಿನ ಬೀದಿ ಜನರು ಮತ್ತು ವಾಹನಗಳಿಂದ ತುಂಬಿದ್ದರೂ, ಮೇಲಿರುವ ಮೇಕೆಯನ್ನು ಯಾರೂ ಗಮನಿಸದೇ ಇರುವುದನ್ನು ನೋಡಿದರೆ ಇದು ಫೇಕ್ ಆಗಿರಬಹುದೇ ಎಂಬ ಅನುಮಾನ ಮೂಡಿಸುತ್ತದೆ. ಆದರೆ ಕಾಮೆಂಟ್‌ನಲ್ಲಿ ಜನ ಕೆಲವರು ಇದು ನಿಜವಾದ ಗೋಟ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಅಷ್ಟು ಮೇಲೆ ಹೋಗಿದ್ದಾದರೂ ಹೇಗೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಿದ್ರೆ ಈ ವೀಡಿಯೋ ರಿಯಲ್ಲಾ ಫೇಕಾ, ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ ಎಂದಿಗೂ ಶಾಂತಿ ಪರ : ಪುಟಿನ್‌ಗೆ ಮೋದಿ
ಇಂಡಿಗೋ ಸಮಸ್ಯೆ : ಏರ್‌ಲೈನ್‌ಗಳಿಗೆ ವಿಧಿಸಿದ್ದ ಕಠಿಣ ಆದೇಶ ರದ್ದು