Pawar Meeting With Ministers ಹಂಗಾಮಿ ಸಿಎಂ ಆದ್ರಾ ಶರದ್ ಪವಾರ್? ಠಾಕ್ರೆ ಅನುಪಸ್ಥಿತಿಯಲ್ಲಿ ಮಹಾ ಮಂತ್ರಿಗಳ ಜೊತೆ ಸಭೆ!

Published : Jan 11, 2022, 12:10 PM ISTUpdated : Jan 11, 2022, 12:15 PM IST
Pawar Meeting With Ministers ಹಂಗಾಮಿ ಸಿಎಂ ಆದ್ರಾ ಶರದ್ ಪವಾರ್? ಠಾಕ್ರೆ ಅನುಪಸ್ಥಿತಿಯಲ್ಲಿ ಮಹಾ ಮಂತ್ರಿಗಳ ಜೊತೆ ಸಭೆ!

ಸಾರಾಂಶ

ಸಿಎಂ ಉದ್ಧವ್ ಠಾಕ್ರೆ ಗೈರು, ಶರದ್ ಪವಾರ್ ನೇತೃತ್ವದಲ್ಲಿ ಮಂತ್ರಿಗಳ ಸಭೆ ಇದು ಹೇಗೆ ಸಾಧ್ಯ? ಹಂಗಾಮಿ ಸಿಎಂ ಆದ್ರಾ ಶರದ್ ಪವಾರ್? ಸಂವಿಧಾನ ಅಪಾಯದಲ್ಲಿದೆ ಎಂದು ಮಾತನಾಡುವವರು ಎಲ್ಲಿ ಹೋದರು? ಶರದ್ ಪವಾರ್ ನಡೆ ವಿರುದ್ಧ ಬಿಜೆಪಿ ಕಿಡಿ

ಮುಂಬೈ(ಜ.11): ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಯ ಮಹಾ ವಿಕಾಸ್ ಅಘಾಡಿ(Maha Vikas Aghadi) ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ಇಲ್ಲಿ ಹೆಸರಿಗೆ ಮಾತ್ರ ಉದ್ಧವ್ ಠಾಕ್ರೆ(Uddhav Thackeray) ಮುಖ್ಯಮಂತ್ರಿ, ಅಸಲಿ ಮುಖ್ಯಮಂತ್ರಿ ಎನ್‌ಸಿಪಿ ಪಕ್ಷದ ನಾಯಕ ಶರದ್ ಪವಾರ್(Sharad Pawar) ಅನ್ನೋ ಮಾತನ್ನು ಬಿಜೆಪಿ ಸೇರಿದಂತೆ ಹಲವರು ಪದೇ ಪದೇ ಹೇಳಿ ಕುಟುಕಿದ್ದಾರೆ. ಇದೀಗ ಈ ಹೇಳಿಕೆಗೆ ಬಲವಾದ ಸಾಕ್ಷ್ಯ ಸಿಕ್ಕಿದೆ. ಸಿಎಂ ಉದ್ದವ್ ಠಾಕ್ರೆ ಅನುಪಸ್ಥಿತಿಯಲ್ಲಿ ಶರದ್ ಪವಾರ್ ಮಹಾರಾಷ್ಟ್ರ ಮಂತ್ರಿಗಳ(Meetings with Ministers) ಸಭೆ ನಡೆಸಿದ್ದಾರೆ. ಇದನ್ನು ಬಿಜೆಪಿ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ. 

ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಶರದ್ ಪವಾರ್ ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿಲ್ಲ. ಪವಾರ್ ಮಹಾ ವಿಕಾಸ್ ಅಘಾಡಿ ಮೈತ್ರಿ ಪಕ್ಷಗಳಲ್ಲಿ ಒಂದಾಗಿರುವ NCP ಪಕ್ಷದ ಮುಖ್ಯಸ್ಥ. ಹೀಗಾಗಿ ಮಹಾರಾಷ್ಟ್ರ ಮಂತ್ರಿಗಳ ಜೊತೆ ಸಭೆ ಅಧ್ಯಕ್ಷತೆ ವಹಿಸಲು ಹೇಗೆ ಸಾಧ್ಯ? ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡೆಸಬೇಕಾದ ಸಭೆಯನ್ನು ಶರದ್ ಪವಾರ್ ಯಾವ ಅಧಿಕಾರದಲ್ಲಿ ನಡೆಸಿದ್ದಾರೆ?  ಈ ಪ್ರಶ್ನೆ ಇದೀಗ ಬಿಜೆಪಿ ಸೇರಿದಂತೆ ಹಲವರು ಎತ್ತಿದ್ದಾರೆ. ಈ ಕುರಿತು ಮಹಾರಾಷ್ಟ್ರ ಬಿಜೆಪಿ ವಕ್ತಾರ, ಘಾಟ್‌ಕೂಪರ್ ಕ್ಷೇತ್ರದ ಶಾಸಕ ರಾಮ್ ಕದಮ್ ಟ್ವಿಟರ್ ಮೂಲಕ ಪ್ರಶ್ನಿಸಿದ್ದಾರೆ.

ಮೋದಿ ಮೈತ್ರಿ ನಿರಾಕರಿಸಿದ್ದೆ: ಪವಾರ್ ಹೇಳಿಕೆಯಿಂದ ಭಾರೀ ಸಂಚಲನ!

ಶರದ್ ಪವರ್ ಮಹಾರಾಷ್ಟ್ರ ಸರ್ಕಾರದ ಹಂಗಾಮಿ ಮುಖ್ಯಮಂತ್ರಿಯೇ? ಸಿಎಂ ಉದ್ದವ್ ಠಾಕ್ರೆ ಅನುಪಸ್ಥಿತಿಯಲ್ಲಿ ಪವಾರ್ ಮಹಾ ಅಘಾಡಿ ವಿಕಾಸ್ ಸರ್ಕಾದ ಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ. ಯಾವ ಅಧಿಕಾರದ ಮೇಲೆ ಶರದ್ ಪವಾರ್ ಮಂತ್ರಿಗಳ ಸಭೆ ನಡೆಸಿದ್ದಾರೆ ಎಂದು ರಾಮ್ ಕದಮ್ ಪ್ರಶ್ನಿಸಿದ್ದಾರೆ. ಜೊತೆಗೆ ಸಭೆಯ ವಿಡಿಯೋ ಪೋಸ್ಟ್ ಮಾಡಿದ್ದು ಇದೀಗ ಪವಾರ್ ಹಾಗೂ ಮಹಾ ಅಘಾಡಿ ವಿಕಾಸ್ ಸರ್ಕಾರ ಸತತ ಟೀಕೆ, ಪ್ರಶ್ನೆ ಎದುರಿಸುವಂತಾಗಿದೆ.

 

ರಾಮ್ ಕದಮ್ ವಿಡಿಯೋ ಹಾಗೂ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಖ್ಯಾತ ಪತ್ರಕರ್ತ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಈಗ ಯಾರು ಸಂವಿಧಾನ ಅಪಾಯದಲ್ಲಿದೆ ಎಂದು ಮಾತನಾಡುತ್ತಿಲ್ಲ. ಸಂವಿಧಾನಿಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಯಾರ ಬಾಯಿಯಿಂದಲೂ ಕೇಳುತ್ತಿಲ್ಲ. ಕಾರಣ ಶರದ್ ಪವಾರ್. ಪತ್ರಕರ್ತ ಅಭಿಷೇಕ್ ಬ್ಯಾನರ್ಜಿ ಇದನ್ನು ಲಿಬರಲ್ ಪ್ರಿವಿಲೇಜ್ ಎಂದು ಕರೆಯುತ್ತಾರೆ  ಎಂದು ಟ್ವೀಟ್ ಮೂಲಕ ಅಣಕಿಸಿದ್ದಾರೆ.

 

Mamata Banerjee meets Sharad Pawar: ಯುಪಿಎ ಈಗ ಇಲ್ಲವೇ ಇಲ್ಲ: ಕಾಂಗ್ರೆಸ್‌ಗೆ ಮಮತಾ ಶಾಕ್‌!

ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಹಾಗೂ ಹಲವು ಮಾಧ್ಯಮಗಳಿಂದ ಸತತವಾಗಿ ಸಂವಿಧಾನ ಅಪಾಯದಲ್ಲಿದೆ ಅನ್ನೋ ಟೀಕೆ ಎದುರಿಸಿದೆ. ಕೇಂದ್ರದ ಹಲವು ಐತಿಹಾಸಿಕ ನಿರ್ಧಾರಗಳನ್ನು ಅಧಿಕಾರ ದುರ್ಬಳಕೆ, ಸಾಂವಿಧಾನಿಕ ಬಿಕ್ಕಟ್ಟು ಎಂಬ ರೀತಿಯಲ್ಲಿ ಬಿಂಬಿಸಲಾಗಿತ್ತು. ಆರ್ಟಿಕಲ್ 370 ರದ್ದು ಸೇರಿದಂತೆ ಹಲವು ಯೋಜನೆಗಳ ಜಾರಿ ವೇಳೆ ಬಿಜೆಪಿ ಈ ಟೀಕೆ ಎದುರಿಸಿದೆ. ಆದರೆ ನಿಜವಾಗಿ ಶರದ್ ಪವಾರ್ ಸರ್ಕಾರದಲ್ಲಿ ಯಾವುದೇ ಹುದ್ದೆ ಹೊಂದಿಲ್ಲ, ಆದರೂ ಸಭೆ ನಡೆಸುವುದು ಸಂವಿಧಾನಿಕ ಬಿಕ್ಕಟ್ಟು ಎಂದು ಹಲವರು ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆನ್ನಿಗೆ ಚೂರಿ ಇರಿಯುವ ಪವಾರ್ ನಮ್ಮ ಗುರುವಾಗಲು ಸಾಧ್ಯವಿಲ್ಲ: ಶಿವಸೇನೆ ನಾಯಕ!

ಮಹಾರಾಷ್ಟ್ರ ಸರ್ಕಾರದಲ್ಲಿ ಶರದ್ ಪವಾರ್ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಅನ್ನೋ ಆರೋಪ ಮೈತ್ರಿ ಸರ್ಕಾರ ರಚನೆಯಾದ ಬಳಿಕ ಪದೆ ಪದೆ ಕೇಳಿಬರುತ್ತಿದೆ. ಪ್ರತಿ ನಿರ್ಧಾರದ ಹಿಂದೆ ಶರದ್ ಪವಾರ್ ಮಾತೇ ಅಂತಿಮ ಅನ್ನೋ ಆರೋಪಗಳು ಬಲವಾಗಿದೆ. ಇದರ ನಡುವೆ ಇದೀಗ ಶರದ್ ಪವಾರ್ ಸಭೆ ನಡೆಸಿ ಈ ಆರೋಪಗಳಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!