
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ (Pahalgam)ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ, ಭಯೋತ್ಪಾದಕ (Terrorist)ರು ಅಮಾಯಕ ಪ್ರವಾಸಿಗರ ಮೇಲೆ ಗುಂಡು ಹಾರಿಸುವ ಮೊದಲು ಅವರ ಧರ್ಮ ಕೇಳಿದ್ರು. ಭಯೋತ್ಪಾದಕರ ಹೇಯ ಕೃತ್ಯ ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಈ ಮಧ್ಯೆ ಪ್ರಮುಖ ಕಾನೂನು ಪ್ರಶ್ನೆಯೊಂದನ್ನು ಈ ಘಟನೆ ಹುಟ್ಟು ಹಾಕಿದೆ. ಒಬ್ಬರ ಧರ್ಮ ಕೇಳುವುದು ಅಪರಾಧವೇ? ಅಪರಾಧವಾದ್ರೆ ಯಾವಾಗ ಮತ್ತು ಎಲ್ಲಿ ದೂರು ಸಲ್ಲಿಸಬೇಕು, ಅದಕ್ಕೆ ಶಿಕ್ಷೆ ಏನು ಎಂಬ ವಿವರ ಇಲ್ಲಿದೆ.
ಧರ್ಮ (religion) ಕೇಳುವುದು ಶಿಕ್ಷಾರ್ಹ ಅಪರಾಧವೇ? : ಭಾರತೀಯ ಕಾನೂನಿನ ಪ್ರಕಾರ, ಧರ್ಮವನ್ನು ಕೇಳುವುದು ಮೂಲಭೂತವಾಗಿ ಅಪರಾಧವಲ್ಲ. ಆದ್ರೆ ಆತ ಯಾವ ಭಾವನೆಯನ್ನು ಹೊಂದಿದ್ದಾನೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಒಬ್ಬ ವ್ಯಕ್ತಿ ಧರ್ಮದ ಬಗ್ಗೆ ಕೇಳುವ ಉದ್ದೇಶ, ಅವನ ಧಾರ್ಮಿಕ ಭಾವನೆಗಳನ್ನು ನೋಯಿಸುವುದು, ಸಮಾಜದಲ್ಲಿ ತಾರತಮ್ಯವನ್ನು ಹರಡುವುದು, ದ್ವೇಷವನ್ನು ಪ್ರಚೋದಿಸುವುದು ಅಥವಾ ಹಿಂಸೆಯನ್ನು ಹೆಚ್ಚಿಸುವುದಾಗಿದ್ದರೆ ಭಾರತೀಯ ಕಾನೂನಿನ ಅಡಿಯಲ್ಲಿ ಇದು ಗಂಭೀರ ಅಪರಾಧವಾಗುತ್ತದೆ.
ಪಹಲ್ಗಾಮ್ ದಾಳಿ ಬಳಿಕ ಮದ್ವೆಗೂ ಮುನ್ನ ಮಹತ್ವದ ನಿರ್ಧಾರ ತೆಗೆದುಕೊಂಡ ಮುಸ್ಲಿಂ ಜೋಡಿ!
ಎಲ್ಲಿ ದೂರು ಸಲ್ಲಿಸ್ಬೇಕು? : ಯಾರಾದ್ರೂ ನಿಮ್ಮ ಧರ್ಮದ ಬಗ್ಗೆ ಕೇಳುವ ಮೂಲಕ ನಿಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದರೆ ಅಥವಾ ತಾರತಮ್ಯ ಅಥವಾ ಹಿಂಸೆಯನ್ನು ಹರಡಲು ಪ್ರಯತ್ನಿಸುತ್ತಿದ್ದರೆ, ನೀವು ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ಸಲ್ಲಿಸ್ಬೇಕು. ನಿಮ್ಮ ದೂರಿನಲ್ಲಿ ಘಟನೆಯ ವಿವರ, ದಿನಾಂಕ, ಸಮಯ, ಸ್ಥಳ ಮತ್ತು ಯಾರಾದರೂ ಸಾಕ್ಷಿಗಳಿದ್ದರೆ ಸ್ಪಷ್ಟವಾಗಿ ನಮೂದಿಸಬೇಕು. ಘಟನೆಗೆ ಸಂಬಂಧಿಸಿದಂತೆ ನಿಮ್ಮ ಬಳಿ ಯಾವುದೇ ಪುರಾವೆಗಳಿದ್ದರೆ ರೆಕಾರ್ಡಿಂಗ್ ಅಥವಾ ಫೋಟೋ ಇದ್ರೆ ಅದನ್ನು ನಮೂದಿಸಬೇಕು.
ಪೊಲೀಸರು ದೂರ ದಾಖಲಿಸದಿದ್ರೆ ಏನು ಮಾಡ್ಬೇಕು? : ಇದನ್ನು ಅತ್ಯಂತ ಸೂಕ್ಷ್ಮ ವಿಷ್ಯ. ಒಂದ್ವೇಳೆ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ರೆ, ಭರವಸೆ ಕಳೆದುಕೊಳ್ಬೇಡಿ. ತಕ್ಷಣ ಪೊಲೀಸ್ ವರಿಷ್ಠಾಧಿಕಾರಿ (SP) ಅಥವಾ ಉಪ ಪೊಲೀಸ್ ಆಯುಕ್ತ (DCP) ರಂತಹ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ನಿಮ್ಮ ದೂರನ್ನು ಅವರಿಗೆ ನೀಡಿ. ಇದಲ್ಲದೆ, ಅನೇಕ ರಾಜ್ಯಗಳಲ್ಲಿ ಎಫ್ಐಆರ್ ನೋಂದಾಯಿಸಲು ಆನ್ಲೈನ್ ಪೋರ್ಟಲ್ಗಳು ಸಹ ಲಭ್ಯವಿದೆ. ಅಲ್ಲಿ ನೀವು ದೂರು ದಾಖಲಿಸಬೇಕು.
ಸಿಬ್ಬಂದಿ ಹೇಳಲ್ಲ, ಹೆಚ್ಚಿನವರಿಗೆ ತಿಳಿದಿಲ್ಲ; ವಿಮಾನ ಪ್ರಯಾಣದಲ್ಲಿದೆ
ಆನ್ಲೈನ್ನಲ್ಲಿ ದೂರು ದಾಖಲಿಸುವ ಪ್ರಕ್ರಿಯೆ : ಯಾವುದೇ ರಾಜ್ಯ ಪೋರ್ಟಲ್ನಲ್ಲಿ ದೂರು ಸಲ್ಲಿಸಿದ ನಂತರವೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ನೀವು ಕೇಂದ್ರ ಮಟ್ಟದ ಪೋರ್ಟಲ್ನಲ್ಲಿ ಅಂದರೆ ಕೇಂದ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (CPGRAMS) ನಲ್ಲಿಯೂ ದೂರು ಸಲ್ಲಿಸಬಹುದು. pgportal.gov.in. ಆನ್ಲೈನ್ ಪೋರ್ಟಲ್ನಲ್ಲಿ ದೂರು ದಾಖಲಿಸಲು ಅವಕಾಶವಿದೆ. ಫಾರ್ಮ್ ಭರ್ತಿ ಮಾಡಿ, ಯಾವುದೇ ಸಾಕ್ಷ್ಯವಿದ್ದರೆ ಅಪ್ಲೋಡ್ ಮಾಡಬೇಕು.
ಮತ್ತೆಲ್ಲಿ ದೂರು ದಾಖಲಿಸಲು ಅವಕಾಶ ಇದೆ? : ಪೊಲೀಸರನ್ನು ಹೊರತುಪಡಿಸಿ ನೀವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC - nhrc.nic.in) ಅಥವಾ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸಬಹುದು. ಇದಕ್ಕಾಗಿ ನೀವು ಆನ್ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬಹುದು ಅಥವಾ ನಿಮ್ಮ ದೂರನ್ನು ಅಂಚೆ ಮೂಲಕ ಕಳುಹಿಸಬಹುದು. ಮಹಿಳೆ ಧರ್ಮವನ್ನು ಕೇಳಿ, ಕಿರುಕುಳ ನೀಡಿದ್ದರೆ, ಅವಳು ರಾಷ್ಟ್ರೀಯ ಮಹಿಳಾ ಆಯೋಗ (NCW - ncw.nic.in) ಅಥವಾ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಬಹುದು. ಬಲಿಪಶು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದರೆ, ಅವನು/ಅವಳು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ (NCM - ncm.nic.in) ದೂರು ಸಲ್ಲಿಸಬಹುದು.
ಯಾವ ಶಿಕ್ಷೆ ನೀಡಲಾಗುತ್ತದೆ? : ಬೇರೆ ಬೇರೆ ಕಾರಣಕ್ಕೆ ಶಿಕ್ಷೆ ಬೇರೆಯಾಗಿರುತ್ತದೆ. ಧರ್ಮ ಅಥವಾ ಜಾತಿಯ ಬಗ್ಗೆ ಕೇಳುವ ಮೂಲಕ ದ್ವೇಷವನ್ನು ಹರಡುವುದು ಉದ್ದೇಶವಾಗಿದ್ದರೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 196 ರ ಅಡಿಯಲ್ಲಿ, ಮೂರರಿಂದ ಐದು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. ಧರ್ಮದ ಬಗ್ಗೆ ಕೇಳುವ ಹಿಂದಿನ ಉದ್ದೇಶ ಯಾರನ್ನಾದರೂ ಅವಮಾನಿಸುವುದಿದ್ದರೆ, ಬಿಎನ್ಎಸ್ನ ಸೆಕ್ಷನ್ 197 ರ ಅಡಿಯಲ್ಲಿ, ಶಿಕ್ಷೆಯು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. ಯಾರಾದರೂ ನಿಮ್ಮ ಧರ್ಮದ ಬಗ್ಗೆ ಕೇಳಿ ನಿಮಗೆ ಬೆದರಿಕೆ ಹಾಕಿದರೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 351(2) ರ ಅಡಿಯಲ್ಲಿ ನಿಮಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ