ಅಮ್ಮ ಕೆರೆಗೆಸೆದ ಮಗುವನ್ನು ರಕ್ಷಿಸಿದ ಲಿಲ್ಲಿಗಿಡಗಳು... ಬರೇಲಿಯಲ್ಲೊಂದು ಪವಾಡಸದೃಶ ಘಟನೆ

Published : Mar 04, 2023, 02:00 PM IST
ಅಮ್ಮ ಕೆರೆಗೆಸೆದ ಮಗುವನ್ನು ರಕ್ಷಿಸಿದ ಲಿಲ್ಲಿಗಿಡಗಳು... ಬರೇಲಿಯಲ್ಲೊಂದು ಪವಾಡಸದೃಶ ಘಟನೆ

ಸಾರಾಂಶ

ಹುಟ್ಟಿಸಿದಾತ ಹುಲ್ಲು ಮೇಯಿಸಲಾರ ಎಂಬ ಲೋಕೋಕ್ತಿಯಂತೆ ತಾಯಿ ಮಗುವನ್ನು ತ್ಯಜಿಸಿದರೂ ಕೆರೆಯಲ್ಲಿದ್ದ ಲಿಲ್ಲಿ ಹೂವಿನ ಗಿಡದಿಂದಾಗಿ ಮಗು ನೀರಲ್ಲಿ ಮುಳುಗದೇ ರಕ್ಷಿಸಲ್ಪಟ್ಟಿದೆ. 

ಉತ್ತರಪ್ರದೇಶದ ಬುದೌನ್ (Budaun) ಜಿಲ್ಲೆಯಲ್ಲಿ ನಡೆದಿದೆ   20 ಅಡಿ ಆಳದ ಒಣಗಿದ ಕೆರೆಯಲ್ಲಿ ಒಂದು ವಾರ ಪ್ರಾಯದ ಗಂಡು ಮಗುವೊಂದು ಪತ್ತೆಯಾದ ಘಟನೆ ಮಾಸುವ ಮೊದಲೇ ಬರೇಲಿ (Bareilly) ಜಿಲ್ಲೆಯ ಖತುವಾ (Khataua) ಗ್ರಾಮದಲ್ಲಿ ಕೆರೆಗೆ ಎಸೆಯಲ್ಪಟ್ಟ ಎರಡು ದಿನಗಳ ಮಗುವೊಂದು ಜೀವಂತವಾಗಿ ಉಳಿದು ಅಚ್ಚರಿ ಮೂಡಿಸಿದೆ.  ಹುಟ್ಟಿಸಿದಾತ ಹುಲ್ಲು ಮೇಯಿಸಲಾರ ಎಂಬ ಲೋಕೋಕ್ತಿಯಂತೆ ತಾಯಿ ಮಗುವನ್ನು ತ್ಯಜಿಸಿದರೂ ಕೆರೆಯಲ್ಲಿದ್ದ ಲಿಲ್ಲಿ ಹೂವಿನ ಗಿಡದಿಂದಾಗಿ ಮಗು ನೀರಲ್ಲಿ ಮುಳುಗದೇ ರಕ್ಷಿಸಲ್ಪಟ್ಟಿದೆ. 

ದೇಹ ಮುಳುಗಿದ್ದು, ಮಗುವಿನ ತಲೆ ಮಾತ್ರ ನೀರಿನಲ್ಲಿ ಕಾಣಿಸುತ್ತಿದ್ದಿದ್ದನ್ನು ನೋಡಿದ ಸ್ಥಳೀಯ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಗುವಿನ ರಕ್ಷಣೆ ಮಾಡಿದ್ದಾರೆ. ಇದಕ್ಕೂ ಮೊದಲು 15 ಅಡಿ ಅಳದ ಈ ಕೆರೆಯಲ್ಲಿ ಇದ್ದ ಲಿಲ್ಲಿ ಗಿಡಗಳು ಮಗುವನ್ನು ಮುಳುಗದಂತೆ ರಕ್ಷಿಸಿವೆ. ಅವುಗಳ ಕಾರಣದಿಂದಾಗಿ ಮಗು ನೀರಿನಲ್ಲಿ ಮುಳಗದೇ ಪಾರಾಗಿದೆ. 

ನಂತರ ಮಗುವನ್ನು ರಕ್ಷಿಸಿದ ಪೊಲೀಸರು ನವಾಬ್‌ಗಂಜ್‌ನಲ್ಲಿರುವ ಸ್ಥಳೀಯ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಮಗುವಿನ ದೇಹದಲ್ಲಿ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಗುರುವಾರ ಸಂಜೆ ಗ್ರಾಮದ ಮಾಜಿ ಮುಖ್ಯಸ್ಥ ವಕೀಲ್ ಅಹ್ಮದ್ (Vakeel ahmed) ಎಂಬಾತ ತಮ್ಮ ಜಮೀನಿಗೆ ಹೋಗುತ್ತಿದ್ದಾಗ ಸಮೀಪದ ಕೆರೆಯಲ್ಲಿದ್ದ ಮಗು ಅವರ ಗಮನಕ್ಕೆ ಬಂದಿದ್ದು,  ನಂತರ ಮಗುವನ್ನು ರಕ್ಷಿಸಲಾಗಿದೆ. ಈ ವಿಚಾರ ತಿಳಿದು ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು, ಮಗು ಲಿಲ್ಲಿ ಗಿಡದ ಮಧ್ಯೆ ತೇಲುತ್ತಿರುವ ವಿಡಿಯೋ ವೈರಲ್ ಆಗಿದೆ. 

Tamil Nadu: ಮಗುವಿಗೆ ಜನ್ಮ ನೀಡಿ ಪೊದೆಯಲ್ಲಿ ಬಿಸಾಡಿದ 11ನೇ ಕ್ಲಾಸ್‌ ಬಾಲಕಿ: 10ನೇ ತರಗತಿ ಬಾಲಕ ಸೆರೆ

ಘಟನೆಗೆ ಸಂಬಂಧಿಸಿದಂತೆ ಹೆಚ್ಚುವರಿ ಎಸ್‌ಪಿ ರಾಜ್‌ಕುಮಾರ್ ಅಗರ್ವಾಲ್ (Rajkumar agarwal) ಪ್ರತಿಕ್ರಿಯಿಸಿದ್ದು, ತಾಯಿ ಎಸೆದರು ಅದರಷ್ಟವಂತ ಮಗು ಲಿಲ್ಲಿಗಿಡಗಳಿಂದಾಗಿ ನೀರಿದ್ದ ಕೆರೆಯಲ್ಲಿ ಮುಳುಗದೇ ಉಳಿದಿದೆ. ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗಿದೆ. ನಂತರ ಮಗುವನ್ನು ಬರೇಲಿಯಲ್ಲಿರುವ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಮಗುವಿನ ಪೋಷಕರಿಗಾಗಿ 72 ಗಂಟೆಗಳ ಕಾಲ ಕಾಯುತ್ತೇವೆ. ಒಂದು ವೇಳೆ ಬಾರದೇ ಇದ್ದಲ್ಲಿ ನಿಯಮದಂತೆ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದರು.  ಹೀಗೆ ನೀರಿನಲ್ಲಿ ಸಿಕ್ಕ ಮಗುವಿಗೆ ಗಂಗಾ ಎಂದು ಹೆಸರಿಡಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ದಿನೇಶ್ ಚಂದ್ರ (Dinesh chandra) ಹೇಳಿದರು. 

ಒಟ್ಟಿನಲ್ಲಿ ತಾಯಿ ಬೇಡವೆಂದು ಮಗುವನ್ನು ದೂರ ಎಸೆದರು ಕಾಣದ ಯಾವುದೋ ಅಗೋಚರ ಶಕ್ತಿಯೊಂದು ಲಿಲ್ಲಿ ಗಿಡದ ರೂಪದಲ್ಲಿ ಮಗುವನ್ನು ರಕ್ಷಿಸಿದೆ. ಆದರೆ ತಾನು ಮಾಡದ ತಪ್ಪಿಗೆ ಮಗುವೊಂದು ಅನಾಥವಾಗಿರುವುದು ಬೇಸರ ಮೂಡಿಸುತ್ತದೆ. 

ಹೆತ್ತಮ್ಮಳಿಗೆ ಬೇಡವಾದ ಕಂದ ಖಾಕಿ ಮಡಿಲಲ್ಲಿ ಅದೆಷ್ಟು ಚೆಂದ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್